ಹಸ್ತಲಾಘವ ವಿವಾದ, ಪಾಕ್​ಗೆ ಮತ್ತೊಮ್ಮೆ ಮುಖಭಂಗ;​ ನಾಳಿನ ಪಂದ್ಯಕ್ಕೆ ಪೈಕ್ರಾಫ್ಟ್ ಅವರೇ ಅಂಪೈರ್​! |​ IND vs PAK

ವಿಜಯವಾಣಿ (1)
Published on

IND vs PAK: ಪ್ರಸಕ್ತ ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ಎದುರು ಮೊದಲ ಪಂದ್ಯದಲ್ಲೇ ಮಂಡಿಯೂರಿದ ಪಾಕಿಸ್ತಾನ, ಅಂದಿನಿಂದ ಇಂದಿನವರೆಗೂ ಭಾರೀ ಮುಖಭಂಗ ಅನುಭವಿಸುತ್ತಿದೆ. ಪಂದ್ಯ ಸೋತಿದ್ದು ಒಂದೆಡೆಯಾದರೆ, ಟೀಮ್ ಇಂಡಿಯಾ ಆಟಗಾರರು ಕೈಕುಲಕದೆ ಪೆವಿಲಿಯನ್​ಗೆ ಹೋಗಿದ್ದು ಮತ್ತೊಂದೆಡೆ. ಇದೀಗ ನಾಳಿನ ಭಾರತ ವಿರುದ್ಧದ ಸೂಪರ್ 4 ಪಂದ್ಯಕ್ಕೂ ಮೊದಲಿಗೆ ನಡೆಯಬೇಕಿದ್ದ ಪತ್ರಿಕಾಗೋಷ್ಠಿಯನ್ನು ಪಾಕ್ ರದ್ದುಗೊಳಿಸಿದೆ.

ಕಳೆದ ಭಾರತ ಎದುರಿಗಿನ ಪಂದ್ಯದಲ್ಲಿ ಆನ್​ಫೀಲ್ಡ್​ ಅಂಪೈರ್​ ಪೈಕ್ರಾಫ್ಟ್ ಎರಡೂ ತಂಡಗಳ ನಡುವೆ ಹಸ್ತಲಾಘವ ಮಾಡಿಸಲಿಲ್ಲ. ಇದು ಅವರ ಜವಾಬ್ದಾರಿ ಆಗಿತ್ತು. ಆತನನ್ನು ಟೂರ್ನಿಯಿಂದ ಕಿತ್ತುಬಿಸಾಡಿ ಎಂದು ಐಸಿಸಿಗೆ ಪಾಕ್ ಕ್ರಿಕೆಟ್ ಮಂಡಳಿ ಒತ್ತಾಯಿಸಿತ್ತು. ಇದೀಗ ನಾಳೆ ನಡೆಯಲಿರುವ ಟೀಮ್ ಇಂಡಿಯಾ ವಿರುದ್ಧದ ಸೂಪರ್ 4 ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ನಡೆಯಬೇಕಿದ್ದ ಪತ್ರಿಕಾಗೋಷ್ಠಿಯನ್ನು ಪಾಕ್ ರದ್ದುಗೊಳಿಸಿದೆ. ಇದಕ್ಕೆ ಕಾರಣ, ಮಾಧ್ಯಮದವರು ಕೇಳುವ ಪ್ರಶ್ನೆಗಳ ಸುರಿಮಳೆ.

ಅಂಪೈರ್​ ಪೈಕ್ರಾಫ್ಟ್​ರನ್ನು ಕಿಕ್ಔಟ್​ ಮಾಡಿ ಎಂಬ ತಮ್ಮ ಆಗ್ರಹವನ್ನು ಪರಿಗಣಿಸದ ಐಸಿಸಿ ನಿರ್ಧಾರರಿಂದ ಸದ್ಯ ಕೆಂಡಾಮಂಡಲಗೊಂಡಿರುವ ಪಾಕಿಸ್ತಾನ, ಏನು ಮಾಡಲು ಸಾಧ್ಯವಿಲ್ಲದೆ ಕೈಕಟ್ಟಿ ಕುಳಿತಿದೆ. ಅತ್ತ ಪಂದ್ಯದಿಂದ ಮತ್ತು ಟೂರ್ನಿಯಿಂದ ಹೊರನಡೆದರೆ, ಬರುವ ಆದಾಯವೂ ಬರುವುದಿಲ್ಲ ಎಂಬುದು ಪಾಕ್ ಚಿಂತೆ. ಮೊದಲೇ ಆರ್ಥಿಕವಾಗಿ ಬಲಿಷ್ಠವಿಲ್ಲದ ದೇಶವಾಗಿರುವ ಪಾಕಿಸ್ತಾನಕ್ಕೆ ಟೂರ್ನಿ ಆಡುವುದರಿಂದ ಬರುವ ಒಂದೊಂದು ರೂಪಾಯಿ, ದೊಡ್ಡ ಮಟ್ಟದ ಸಹಾಯವನ್ನು ಮಾಡುತ್ತಿದೆ. ಇದೇ ಕಾರಣದಿಂದ, ಸೊಕ್ಕು, ಅಹಂ ಕಟ್ಟಿಟ್ಟು ಟೂರ್ನಿಯಲ್ಲಿ ಮುಂದುವರೆಯುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net