ಸ್ವಚ್ಛ ಭಾರತ ಯೋಜನೆಗೆ ಸಹಕಾರ : ಕುಸುಮಾ ಚಂದ್ರಶೇಖರ್ ಕೋರಿಕೆ

New Project (38)
Published on

ಮೂಲ್ಕಿ: ಗ್ರಾಮದ ಸರ್ವತೋಮುಖ ಅಭಿವೃದ್ಧಿ ಗುರಿಯಾಗಿಸಿ ಸ್ವಚ್ಛ ಭಾರತ ಯೋಜನೆ, ಗ್ರಾಮೀಣ ಬಡವರ್ಗದ ಜನರಿಗೆ ಸಂಪೂರ್ಣ ಸಹಕಾರ ನೀಡುವ ಮೂಲಕ ಪಂಚಾಯಿತಿ ಬೆಳೆಯುತ್ತಿದ್ದು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪಡುಪಣಂಬೂರು ಗ್ರಾಪಂ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್ ಹೇಳಿದರು.

ಪಡುಪಣಂಬೂರು ಗ್ರಾಪಂಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಉಪಾಧ್ಯಕ್ಷ ಹೇಮನಾಥ ಅಮೀನ್, ಅಭಿವೃದ್ಧಿ ಅಧಿಕಾರಿ ಸುಧೀರ್, ಪಂಚಾಯಿತಿ ಸದಸ್ಯರು, ಅಂಗನವಾಡಿ ಸದಸ್ಯರು, ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net