More

    ಆರ್​ಸಿಬಿಗೆ ಬಂತು ಆನೆ ಬಲ; ಬದಲಿ ಆಟಗಾರನಾಗಿ ಮಾರಕ ವೇಗಿ ಎಂಟ್ರಿ

    ಬೆಂಗಳೂರು: ಮಾರ್ಚ್​ 22ರಂದು ಪ್ರಾರಂಭವಾಗಲಿರುವ 17ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ​ (IPL) ಈಗಘಾಲೇ ಸಿದ್ಧತೆಗಳು ಭರದಿಂದ ಸಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಸೆಣಸಾಡಲಿವೆ.

    ಐಪಿಎಲ್​ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಕೆಲ ಸ್ಟಾರ್ ಆಟಗಾರರು ಗಾಯದ ಸಮಸ್ಯೆ, ವೈಯಕ್ತಿಕ ಕಾರಣಗಳನ್ನು ನೀಡಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇವರ ಜಾಗಕ್ಕೆ ಬದಲಿ ಆಟಗಾರರು ಪ್ರವೇಶಿಸುತ್ತಿದ್ದಾರೆ. ಈ ಸಮಸ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕೂಡ ತಲೆದೂರಿದೆ.

    ಕಳೆದ ವರ್ಷ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆರ್​ಸಿಬಿ ಪಾಲಾಗಿದ್ದ ಇಂಗ್ಲೆಂಡ್​ ತಂಡದ ಸ್ಟಾರ್​ ಆಟಗಾರ ಟಾಮ್​ ಕರ್ರನ್​ ಗಾಯಗೊಂಡಿದ್ದು, ತಂಡಕ್ಕೆ ಇವರ ಲಭ್ಯತೆ ಬಗ್ಗೆ ಗೊಂದಲವಿದೆ. ಇದರ ಬೆನ್ನಲ್ಲೇ ಬದಲಿ ಆಟಗಾರನ ಹುಡುಕಾಟದಲ್ಲಿ ನಿರತವಾಗಿರುವ ಆರ್​ಸಿಬಿ ಮಾರಕ ವೇಗಿಯನ್ನು ಕರೆತರಲು ಮುಂದಾಗಿದೆ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: WPL2024; ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಲಿದ್ದಾರಾ ಆರ್​ಸಿಬಿ ವನಿತೆಯರು?

    ಆದರೆ ಇದೀಗ ಆರ್​ಸಿಬಿ ಪ್ರಾಂಚೈಸಿ ತಂಡಕ್ಕೆ ಘಾತುಕ ವೇಗಿಯನ್ನು ಕರೆತಯರಲು ದೊಡ್ಡ​ ಸ್ಕೆಚ್​​ ಹಾಕಿದೆ. ಹೌದು, ಕೆಲ ವರದಿಗಳ ಪ್ರಕಾರ ಆರ್​ಸಿಬಿ ತಂಡಕ್ಕೆ ಇಂಗ್ಲೆಂಡ್ ವೇಗದ ಬೌಲರ್​ ಜೋಪ್ರಾ ಆರ್ಚರ್​ ಬರುವ ಮುನ್ಸೂಚನೆ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಪೂರವೆಂಬಂತೆ ಆರ್ಚರ್​ ಸಹ ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.

    ಆರ್ಚರ್ ಪ್ರಸ್ತುತ ತನ್ನ ಕೌಂಟಿ ಕ್ಲಬ್ ಸಸೆಕ್ಸ್‌ನೊಂದಿಗೆ ಭಾರತ ಪ್ರವಾಸ ಮಾಡುತ್ತಿದ್ದಾರೆ. ಸಸೆಕ್ಸ್ ತಂಡ ಪ್ರಥಮ ದರ್ಜೆ ಪಂದ್ಯಗಳನ್ನು ಆಡಲಿದೆ. ಸದ್ಯ ತಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದೆ. ಹೀಗಿರುವಾಗ ಈ ಋತುವಿನಲ್ಲಿ ಆಡಲು ಆರ್ಚರ್ ಅವರನ್ನು ಆರ್​ಸಿಬಿ ಸಂಪರ್ಕಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts