

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ದರೋಡೆ, ರಸ್ತೆ ಅಪಘಾತಗಳು ಹಾಗೂ ಇನ್ನಿತರ ಅವಘಡಗಳನ್ನು ಶೀಘ್ರ ಪತ್ತೆ ಹಚ್ಚುವಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಅತಿ ಅಗತ್ಯ ಎಂದು ಹೆಬ್ರಿ ಪೋಲಿಸ್ ಠಾಣಾ ಉಪ ನಿರೀಕ್ಷಕ ಮಹೇಶ್ ಟಿ.ಎಂ.ಹೇಳಿದರು.
ಸಂತೆಕಟ್ಟೆ-ಹೆಬ್ರಿ ಸರ್ಕಲ್ನಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾ ಲೋಕಾರ್ಪಣೆಗೈದು ಮಾತನಾಡಿದರು. ಲಯನ್ಸ್ ಕ್ಲಬ್ ಹೆಬ್ರಿ ಸಿಟಿ ನೇತೃತ್ವದಲ್ಲಿ ಶ್ರೀವಾಸುಕಿ ಇಂಡಸ್ಟೀಸ್ ಸಂತೆಕಟ್ಟೆ, 38ನೇ ಕಳ್ತೂರು ಗ್ರಾಪಂ, ವೆಲೆನ್ಸಿ ಆಗ್ರೋ ಪ್ರೈವೆಟ್ ಲಿಮಿಟೆಡ್ ಕಳ್ತೂರು ಸಂತೆಕಟ್ಟೆ, ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕೊಕ್ಕರ್ಣೆ ಸಹಯೋಗದೊಂದಿಗೆ ಸಂತೆಕಟ್ಟೆ ಸರ್ಕಲ್ನಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಹೆಬ್ರಿ ಸಿಟಿ ಲಯನ್ಸ್ ಅಧ್ಯಕ್ಷ ಲಯನ್ ರಘುರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಲಯನ್ಸ್ ಜಿಲ್ಲೆ 317 ಸಿಯ ನಿಯೋಜಿತ ಪ್ರಥಮ ಉಪ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಯೋಜನೆಗೆ ದೇಣಿಗೆ ನೀಡಿದರು.38ನೇ ಕಳ್ತೂರು ಪಿಡಿಒ ಸವಿತಾ ಎ.ಸಿ., ವೆಲೆನ್ಸಿ ಆಗ್ರೋ ಪ್ರೈವೆಟ್ ಲಿಮಿಟೆಡ್ನ ಪ್ರವೀಣ್, ನಿಯೋಜಿತ ಕಾರ್ಯದರ್ಶಿ ಹರೀಶ್ ಶೆಟ್ಟಿ ನಾಡ್ವಾಲ, ಉದಯ ಕುಮಾರ್ ನಾಯಕ್, ಪ್ರಸಾದ್ ರೈ, ಡಾ.ವಸಂತ್, ಸರೋಜಾ ರಘುರಾಮ್ ಶೆಟ್ಟಿ, ಹೆಬ್ರಿ ಪೋಲಿಸ್ ಠಾಣಾ ಸಿಬ್ಬಂದಿ, ಪಂಚಾಯಿತಿ ಸದಸ್ಯರಾದ ನಾಗೇಶ್ ನಾಯ್ಕ, ಉಷಾ ಪೂಜಾರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಹೆಬ್ರಿ ಸಿಟಿ ಲಯನ್ಸ್ನ ಟಿ.ಜಿ.ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.