ನವದೆಹಲಿ: ಫೆಬ್ರವರಿ 19ರಿಂದ ಮಾರ್ಚ್ 09ರವರೆಗೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ (Champions Trophy) ದಿನಗಣನೆ ಆರಂಭವಾಗಿದ್ದು, ಈ ಬಾರಿಯ ಟೂರ್ನಿ ಪಾಕಿಸ್ತಾನ ಹಾಗೂ ದುಬೈನಲ್ಲಿ (ಭಾರತದ ಪಂದ್ಯಗಳು ಮಾತ್ರ) ನಡೆಯಲಿದೆ. ಈಗಾಗಲೇ ಬಹುತೇಕ ತಂಡಗಳು ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದು, ಟೂರ್ನಿಗೆ ತಯಾರಿ ಆರಂಭಿಸಿವೆ. ಇನ್ನೂ ಟೂರ್ನಿ ಆರಂಭವಾಗುವುದಕ್ಕೆ ವರ್ಷ ಇರುವಾಗಲೇ ಹೇಳಿಕೆಗಳಿಂದಲೇ ಸಖತ್ ಹೈಪ್ ಪಡೆದುಕೊಂಡಿತ್ತು. ಪ್ರಮುಖವಾಗಿ ಭಾರತ ಹಾಗೂ ಪಾಕ್ ನಡುವಿನ ಸಂಘರ್ಷದಿಂದಾಗಿ ಟೂರ್ನಿ ಹೆಚ್ಚು ಸದ್ದು ಮಾಡಿತ್ತು. ಇದೀಗ ಪಾಕಿಸ್ತಾನ ತಂಡದ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಭಾರತದ ಕುರಿತಾಗಿ ಹೇಳಿಕೆ ನೀಡಿದ್ದು, ವೈರಲ್ ಆಗುತ್ತಿದೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸರ್ಫರಾಜ್, ಗ್ರೂಪ್ ಹಂತದಲ್ಲಿ ಭಾರತದ ವಿರುದ್ಧ ನಾವು ಸೋತ ಬಳಿಕ ತಂಡದೊಂದಿಗೆ ಚರ್ಚಿಸಿ ಶೋಯೆಬ್ ಮಲಿಕ್, ಹಫೀಜ್ ಸೇರಿದಂತೆ ಪ್ರಮುಖರು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ತಿಳಿಸಿದರು. ಆ ದಿನ ನಾವು ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡು ಆಡಲು ಶುರು ಮಾಡಿದೆವು. ತಂಡದಲ್ಲಿನ ಬದಲಾವಣೆಗಳೇ ಪ್ರಮುಖವಾಗಿ ನಮ್ಮ ಗೆಲುವಿಗೆ ಸಹಕಾರಿಯಾಯಿತು.
ಸೆಮಿಫಿನಾಲೆಯಲ್ಲಿ ಇಂಗ್ಲೆಂಡ್ ವಿರುದ್ಧ ಆಡಿ ಗೆದ್ದೆವು, ಫೈನಲ್ನಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಿದೆವು. ನಾವು ಟೂರ್ನಿಯಲ್ಲಿ ಉತ್ತಮ ತಂಡಗಳನ್ನು ಸೋಲಿಸಿದ್ದೆವು. ಆ ನಂತರ ಭಾರತದ ಎದುರು ಆಡುವುದು ನಮಗೆ ದೊಡ್ಡ ಸವಾಲಾಗಲಿಲ್ಲ. ಆ ನಂತರ ನಾವು ಫೈನಲ್ನಲ್ಲಿ ಭಾರತದ ವಿರುದ್ಧ ಗೆದ್ದೆವು, ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಮಾಜಿ ನಾಯಕ ಸರ್ಫರಾಜ್ ಖಾನ್ ಹೇಳಿಕೆ ನೀಡಿದ್ದಾರೆ.
ಹಾಲಿ ಚಾಂಪಿಯನ್ಸ್ ಪಾಕಿಸ್ತಾನದ ಆತಿಥ್ಯದಲ್ಲಿ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ (Champions Trophy) ನಡೆಯುತ್ತಿದ್ದು, ಭದ್ರತೆಯ ಕಾರಣದಿಂದಾಗಿ ಭಾರತದ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗುತ್ತಿದೆ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿದ್ದು, ಫೆಬ್ರವರಿ 19ರಿಂದ ಮಾರ್ಚ್ 09ರವರೆಗೆ ಟೂರ್ನಿ ನಡೆಯಲಿದೆ.
ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೀ), ಕೆಎಲ್ ರಾಹುಲ್ (ವಿಕೀ), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.
RCB ನಾಯಕನಾಗಿ ರಜತ್ ನೇಮಕಗೊಂಡ ಹಿಂದಿದೆ ಈ ಏಳು ಕಾರಣಗಳು; ವಿವರ ಕೇಳಿ ಈ ಸಲ ಕಪ್ ನಮ್ದೆ ಎಂದ ಫ್ಯಾನ್ಸ್