More

    ಕರೋನಾ ಎಫೆಕ್ಟ್​: ಭಾರತೀಯನನ್ನು ನೋಡಿ ಚೀನೀಯ, ಕರೋನಾ, ಕರೋನಾ ಎಂದರಚುತ್ತ ಹಲ್ಲೆ ನಡೆಸಿದ ಇಸ್ರೇಲಿಯನ್ನರು!

    ಜೆರುಸಲೇಂ: ಭಾರತೀಯ ಯುವಕನೊಬ್ಬನನ್ನು ನೋಡಿ ಚೀನೀಯ ಎಂದು ಅರಚುತ್ತ, ಕರೋನಾ, ಕರೋನಾ ಎಂದು ಕೂಗುತ್ತ ಆತನ ಮೇಲೆ ಇಸ್ರೇಲಿಯನ್ನರು ಹಲ್ಲೆ ಮಾಡಿದ ಘಟನೆಯನ್ನು ಸ್ಥಳೀಯ ಮಾಧ್ಯಮಗಳು ಬಿತ್ತರಿಸಿದ್ದಾಗಿ ವರದಿಯಾಗಿದೆ.

    ಇಸ್ರೇಲ್​ನ ಟಿಬರಿಯಾಸ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಯುವಕನನ್ನು ಅಲ್ಲಿನ ಪೊರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಗೊಳಗಾದ ಯುವಕ 28 ವರ್ಷದವನಾಗಿದ್ದು, ಅಮ್ ಶಲೇಮ್​ ಸಿಂಗ್ಸನ್​ ಎಂದು ಗುರುತಿಸಲಾಗಿದೆ. ಈತ ಬ್ನೇಯಿ ಮಿನಾಶೆ ಸಮುದಾಯಕ್ಕೆ ಸೇರಿದ್ದು, ಈಶಾನ್ಯ ರಾಜ್ಯದವನು ಎಂಬ ಮಾಹಿತಿಯನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಹಲ್ಲೆಕೋರರ ಪೈಕಿ ಇಬ್ಬರನ್ನು ಗುರುತಿಸಲಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆಬೀಸಿದ್ದಾರೆ. ಈ ನಡುವೆ, ದಾಳಿಗೊಳಗಾದ ವ್ಯಕ್ತಿ ಹಲ್ಲೆಕೋರರಿಗೆ ತಾನು ಚೀನಿಯನಲ್ಲ ಎಂಬುದನ್ನುವಿವರಿಸುವ ಪ್ರಯತ್ನ ನಡೆಸಿದ್ದನಾದರೂ, ಅದು ಪ್ರಯೋಜನವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ದಾಳಿಗೀಡಾದ ಸಿಂಗ್ಸನ್​ ಮಾಲೊಟ್​ ಪ್ರದೇಶದ ನಿವಾಸಿಯಾಗಿದ್ದು, ಭಾರತದಿಂದ ಇಸ್ರೇಲಿಗೆ ಕುಟುಂಬ ಸಮೇತ ಮೂರು ವರ್ಷಗಳ ಹಿಂದೆ ವಲಸೆ ಬಂದುದಾಗಿ ತಿಳಿಸಿದ್ದಾನೆ. ಈ ಹಲ್ಲೆಗೆ ಸಂಬಂಧಿಸಿ ಸಾಕ್ಷ್ಯಗಳು ಇಲ್ಲ. ಹೀಗಾಗಿ ಆ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪಡೆಯಲು ಪೊಲೀಸರು ಪ್ರಯತ್ನಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    Covid19 ಹುಟ್ಟೂರು ಅಮೆರಿಕ ಎಂದ ಚೀನಾ ವಕ್ತಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts