ಗೋಳಿಯಂಗಡಿಯಲ್ಲಿ ವಿಶ್ವಕರ್ಮ ಯಜ್ಞ

sabhe-1
ಗೋಳಿಯಂಗಡಿಯಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಆಮ್ರಕಲ್ಲು ಭಾಸ್ಕರ ಆಚಾರ್ಯ, ಮಡಾಮಕ್ಕಿ ಜನಾರ್ದನ ಆಚಾರ್ಯ ದಂಪತಿಗಳನ್ನು ಸನ್ಮಾನಿಸಲಾಯಿತು.
Published on

ಗೋಳಿಯಂಗಡಿ: ಇಲ್ಲಿನ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ ವತಿಯಿಂದ ಗೋಳಿಯಂಗಡಿ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘದ ನಿವೇಶನದಲ್ಲಿ 25ನೇ ವರ್ಷದ ವಿಶ್ವಕರ್ಮ ಯಜ್ಞ ನೆರವೇರಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗಣೇಶ್ ಅರಸಮ್ಮಕಾನು ಮಾತನಾಡಿದರು. ಗೋಳಿಯಂಗಡಿ ಶ್ರೀ ವಿಶ್ವಕರ್ಮ ಸಂಘ ಅಧ್ಯಕ್ಷ ಶ್ರೀಧರ ಆಚಾರ್ಯ ಬೆಳ್ವೆ ಅಧ್ಯಕ್ಷತೆ ವಹಿಸಿದರು. ಆಮ್ರಕಲ್ಲು ಭಾಸ್ಕರ ಆಚಾರ್ಯ, ಮಡಾಮಕ್ಕಿ ಜನಾರ್ದನ ಆಚಾರ್ಯ ದಂಪತಿಯನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಹಿತ ವಿವಿಧ ಕಾರ್ಯಕ್ರಮ ನಡೆಯಿತು.

ಪ್ರಮುಖರಾದ ಪರ್ಕಳ ಸಂದೇಶ್ ಪುರೋಹಿತ್, ಸುರೇಶ ಆಚಾರ್ಯ, ರಮೇಶ ಆಚಾರ್ಯ, ನಾರಾಯಣ ಶೆಟ್ಟಿ, ಗುಣವತಿ ಎಂ ಆಚಾರ್ಯ, ಶಶಿಕಲಾ ಸೀತಾರಾಮ ಆಚಾರ್ಯ, ಯೋಗೀಶ್ ಆಚಾರ್ಯ, ಲಕ್ಷ್ಮೀ ಆಚಾರ್ಯ ಇತರರು ಇದ್ದರು. ನಾರಾಯಣ ಆಚಾರ್ಯ ಪ್ರಸ್ತಾವನೆಗೈದರು. ಪವನ್ ಆಚಾರ್ಯ ಸ್ವಾಗತಿಸಿದರು. ಉದಯ ಆಚಾರ್ಯ ವಂದಿಸಿದರು. ಅನಂತಯ್ಯ ಆಚಾರ್ಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net