More

    ಅಗ್ನಿ ಅವಘಡ; ಕೆನೆಡಾದಲ್ಲಿ ಭಾರತ ಮೂಲದ ದಂಪತಿ, ಪುತ್ರಿ ಅನುಮಾನಾಸ್ಪದ ಸಾವು

    ನವದೆಹಲಿ: ಕಟ್ಟಡ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಭಾರತ ಮೂಲದ ದಂಪತಿ ಹಾಗೂ ಅವರ ಪುತ್ರಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ನಡೆದಿದೆ.

    ಮಾರ್ಚ್​ 07ರಂದು ಘಟನೆ ನಡೆದಿದ್ದು, ಮೂವರ ಮೃತದೇಹಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದ್ದವು. ಮೃತದೇಹಗಳನ್ನು ಮಾರ್ಚ್​ 15ರಂದು ಗುರುತಿಸಲಾಗಿದ್ದು, ಮೃತರನ್ನು ರಾಜೀವ್ ವಾರಿಕೂ (51), ಶಿಲ್ಪಾ ಕೋಥಾ (47) ಮತ್ತು ಮಾಹೆಕ್ ವಾರಿಕೂ (16) ಎಂದು ಗುರುತಿಸಲಾಗಿದೆ. 

    ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಪ್ರಾಥಮಿಕ ತನಿಖೆಯ ಪ್ರಕಾರ ಇದು ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅವಘಡ ಅಲ್ಲ ಎಂದು ತಿಳಿದು ಬಂದಿದೆ. ಮೂವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ತನಿಖೆ ನಡೆಸಲಾಗುತ್ತಿದೆ. ನೆರೆಹೊರೆಯವರು ಸ್ಪೋಟ ಆಗಿದ ಎಂದು ಹೇಳಿದ್ದು, ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    Indian Origin Family

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts