ವಿಮಾನದ ಒಳಗೆ ಅಪ್ರಾಪ್ತೆಗೆ ಖಾಸಗಿ ಅಂಗ ಪ್ರದರ್ಶಿಸಿದ ಭಾರತೀಯ ಮೂಲದ ವೈದ್ಯನ ಬಂಧನ!

Indian Origin Man
Published on

ನ್ಯೂಯಾರ್ಕ್​: ವಿಮಾನದ ಒಳಗೆ 14 ವರ್ಷದ ಬಾಲಕಿಯ ಮುಂದೆ ಹಸ್ತಮೈಥುನ ಮಾಡಿಕೊಳ್ಳುವ ಮೂಲಕ ಅಶ್ಲೀಲ ವರ್ತನೆ ತೋರಿದ ಭಾರತೀಯ ಮೂಲದ ವೈದ್ಯರೊಬ್ಬರನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.

ಬಂಧಿತ ವೈದ್ಯನನ್ನು ಡಾ. ಸುದಿಪ್ತ ಮೊಹಾಂತಿ (42) ಎಂದು ಗುರುತಿಸಲಾಗಿದೆ. ಭಾರತೀಯ ಮೂಲದ ಸುದಿಪ್ತ, ಮ್ಯಾಸಚೂಸೆಟ್ಸ್​ ರಾಜ್ಯದ ಕೇಂಬ್ರಿಡ್ಜ್​ನಲ್ಲಿ ನೆಲೆಸಿದ್ದಾರೆ. ಅಂದಹಾಗೆ ಈ ಘಟನೆ ನಡೆದಿದ್ದು ಕಳೆದ ವರ್ಷ. ಇದೀಗ ಆರೋಪಿಯ ವಿರುದ್ಧ ಕೇಂಬ್ರಿಡ್ಜ್​ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

ಹವಾಯಿಯ ಹೊನೊಲುಲುವಿನಿಂದ ಬೋಸ್ಟನ್‌ಗೆ ತೆರಳುತ್ತಿದ್ದ ವಿಮಾನದಲ್ಲಿ 14 ವರ್ಷದ ಬಾಲಕಿಯ ಮುಂದೆ ಡಾ. ಸುದಿಪ್ತಾ ಹಸ್ತಮೈಥುನ ಮಾಡಿಕೊಂಡಿದ್ದರು. ಈ ಘಟನೆಯು 2022ರ ಮೇ 27ರಂದು ನಡೆದಿತ್ತು. ದೂರು ನೀಡಿದ್ದರೂ ಆರಂಭದಲ್ಲಿ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ, ಸ್ವತಃ ಸಂತ್ರಸ್ತ ಬಾಲಕಿಯೇ ಆರೋಪಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದಳು. ಇದಾದ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಬಂಧಿಸಲಾಗಿದೆ.

ವಿಮಾನದಲ್ಲಿ ಸುಮಾರು ಐದು ಗಂಟೆಗಳ ಕಾಲ ಆರೋಪಿ ಅಶ್ಲೀಲ ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತ ಬಾಲಕಿ ಕೋರ್ಟ್​ ಮುಂದೆ ಹೇಳಿಕೆ ನೀಡಿದ್ದಾಳೆ. ಆತನ ಕೃತ್ಯದಿಂದ ಮುಜಗರಕ್ಕೀಡಾದ ಯುವತಿ ಕೊನೆಗೆ ಬೇರೊಂದು ಸೀಟಿಗೆ ಸ್ಥಳಾಂತರವಾದೆ ಎಂದು ತಿಳಿಸಿದ್ದಾಳೆ.

ವಿಮಾನ ಲ್ಯಾಂಡ್​ ಆದ ಬಳಿಕ ಬಾಲಕಿ ತಾನು ಎದುರಿಸಿದ ಕಹಿ ಘಟನೆಯನ್ನು ಕುಟುಂಬದ ಮುಂದೆ ಹೇಳಿಕೊಂಡಿದ್ದಾಳೆ. ಬಳಿಕ ಕುಟುಂಬ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ತಿಳಿಸಿದರು. ಬಳಿಕ ಅಧಿಕಾರಿಗಳು ಅವರನ್ನು ಪ್ರಶ್ನಿಸಿದರೂ ತಾನೇನು ತಪ್ಪು ಮಾಡಿಲ್ಲ ಎಂದು ವೈದ್ಯ ವಾದಿಸಿದ್ದ. ಆದರೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net