ಸರ್ಕಾರದಿಂದ ಇಲಾಖೆಯಲ್ಲಿ ಮಹತ್ವದ ಅಭಿವೃದ್ಧಿ : ಕೇರಳ ಸಿಎಂ ಪಿಣರಾಯಿ ವಿಜಯನ್ ಅಭಿಪ್ರಾಯ I

New Project (25)
Published on

ಕಾಸರಗೋಡು: ಕಳೆದ ಒಂಬತ್ತು ವರ್ಷಗಳಲ್ಲಿ ಪೊಲೀಸ್ ಪಡೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ವಿಷಯದಲ್ಲಿ ಪ್ರಮುಖ ಬದಲಾವಣೆ ತಂದುಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.

ಮೂಲಸೌಕರ್ಯ ಅಭಿವೃದ್ಧಿಯ ಅಂಗವಾಗಿ, ವಿವಿಧ ಜಿಲ್ಲೆಗಳಲ್ಲಿನ ಪೊಲೀಸ್ ಇಲಾಖೆಗಾಗಿ ಪೂರ್ಣಗೊಳಿಸಲಾದ 13 ಯೋಜನೆಗಳನ್ನು ಆನ್‌ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಾಸರಗೋಡು ಚಟ್ಟಂಚಾಲ್ ರಾ.ಹೆ.ಬಳಿ ಮೇಲ್ಪರಂಬ ಪೊಲೀಸ್ ಠಾಣೆ, ಬೇಕಲ ಪೊಲೀಸ್ ಉಪ ವಿಭಾಗ ಕಟ್ಟಡ ಸಿಎಂ ಉದ್ಘಾಟಿಸಿದರು. ಮೇಲ್ಪರಂಬ ಠಾಣೆ ವಠಾರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅರಣ್ಯ ಮತ್ತು ವನ್ಯಜೀವಿ ಸಚಿವ ಎ.ಕೆ.ಶಶೀಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಿ.ಎಚ್.ಕುಞಂಬು, ಜಿ.ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿ.ಪಂ. ಉಪಾಧ್ಯಕ್ಷ ಶಾನವಾಸ್ ಪಾದೂರು, ಕಾಸರಗೋಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸಿ.ಕೆ.ಸೈಮಾ ಮೊದಲಾದವರಿದ್ದರು.

ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿಜಯ್ ಭರತ್ ರೆಡ್ಡಿ ಐಪಿಎಸ್ ಸ್ವಾಗತಿಸಿದರು. ಮೇಲ್ಪರಂಬ ಠಾಣೆಯ ಎಸ್‌ಎಚ್‌ಒ ಸಂತೋಷ್ ಕುಮಾರ್ ವಂದಿಸಿದರು.

ಇಂದು ಪೊಲೀಸ್ ಠಾಣೆಗಳ ಪರಿಕಲ್ಪನೆಯೇ ಬದಲಾಗಿದೆ. ಜನಸ್ನೇಹಿ ವಾತಾವರಣದ ಭಾಗವಾಗಿ, ಪೊಲೀಸ್ ಠಾಣೆ ಸಾರ್ವಜನಿಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ, ಸಹಾಯ ಕೇಂದ್ರಗಳು ಮತ್ತು ಅಂಗವಿಕಲರು, ಮಕ್ಕಳು ಮತ್ತು ಮಹಿಳೆಯರಿಗೆ ವಿಶೇಷ ಸೌಲಭ್ಯ ಹೊಂದಿದೆ. ಪೊಲೀಸ್ ಇಲಾಖೆಯಲ್ಲಿ ಉನ್ನತ ಶಿಕ್ಷಣ ಪಡೆದ ಮತ್ತು ಉತ್ಸಾಹಭರಿತ ಯುವಕರನ್ನು ಸೇರಿಸಿಕೊಳ್ಳುವುದರಿಂದ ಒಟ್ಟಾರೆ ದಕ್ಷತೆ ಹೆಚ್ಚಾಗಿದೆ. ಪಿಣರಾಯಿ ವಿಜಯನ್, ಕೇರಳ ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net