More

    ಕಾಮನ್​ವೆಲ್ತ್​ ಗೇಮ್ಸ್​ ಮುಕ್ತಾಯ; ಭಾರತಕ್ಕೆ 4ನೇ ಸ್ಥಾನ: ಗಳಿಸಿದ ಪದಕಗಳ ವಿವರ ಇಲ್ಲಿದೆ..

    ಬರ್ಮಿಂಗ್​​ಹ್ಯಾಂ: 18ನೇ ಕಾಮನ್​ವೆಲ್ತ್ ಗೇಮ್ಸ್​ ಇಂದು ಮುಕ್ತಾಯವಾಗಿದ್ದು, ಈ ಕ್ರೀಡಾಕೂಟದಲ್ಲಿ ಭಾರತ ನಾಲ್ಕನೇ ಸ್ಥಾನವನ್ನು ಗಳಿಸಿದೆ. ಒಟ್ಟಾರೆಯಾಗಿ ಈ ಸಲದ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತ 61 ಪದಕಗಳನ್ನು ಗಳಿಸಿದೆ.

    ಜುಲೈ 28ರಂದು ಪ್ರಾರಂಭವಾದ 18ನೇ ಕಾಮನ್‌ವೆಲ್ತ್ ಗೇಮ್ಸ್ ಇಂದು ಮುಕ್ತಾಯವಾಗಿದ್ದು, 178 ಪದಕಗಳೊಂದಿಗೆ ಆಸ್ಟ್ರೇಲಿಯಾ ಪ್ರಥಮ ಸ್ಥಾನ ಪಡೆದಿದೆ. 175 ಪದಕಗಳೊಂದಿಗೆ ಇಂಗ್ಲೆಂಡ್ ದ್ವಿತೀಯ ಹಾಗೂ 92 ಪದಕಗಳೊಂದಿಗೆ ಕೆನಡ ತೃತೀಯ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ. ಇಂಗ್ಲೆಂಡ್, ಕೆನಡ ಕ್ರಮವಾಗಿ 67, 57, 26 ಚಿನ್ನದ ಪದಕಗಳನ್ನು ಪಡೆದಿವೆ. ನಾಲ್ಕನೇ ಸ್ಥಾನ ಪಡೆದಿರುವ ಭಾರತ 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚಿನ ಪದಕಗಳನ್ನು ಗಳಿಸಿದೆ.

    ಕಳೆದ ಕ್ರೀಡಾಕೂಟದಲ್ಲಿ ಭಾರತಕ್ಕೆ ಶೂಟಿಂಗ್​ನಲ್ಲಿ 135 ಪದಕಗಳು ಬಂದಿದ್ದವು. ಆದರೆ ಈ ಸಲ ಶೂಟಿಂಗ್ ರದ್ದು ಮಾಡಿದ್ದರಿಂದ ಭಾರತಕ್ಕೆ ಪದಕಗಳ ಸಂಖ್ಯೆ ಕಡಿಮೆ ಆಗಿದೆ ಎಂದು ವಿಶ್ಲೇಷಿಸಲಾಗಿದೆ. 2010ರಲ್ಲಿ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತದ ಸಾಧನೆ ಇದುವರೆಗಿನ ಉತ್ಕೃಷ್ಠ ಸಾಧನೆಯಾಗಿದೆ. ಆ ಕ್ರೀಡಾಕೂಟದಲ್ಲಿ ಭಾರತ 38 ಚಿನ್ನದ ಪದಕಗಳನ್ನು ಸೇರಿ ಒಟ್ಟು 101 ಪದಕಗಳನ್ನು ಗಳಿಸಿತ್ತು.

    ಯಾರದು..? ಚರ್ಚೆ ಆಗುತ್ತಿದೆ ಬೆಡ್​ರೂಮ್ ವಿಷಯ: ಇಂದು ರಾತ್ರಿ ಕಳೆಗಟ್ಟಲಿದ್ಯಾ ಬಿಗ್​ಬಾಸ್?

    ಶಾಲೆಯಿಂದ ಹೊರಟ 2ನೇ ತರಗತಿ ವಿದ್ಯಾರ್ಥಿನಿ ಮನೆಗೆ ತಲುಪಲೇ ಇಲ್ಲ; ಕಾಲುಸಂಕಕ್ಕೆ ಪ್ರಾಣವೇ ಸುಂಕ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts