ಏತಡ್ಕದಲ್ಲಿ ವಾಚನಾ ವಸಂತ ಉದ್ಘಾಟನೆ

Bdk_Vachana
Published on

ಬದಿಯಡ್ಕ: ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯ ಏತಡ್ಕದ ಆಶ್ರಯದಲ್ಲಿ ‘ವಾಚನಾ ವಸಂತ’ ವ್ಯವಸ್ಥೆ ಶನಿವಾರ ನಡುಮನೆ ಶ್ರೀಪ್ರಸಾದದಲ್ಲಿ ಉದ್ಘಾಟನೆಗೊಂಡಿತು. ನಡುಮನೆ ಮಾಧವ ಭಟ್, ಯಶೋದಾ ಮಾಧವ ಭಟ್, ವಾರ್ಡ್ ಸದಸ್ಯ ಕೃಷ್ಣ ಶರ್ಮ ಜಿ., ವೈ.ಕೆ.ಗಣಪತಿ ಭಟ್, ಗಣರಾಜ ಏತಡ್ಕ, ಚಂದ್ರಶೇಖರ ಏತಡ್ಕ, ಡಾ.ವೇಣುಗೋಪಾಲ್ ಕಳೆಯತ್ತೋಡಿ, ಉದಯಶಂಕರ ಭಟ್ ಸಿ., ಅಚ್ಚುತ ಭಟ್ ನಡುಮನೆ, ಗ್ರಂಥಪಾಲಕಿ ಶಾಂತಕುಮಾರಿ, ಛಾಯಾಗ್ರಾಹಕ ಕಾರ್ತಿಕ್ ಕುಮಾರ್ ಕೆ., ಜಯಪ್ರಕಾಶ್ ನೆಡುಮನೆ, ದೀಪಾ ನಡುಮನೆ, ಪೂರ್ಣಶ್ರೀ ಹಾಗೂ ಪ್ರಾರ್ಥನಾ ನಡುಮನೆ ಉಪಸ್ಥಿತರಿದ್ದರು.

ಗ್ರಂಥಾಲಯದ ಕಾರ್ಯದರ್ಶಿ ಗಣರಾಜ ಕೆ. ಗ್ರಂಥಾಲಯದ ಆಶ್ರಯದಲ್ಲಿ ಮನೆ ಮನೆಗೆ ಪುಸ್ತಕಗಳನ್ನು ಹಂಚುವ ವಿನೂತನ ವಾಚನಾ ವಸಂತ ಪದ್ಧತಿಯನ್ನು ವಿವರಿಸಿದರು. ಗ್ರಂಥಪಾಲಕಿ ಪುಸ್ತಕ ಹಸ್ತಾಂತರಿಸಿದರು. ಪೂರ್ಣಶ್ರೀ ಹಾಗೂ ಪ್ರಾರ್ಥನಾ ನಡುಮನೆ ಪ್ರಾರ್ಥಿಸಿದರು. ಗ್ರಂಥಾಲಯ ಕಾರ್ಯದರ್ಶಿ ಗಣರಾಜ ಕೆ.ಸ್ವಾಗತಿಸಿದರು. ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ.ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net