ಶಾಶ್ವತವಾಗಿ ಯೌವನದಲ್ಲಿ ಇರಲು ಮಗನ ರಕ್ತಕೋಶ ಪಡೆಯಲು ಸಿದ್ಧಳಾದ ಮಹಾತಾಯಿ; 47ರ ಮಹಿಳೆಯ ಇದೆಂಥಾ ಪ್ರಯೋಗ?

dk - 2025-01-03T172407.291
Published on

ನವದೆಹಲಿ: 47 ವರ್ಷದ ಮಹಿಳೆಯೊಬ್ಬರು ಶಾಶ್ವತವಾಗಿ ಯವೌನದಲ್ಲಿರಬೇಕು ಎಂದು ತಮ್ಮ 23 ವರ್ಷದ ಮಗನ ರಕ್ತದ ಕೋಶಗಳು ಪಡೆಯಲು ಮುಂದಾಗಿರುವ ವಿಲಕ್ಷಣ ಘಟನೆಯೊಂದು ವರದಿಯಾಗಿದೆ.

'ಮಾನವ ಬಾರ್ಬಿ' ಎಂದೇ ಖ್ಯಾತಿ ಪಡೆದಿರುವ ಮಾರ್ಸೆಲಾ ಇಗ್ಲೇಷಿಯಸ್​​ ಈ ಹೊಸ ಪ್ರಕ್ರಿಯೆಗೆ ಮುಂದಾಗಿರುವ ಮಹಿಳೆ. ಈಕೆ ಇದುವರಿಗೂ ಸೌಂದರ್ಯ ವರ್ದಕ ವಿಧಾನಗಳಿಗಾಗಿ 80 ಸಾವಿರ ಯುರೋ ಅಂದರೆ 70 ಲಕ್ಷ ರೂ.ಗಳು ಖರ್ಚು ಮಾಡಿದ್ದಾರೆ. ಈಕೆಯ ಸೌಂದರ್ಯದ ಹಾಗೇ ಉಳಿಯುಸ ಸಲುವಾಗಿ ತೀರಾ ಪ್ರಮಾಣಕಾರಲ್ಲದ, ಚುಚ್ಚುಮದ್ದುನ್ನೇ ಆಯ್ಕೆ ಮಾಡಿಕೊಂಡಿದ್ದಾಳೆ. ಇದೀಗ 2025ಕ್ಕೆ ಹೊಸ ಪ್ರಯೋಗವನ್ನು ಆಯ್ಕೆ ಮಾಡಿಕೊಂಡಿದ್ದು, ಇದರಲ್ಲಿ ಯಶಸ್ವಿಯಾಗುತ್ತೇನೆ ಎಂದು ತಾನೇ ಘೋಷಿಸಿದ್ದಾಳೆ ಎಂದು ವರದಿಯಾಗಿದೆ.

ವಯಸ್ಸು ಆಗುವುದನ್ನು ತಡೆಯುವ ಉದ್ದೇಶವಿದ್ದು, ಇದನ್ನು ವಿಜ್ಞಾನಲೋಕದಲ್ಲಿ 'ರಿವರ್ಸ್​ ಟ್ರಾನ್ಸ್​ಫಾರ್ಮೆಷನ್' ಎಂದು ಕರೆಯುತ್ತಾರೆ. ಪ್ರಯೋಗದಲ್ಲಿ ಯುವ ದಾನಿಗಳ ರಕ್ತವು ಜೀವಕೋಶಗಳನ್ನು ಪುನರುಜ್ಜೀವನಗೊಳಸಿಸುತ್ತದೆ ಎಂದು ಪ್ರತಿಪಾದಿಸಲಾದೆ. ಇದನ್ನೇ ಪೂರಕವಾಗಿ ಇಟ್ಟುಕೊಂಡು ಮಾನವ ಬಾರ್ಬಿ ತಮ್ಮ ಮಗ ರೋಡ್ರಿಗೋನಿಂದ ರಕ್ತ ಪಡೆಯುವ ಮೂಲಕ ಈ ಹೊಸ ಕಾರ್ಯಕ್ಕೆ ಕೈ ಹಾಕಿದ್ದಾಳೆ ಎಂದು ವರದಿಗಳು ಉಲ್ಲೇಖಿಸಿವೆ.

ಲಾಸ್ ಏಂಜಲೀಸ್‌ನಲ್ಲಿ ನೆಲೆಸಿರುವ ಮಾರ್ಸೆಲಾ ಅವರು ತಮ್ಮ ಯೋಜನೆಯನ್ನು ರೋಡ್ರಿಗೋ ಅವರೊಂದಿಗೆ ಹಂಚಿಕೊಂಡಾಗ, ಅವರು ತಮ್ಮ ಆಶಯಕ್ಕೆ ಕೊಡುಗೆ ನೀಡಲು ಉತ್ಸುಕರಾಗಿದ್ದೇನೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಅವರು ತಮ್ಮ ತಾಯಿಗೆ ರಕ್ತದಾನ ಮಾಡುವುದಲ್ಲದೆ, 75 ವರ್ಷದ ಅಜ್ಜಿ ಗ್ರೇಸಿಲಾ ಅವರೊಂದಿಗೆ ಇದೇ ರೀತಿಯ ಕಾರ್ಯವಿಧಾನದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಪ್ರಯೋಗಕ್ಕೆ ವೈದ್ಯರ ಹುಡುಕಾಟ

ಯುವ ದಾನಿಗಳ ಜೀವಕೋಶಗಳಿಂದ ಅನೇಕ ಸಂಭಾವ್ಯ ಪ್ರಯೋಜನಗಳಿವೆ, ವಿಶೇಷವಾಗಿ ದಾನಿ ನನ್ನ ಮಗನಾಗಿದ್ದಾಗ ಈ ಚಿಕಿತ್ಸೆಯನ್ನು ಮಾಡಲು ನಾನು ಪ್ರಸ್ತುತ ಲಾಸ್ ಏಂಜಲೀಸ್‌ನಲ್ಲಿ ವೈದ್ಯರನ್ನು ಹುಡುಕುತ್ತಿದ್ದೇನೆ ಎಂದು ಮಾರ್ಸೆಲಾ ಇಗ್ಲೇಷಿಯಸ್ ಹೇಳಿದ್ದಾಳೆ.

ಮಗ ರೋಡ್ರಿಗೋ ಕಾರ್ಯವಿಧಾನ ಮತ್ತು ಅದರ ಪ್ರಯೋಜನಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದಾನೆ. ಅವನು ಈ ಕಾರ್ಯಕ್ಕೆ ಅವರು ಉತ್ಸುಕರಾಗಿದ್ದಾರೆ, ಅವರ ಅಜ್ಜಿಗೆ ಕೂಡ ಸಹಾಯ ಮಾಡಲು ಉತ್ಸುಕರಾಗಿದ್ದಾರೆ ಎಂದು ವಿವರಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net