ಎಚ್​3ಎನ್​2 ವೈರಸ್​ಗೆ ದೇಶದಲ್ಲಿ ಮತ್ತೊಂದು ಬಲಿ!; ಆತಂಕ ಹೆಚ್ಚಿಸುತ್ತಿರುವ ಸೋಂಕು

H3N2 Influenza
Published on

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬಾಧಿಸುತ್ತಿರುವ ಎಚ್​3ಎನ್​2 ವೈರಸ್​ನಿಂದ ಕರ್ನಾಟಕದಲ್ಲಿ ಒಬ್ಬರು ಸಾವಿಗೀಡಾಗುವ ಮೂಲಕ ಭಾರತದಲ್ಲಿ ಈ ಸೋಂಕಿನಿಂದಾದ ಮೊದಲ ಸಾವು ಕರ್ನಾಟಕದಲ್ಲಿ ಸಂಭವಿಸಿತ್ತು. ಇನ್ನೊಬ್ಬರು ಈ ಸೋಂಕಿಗೆ ಬಲಿಯಾಗುವ ಮೂಲಕ ದೇಶದಲ್ಲಿ ಎಚ್​3ಎನ್​2ನಿಂದ ಸತ್ತವರ ಸಂಖ್ಯೆ ಎರಡಕ್ಕೇರಿದೆ.

ರಾಜ್ಯದ ಹಾಸನ ಜಿಲ್ಲೆಯ 82 ವರ್ಷದ ವ್ಯಕ್ತಿ ಹಿರೇಗೌಡ ಮಾ. 1ರಂದು ಸಾವಿಗೀಡಾಗಿದ್ದರು. ಅವರು ಎಚ್​3ಎನ್​2 ವೈರಸ್​ ಸೋಂಕಿಗೆ ಒಳಗಾಗಿದ್ದನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಖಚಿತಪಡಿಸಿದ್ದರು. ಇದೀಗ ಹರ್ಯಾಣದಲ್ಲೂ ಇನ್ನೊಬ್ಬರು ಈ ಸೋಂಕಿಗೆ ಒಳಗಾಗಿ ಸತ್ತಿದ್ದು ಖಚಿತವಾಗಿದೆ.

ಹರ್ಯಾಣದಲ್ಲಿ 56 ವರ್ಷದ ವ್ಯಕ್ತಿ ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಸಾವಿಗೀಡಾಗಿದ್ದರು. ಜಿಂದ್ ಜಿಲ್ಲೆಯ ಈ ವ್ಯಕ್ತಿ ಎಚ್​3ಎನ್​2 ಸೋಂಕಿಗೆ ಒಳಗಾಗಿದ್ದರು. ದೇಶದಲ್ಲಿ ಎಚ್​3ಎನ್​2 ಸೋಂಕಿಗೆ ಒಳಗಾಗಿ ಸಾವಿಗೀಡಾದ ಎರಡು ಪ್ರಕರಣ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಈ ಸೋಂಕಿನ ಕುರಿತ ಆತಂಕ ಹೆಚ್ಚಾಗಿದೆ ಎನ್ನಲಾಗಿದೆ. ಎಚ್​3ಎನ್​2 ಇನ್​​ಪ್ಲುಯೆಂಜಾವನ್ನು ಹಾಂಗ್​ಕಾಂಗ್​ ಫ್ಲೂ ಎಂದೂ ಕರೆಯಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net