ಪ್ರೇಮಿಗಳ ದಿನಕ್ಕೆ ಭುವನಂ ಗಗನಂ; ಪೃಥ್ವಿ ಅಂಬರ್​, ಪ್ರಮೋದ್​ ನಟಿಸಿರುವ ಫ್ಯಾಮಿಲಿ ಡ್ರಾಮಾ

blank

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

“ದಿಯಾ’, “ಜೂನಿ’, “ಮತ್ಸ್ಯಗಂಧ’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಪೃಥ್ವಿ ಅಂಬರ್​ ಮತ್ತು “ಗೀತಾ ಬ್ಯಾಂಗಲ್​ ಸ್ಟೋರ್​’, “ರತ್ನನ್​ ಪ್ರಪಂಚ’, “ಇಂಗ್ಲೀಷ್​ ಮಂಜ’ ಖ್ಯಾತಿಯ ಪ್ರಮೋದ್​ ಪಂಜು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ “ಭುವನಂ ಗಗನಂ’. “ರಾಜರು’ ನಿರ್ದೇಶಕ ಗಿರೀಶ್​ ಮೂಲಿಮನಿ ಆ್ಯಕ್ಷನ್​-ಕಟ್​ ಹೇಳಿರುವ ಈ ಫ್ಯಾಮಿಲಿ ಡ್ರಾಮಾ ಪ್ರೇಮಿಗಳ ದಿನದಂದು ತೆರೆಗೆ ಬರಲು ಸಿದ್ಧವಾಗಿದೆ.

ಪ್ರೇಮಿಗಳ ದಿನಕ್ಕೆ ಭುವನಂ ಗಗನಂ; ಪೃಥ್ವಿ ಅಂಬರ್​, ಪ್ರಮೋದ್​ ನಟಿಸಿರುವ ಫ್ಯಾಮಿಲಿ ಡ್ರಾಮಾ

“ಇಬ್ಬರು ನಾಯಕರಿರುವ ಈ ಚಿತ್ರದ ಕಥೆ ಎರಡು ಟ್ರ್ಯಾಕ್​ಗಳಲ್ಲಿ ಸಾಗುತ್ತಾ, ಒಂದು ಹಂತದಲ್ಲಿ ಜತೆಯಾಗುತ್ತದೆ. ಅದಕ್ಕೆ ಕಾರಣವೇನು? ಮುಂದೇನು ಎಂಬುದೇ ಸಿನಿಮಾದ ಹೈಲೈಟ್​. ಹಲವು ಹೊಸತನಗಳಿಂದ ಕೂಡಿರುವ ಚಿತ್ರ’ ಎಂದು ಮಾಹಿತಿ ನೀಡುತ್ತಾರೆ ಗಿರೀಶ್​. ಪ್ರೀತಿ, ರೊಮ್ಯಾನ್ಸ್​, ಎಮೋಷನ್ಸ್​, ಭರ್ಜರಿ ಆ್ಯಕ್ಷನ್​ ಜತೆಗೆ ಕೌಟುಂಬಿಕ ಅಂಶಗಳಿರುವ ಈ ಚಿತ್ರವು ಹಳ್ಳಿ ಮತ್ತು ನಗರ ಎರಡು ಹಿನ್ನೆಲೆಯಲ್ಲಿ ನಡೆಯುವ ಕಥೆ ಹೊಂದಿದೆ.

ಪ್ರೇಮಿಗಳ ದಿನಕ್ಕೆ ಭುವನಂ ಗಗನಂ; ಪೃಥ್ವಿ ಅಂಬರ್​, ಪ್ರಮೋದ್​ ನಟಿಸಿರುವ ಫ್ಯಾಮಿಲಿ ಡ್ರಾಮಾ

ಪ್ರಮೋದ್​ಗೆ “ಲವ್​ ಮಾಕ್ಟೇಲ್​’ ಹುಡುಗಿ ರೇಚೆಲ್​ ಡೇವಿಡ್​ ನಾಯಕಿಯಾಗಿದ್ದು, ಪೃಥ್ವಿಗೆ ಮಲಯಾಳಿ ನಟಿ ಅಶ್ವಥಿ ಜೋಡಿಯಾಗಿದ್ದಾರೆ. ಉಳಿದಂತೆ ಅಚ್ಯುತ್​ ಕುಮಾರ್​, ಶರತ್​ ಲೋಹಿತಾಶ್ವ, ಪ್ರಕಾಶ್​ ತುಮ್ಮಿನಾಡು, ಶ್ರೀಧರ್​, ಹರಿಣಿ, ಸ್ಪರ್ಶ ರೇಖಾ ಪ್ರಮುಖ ತಾರಾಗಣದಲ್ಲಿದ್ದಾರೆ. ಮೈಸೂರು, ಹಾವೇರಿ, ಕುದುರೆಮುಖ, ಕಳಸ, ಕನ್ಯಾಕುಮಾರಿ, ಬೆಂಗಳೂರು ಸುತ್ತಮುತ್ತ ಶೂಟಿಂಗ್​ ನಡೆಸಲಾಗಿದೆ.

Share This Article

ಏಳನೇ ತಿಂಗಳಲ್ಲಿ ಹೆರಿಗೆಯಾದರೆ ಏನಾಗುತ್ತದೆ?; ಮಗುವಿನ ಆರೋಗ್ಯದ ಮೇಲಾಗುವ ಪರಿಣಾಮವೇನು.. ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಗರ್ಭಾವಸ್ಥೆಯಲ್ಲಿ ಮಗುವನ್ನು 9 ತಿಂಗಳುಗಳ ಕಾಲ ಇಟ್ಟುಕೊಳ್ಳುವುದು ಮುಖ್ಯ ಎಂದು ವೈದ್ಯರು ಸೇರಿದಂತೆ ಎಲ್ಲಾ ತಜ್ಞರು…

ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಬೇಕೇ?; ಅಡುಗೆಮನೆಯಲ್ಲಿನ ಈ 2 ವಸ್ತುಗಳನ್ನು ತಪ್ಪದೆ ಬಳಸಿ | Health Tips

ಇತ್ತೀಚಿನ ದಿನಗಳಲ್ಲಿ ಕಳಪೆ ಜೀವನಶೈಲಿ ಮತ್ತು ಅನಿಯಮಿತ ಆಹಾರ ಪದ್ಧತಿಯಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವ ಸಮಸ್ಯೆ…

ಚಳಿಗಾಲದಲ್ಲಿ ಹುಣಸೆಹಣ್ಣು ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? health benefits of tamarind

health benefits of tamarind : ನಮ್ಮ ದಿನನಿತ್ಯದ ಅಡುಗೆಯಲ್ಲಿ ಹುಣಸೆಹಣ್ಣನ್ನು ಬಳಸುವುದರಿಂದ ನಮಗೆ ಅರಿವಿಲ್ಲದೆಯೇ…