ಪಾಕ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ| Asia Cup

ind
Published on

IND vs PAK: ಇಂದು (ಸೆ.14) ದುಬೈನ ಇಂಟರ್​​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಜಿದ್ದಾಜಿದ್ದಿನ ಸೆಣೆಸಾಟ ನಡೆಸಿದವು.

ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ನಿಗದಿತ 20 ಒವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 127 ರನ್​ಗಳಿಸಿತು. ಇನ್ನೂ 128 ರನ್​ಗಳ ಗುರಿ ಬೆನ್ನಟ್ಟಿದ ಭಾರತ 15.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ 7 ವಿಕೆಟ್ ಗಳ  ಭರ್ಜರಿ ಜಯ ಸಾಧಿಸಿತು.

ಏಷ್ಯಾ ಕಪ್​ನ 6ನೇ ಪಂದ್ಯದಲ್ಲಿ ಪಾಕ್ ಕ್ಯಾಪ್ಟನ್ ಸಲ್ಮಾನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೆ, ಇನ್ನೂ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ ಮೊದಲು ಫೀಲ್ಡಿಂಗ್​ಗೆ ಇಳಿಯಿತು. ಮೊದಲು ಬ್ಯಾಟಿಂಗ್​ ಮಾಡಲು ಬಂದ ಪಾಕ್​ಗೆ​ ಆರಂಭಿಕ ಆಟಗಾರ ಸೈಮ್ ಅಯೂಬ್​ನನ್ನು ಭಾರತದ ಸ್ಟಾರ್​ ಅಲ್​ರೌಂಡರ್​​ ಹಾರ್ದಿಕ್​ ಪಾಂಡ್ಯ ಶೂನ್ಯಕ್ಕೆ ಔಟ್​ ಮಾಡಿದರು. ನಂತರ ಬಂದ ಫಖರ್ ಜಮಾನ್ (17), ನಾಯಕ ಸಲ್ಮಾನ್ ಅಲಿ ಅಘಾ (3), ಸಾಹಿಬ್‌ಜಾದಾ ಫರ್ಹಾನ್ 40 ರನ್​ಗಳಿಸಿದರು. ನಂತರ ಶಾಹೀನ್ ಅಫ್ರಿದಿಯು ಕೊನೆಯ 16 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳ ಸಹಾಯದಿಂದ ಔಟಾಗದೆ 33 ರನ್ ಗಳಿಸಿದರು.

(ಏಜೆನ್ಸೀಸ್)

ಭಾರತದ ಪರವಾಗಿ ಸ್ಪಿನ್ ಜೋಡಿ ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಪಾಕಿಸ್ತಾನವನ್ನು ಕಡಿದರು. ಕುಲದೀಪ್ ಯಾದವ್ 3 ವಿಕೆಟ್​ ಅಕ್ಷರ್ ಪಟೇಲ್ 2, ಮತ್ತು ಜಸ್ಪ್ರೀತ್ ಬುಮ್ರಾ 2 ಪ್ರಮುಖ ವಿಕೆಟ್ ಪಡೆದು ಪಾಕ್​ ಅಲ್ಪ ಮೊತ್ತಗಳಿಸುವಂತೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net