ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಬೇಕಾಗಿಲ್ಲ! ಆಶಿಶ್​ ನೆಹ್ರಾ ಅಚ್ಚರಿ ಹೇಳಿಕೆ ಹಿಂದಿದೆ ಈ ಕಾರಣ…

Rohit and Kohli

ನವದೆಹಲಿ: ಭಾರತ ತಂಡ ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್​ ಸ್ವೀಪ್​ ಮಾಡಿರುವ ಟೀಮ್​ ಇಂಡಿಯಾ, ಏಕದಿನ ಸರಣಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ಮೂರನೇ ಏಕದಿನ ಪಂದ್ಯವನ್ನು ಗೆದ್ದು ಕನಿಷ್ಠ ಪಕ್ಷ 1-1ರಲ್ಲಿ ಸರಣಿಯನ್ನ ಸಮಬಲಗೊಳಿಸಲು ಎದುರು ನೋಡುತ್ತಿದೆ.

ಶ್ರೀಲಂಕಾ ಪ್ರವಾಸದ ಮೂಲಕ ಕೋಚ್ ಆಗಿ ಪಯಣ ಆರಂಭಿಸಿರುವ ಗೌತಮ್ ಗಂಭೀರ್​ಗೆ ಈ ಪ್ರವಾಸ ತುಂಬಾ ವಿಶೇಷವೆಂದೇ ಹೇಳಬೇಕು. ತಂಡದ ಆಯ್ಕೆಯಲ್ಲಿ ತಮ್ಮ ಛಾಪು ತೋರಿದ ಗಂಭೀರ್, ಸ್ಟಾರ್ ಆಟಗಾರರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಲಭ್ಯವಾಗುವಂತೆ ಕೇಳಿಕೊಂಡರು. ಗೌತಿ ಕೋರಿಕೆಯಂತೆ ಇಬ್ಬರೂ ಏಕದಿನ ಸರಣಿ ಆಡುತ್ತಿದ್ದಾರೆ. ಆದರೆ, ರೋಹಿತ್ ಮತ್ತು ಕೊಹ್ಲಿ ಏಕದಿನ ಸರಣಿಯಲ್ಲಿ ಆಡುವ ಅಗತ್ಯವಿರಲಿಲ್ಲ ಎಂದು ಭಾರತದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಆಡದೆ ಯುವ ಆಟಗಾರರಿಗೆ ಅವಕಾಶ ನೀಡಲು ಶ್ರೀಲಂಕಾ ಏಕದಿನ ಸರಣಿಯ ರೂಪದಲ್ಲಿ ಭಾರತಕ್ಕೆ ಒಂದು ಉತ್ತಮ ಅವಕಾಶ ಸಿಕ್ಕಿತ್ತು ಎಂದು ಆಶಿಶ್ ನೆಹ್ರಾ ಹೇಳಿದ್ದಾರೆ. ಆದರೆ, ನೂತನ್​ ಕೋಚ್​ ಆಗಿರುವ ಗೌತಮ್ ಗಂಭೀರ್, ಅನುಭವಿ ಆಟಗಾರರನ್ನು ಕಡೆಗಣಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಆದರೆ, ಅನುಭವಿ ಆಟಗಾರರು ಲಂಕಾ ಸರಣಿಯಲ್ಲಿ ತಮ್ಮ ಸಾಮರ್ಥ್ಯ ತೋರುವಲ್ಲಿ ವಿಫಲರಾಗಿದ್ದಾರೆ.

ಅನುಭವಿ ಆಟಗಾರರನಿಗೆ ಕೋಕ್​ ಕೊಟ್ಟು ಯುವ ಆಟಗಾರರನ್ನು ಪ್ರಯತ್ನಿಸಲು ಗೌತಮ್​ ಗಂಭೀರ್​ಗೆ ಒಂದು ಉತ್ತಮ ಅವಕಾಶ ಸಿಕ್ಕಿತ್ತು. ಹಿರಿಯ ಆಟಗಾರರಿಗೆ ವಿಶ್ರಾಂತಿಯನ್ನು ನೀಡಿ ತವರಿನಲ್ಲಿ ಸರಣಿಗಳು ಇದ್ದಾಗ ಅವರಿಗೆ ಅವಕಾಶವನ್ನು ನೀಡಬಹುದಿತ್ತು. ಹಾಗಂತ ಗಂಭೀರ್ ಅವರ ನಿರ್ಧಾರಗಳು ತಪ್ಪು ಎಂದು ನಾನು ಹೇಳುತ್ತಿಲ್ಲ ಎಂದು ನೆಹ್ರಾ ತಮ್ಮ ಅಭಿಪ್ರಾಯವನ್ನು ಹೊರಹಾಕಿದರು.

ಅಂದಹಾಗೆ ಶ್ರೀಲಂಕಾ ಮತ್ತು ಭಾರತ ನಡುವಿನ 3ನೇ ಹಾಗೂ ಕೊನೆಯ ಏಕದಿನ ಪಂದ್ಯ ನಾಳೆ (ಆ.07) ಕೊಲಂಬೋದ ಆರ್​. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯ ಟೈನಲ್ಲಿ ಅಂತ್ಯಗೊಂಡಿದ್ದು, ಎರಡನೇ ಪಂದ್ಯವನ್ನು ಟೀಮ್​ ಇಂಡಿಯಾ ಹೀನಾಯವಾಗಿ ಸೋತಿದೆ. ಲಂಕಾ ಪಡೆ 1-0 ಅಂತರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಭಾರತ ತಮ್ಮ ಗೌರವ ಉಳಿಸಿಕೊಳ್ಳಲು ಕೊನೆಯ ಪಂದ್ಯವನ್ನು ಗೆದ್ದು ಸರಣಿ ಸಮ ಮಾಡಿಕೊಳ್ಳಬೇಕಾದ ಸವಾಲು ಎದುರಾಗಿದೆ. (ಏಜೆನ್ಸೀಸ್​)

ಬಾಂಗ್ಲಾ ದಂಗೆಯ ಹಿಂದೆ ಪಾಕ್​-ಚೀನಾ ಕೈವಾಡ? ಭಾರತದ ನೆರೆರಾಷ್ಟ್ರಗಳೇ ಟಾರ್ಗೆಟ್​! ಇದಕ್ಕಿಂತಲೂ ಉದಾಹರಣೆ ಬೇಕಾ?

ಸೂಪರ್​​​ ಬೈಕ್​​​ ಡಿಕ್ಕಿಯ ರಭಸಕ್ಕೆ ಹಾರಿಬಿದ್ದು ಪ್ರಾಣ ಕಳೆದುಕೊಂಡ ಕರ್ತವ್ಯನಿರತ ಪೊಲೀಸ್​ ಅಧಿಕಾರಿ!

ಈ ರೀತಿಯೂ ಕ್ಯಾಚ್​ ಹಿಡಿಯಬಹುದಾ? ಕ್ರಿಕೆಟ್​ ಇತಿಹಾಸದಲ್ಲೇ ಇದುವರೆಗೂ ನೋಡಿರದ ಕ್ಯಾಚ್​ ಇದು!

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…