

ಕಾರ್ಕಳ: ಯಾವುದೇ ಕೆಲಸಕ್ಕೆ ಸೇರಿದಾಗ ಕಷ್ಟ ಬರುವುದು ಸಹಜ. ಕಷ್ಟಪಟ್ಟು ಕೆಲಸ ಮಾಡಿದರೆ ಯಶಸ್ಸು ನಮ್ಮ ಪಾಲಾಗುವುದರಲ್ಲಿ ಸಂಶಯವಿಲ್ಲ. ಆರೋಗ್ಯವನ್ನು ಚೆನ್ನಾಗಿ ನೋಡಿಕೊಂಡು ಶ್ರದ್ಧೆಯಿಂದ ಕೆಲಸ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಎನ್‌ಎಂಐಟಿ ಅಸಿಸ್ಟೆಂಟ್ ಪ್ರೊ.ವೀಣಾ ಕುಮಾರಿ ಹೇಳಿದರು.
ಕಾರ್ಕಳ ಶ್ರೀ ಭುವನೇಂದ್ರ ಕಾಲೇಜು ಐಟಿ ಕ್ಲಬ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಪ್ರಾಂಶುಪಾಲ ಡಾ.ಮಂಜುನಾಥ ಎ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ದತ್ತಾತ್ರೇಯ ಮಾರ್ಪಳ್ಳಿ, ಐಕ್ಯುಎಸಿ ಕೋ ಆರ್ಡಿನೇಟರ್ ಪ್ರೊ.ಎಚ್.ಜಿ.ನಾಗಭೂಷಣ್, ಐಟಿ ಕ್ಲಬ್ ಸಂಯೋಜಕಿ ಸ್ವಾತಿ ಕೆ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅದಿತಿ ಕಾರಂತ್ ನಿರೂಪಿಸಿದರು. ಶ್ರದ್ಧಾ ಶೆಟ್ಟಿ ವಂದಿಸಿದರು.