

ತಮಿಳುನಾಡು: ಕಾಲಿವುಡ್ನ ಬಹುಭಾಷಾ ನಟ ಕಮಲ್ ಹಾಸನ್ ಮತ್ತು ಖ್ಯಾತ ನಿರ್ಮಾಪಕ ಎಸ್. ಶಂಕರ್ ಷಣ್ಮುಗಂ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಬಹುನಿರೀಕ್ಷಿತ 'ಇಂಡಿಯನ್ 2' ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭವಾಗಲಿದೆ ಎಂದು ಇತ್ತೀಚಿನ ವರದಿಯೊಂದು ಮಾಹಿತಿ ನೀಡಿದೆ.
'ಇಂಡಿಯನ್ 2' ಚಿತ್ರದ ಚಿತ್ರೀಕರಣ ಮುಂದಿನ ವಾರದಿಂದ ಪ್ರಾರಂಭವಾಗಲಿದ್ದು, ಸಿನಿಮಾದ ಬಹುಮುಖ್ಯ ಭಾಗಗಳು ಒಂದಷ್ಟು ವಾರಗಳ ಕಾಲ ವಿಜಯವಾಡ ಮತ್ತು ವೈಜಾಗ್‌ನಲ್ಲಿ ನಡೆಯಲಿದೆ ಎಂದು ವದಂತಿಗಳಿವೆ. ಆದ್ರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಪ್ರಕಟವಾಗಿಲ್ಲ.
ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ಕಮಲ್ ಫ್ಯಾನ್ಸ್ ಮತ್ತು ಸಿನಿಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ಚಿತ್ರದಲ್ಲಿ ಸಿದ್ಧಾರ್ಥ್, ಬಾಬಿ ಸಿಂಹ, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಸಮುದ್ರಕನಿ ಮುಂತಾದವರ ತಾರಾಗಣವಿದೆ. ಈ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಅನ್ನು ಲೈಕಾ ಪ್ರೊಡಕ್ಷನ್ಸ್, ರೆಡ್ ಜೈಂಟ್ ಮೂವೀಸ್ ನಿರ್ಮಿಸಿದ್ದು, ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).