More

    ಬಿತ್ತನೆಗೆ ಅಣಿಯಾದ ನೇಗಿಲಯೋಗಿ, ಬಿರುಸುಗೊಂಡ ಕೃಷಿ ಕಾರ್ಯ, ಹೋಬಳಿಯಲ್ಲಿ 5,400 ಹೆಕ್ಟೇರ್ ಗುರಿ

    ವಿಜಯವಾಣಿ ಸುದ್ದಿಜಾಲ ಕೋಟ

    ಕೋಟ ಹೋಬಳಿಯಲ್ಲಿ ಭತ್ತ ಬಿತ್ತನೆ ಕಾರ್ಯಕ್ಕೆ ರೈತರು ಸಿದ್ಧರಾಗಿದ್ದು ಈಗಾಗಲೇ ಕೆಲವು ಭಾಗದಲ್ಲಿ ಬಿತ್ತನೆ ಕಾರ್ಯ ಆರಂಭಗೊಂಡಿದೆ.
    ಕೋಟ ಹೋಬಳಿಯಲ್ಲಿ 5,400 ಹೆಕ್ಟೇರ್ ಭತ್ತ ನಾಟಿ ಮಾಡುವ ಗುರಿ ಹೊಂದಲಾಗಿದ್ದು, ಈಗಾಗಲೇ ಬಿತ್ತನೆ ಕಾರ್ಯ ಆರಂಭಗೊಂಡಿದೆ. ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ಕೇಂದ್ರದಲ್ಲಿ ಬಿತ್ತನೆ ಬೀಜ ಖರೀದಿ ಮಾಡಲಾಗುತ್ತಿದೆ.

    ಎಂಒ4ಗೆ ಆಸಕ್ತಿ

    ಇತ್ತೀಚಿನ ವರ್ಷಗಳಲ್ಲಿ ರೈತರು ಎಂಒ ಫೋರ್ ಭತ್ತ ತಳಿಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಕೆಲವೊಂದು ಭಾಗಗಳಲ್ಲಿ ಐಶ್ವರ್ಯ, ಜಯ, ಕೆಂಪುಮುಖ್ತಿ, ಉಮಾ ಸೇರಿದಂತೆ ಇನ್ನಿತರ ಬೀಜಗಳನ್ನು ಬಳಸುತ್ತಿದ್ದಾರೆ. ಎಂಒ4 ತಳಿಗೆ ಬೇಡಿಕೆ ಹೆಚ್ಚಾಗಿದ್ದು ಈಗಾಲೇ 173 ಕ್ವಿಂಟಾಲ್ ಬೀಜ ಪೂರೈಕೆಯಾಗಿದೆ. ಇದರಲ್ಲಿ ಎಂಒ4 97.75 ಕ್ವಿಂಟಾಲ್, ಉಮಾ 25.20 ಕ್ವಿಂಟಾಲ್, ಕೆಂಪುಮುಖ್ತಿ 50 ಕ್ವಿಂಟಾಲ್ ಭತ್ತವನ್ನು ರೈತರು ಖರೀದಿಸಿದ್ದಾರೆ.

    ಯಾಂತ್ರೀಕೃತ ಬಿತ್ತನೆ

    ಇತ್ತೀಚಿನ ವರ್ಷಗಳಲ್ಲಿ ಕೃಷಿ ಕಾರ್ಯ ಸಾಕಷ್ಟು ಬದಲಾವಣೆ ಕಂಡಿದೆ. ಅದರಲ್ಲಿ ಸಾಂಪ್ರದಾಯಿಕ ಕೃಷಿ ಕಾರ್ಯಕ್ಕೆ ವಿದಾಯ ಹಾಡಿ ಯಾಂತ್ರೀಕೃತ ಕೃಷಿಗೆ ಹಚ್ಚಿನ ಆದ್ಯತೆ ನೀಡಲಾಗುತ್ತಿದೆ. ಯಾಂತ್ರಿಕೃತದ ಭಾಗವಾಗಿ ಟ್ರಾೃಕ್ಟರ್, ಟಿಲ್ಲರ್‌ಗಳ ಕಾರುಬಾರು ಅತಿಯಾಗಿ ಕಾಣುತ್ತಿದೆ.

    ಮಳೆಯ ಆಸರೆ

    ಹೆಚ್ಚಾಗಿ ರೈತರು ಮೇ ತಿಂಗಳಲ್ಲಿ ಉಳುಮೆ ಕಾರ್ಯ ಪೂರ್ಣಗೊಳಿಸಿ ಬಿತ್ತನೆ ಕಾರ್ಯಕ್ಕೆ ಅಣಿಯಾಗುತ್ತಾರೆ. ಈ ಬಾರಿ ಸಾಕಷ್ಟು ಮಳೆಯಾಗಿರುವುದರಿಂದ ಈವರೆಗೆ ನೀರಿನ ಸಮಸ್ಯೆಯಾಗಿಲ್ಲ.

    ಈ ವರ್ಷ ಮಳೆ ಬೇಗ ಸುರಿದ ಹಿನ್ನೆಲೆಯಲ್ಲಿ ಕೃಷಿ ಕಾಯಕ ವೇಗ ಪಡೆದಿದೆ. ಕೋಟದ ರೈತಸಂಪರ್ಕ ಕೇಂದ್ರದಲ್ಲಿ ಹೆಚ್ಚಿನ ರೈತರು ಬಿತ್ತನೆ ಬೀಜ ಪಡೆದುಕೊಂಡಿದ್ದು, ಕೆಲವು ಭಾಗಗಳಲ್ಲಿ ಈಗಾಲೇ ಬಿತ್ತನೆ ಕಾರ್ಯ ನಡೆದಿದೆ.
    -ಭಾಸ್ಕರ್ ಶೆಟ್ಟಿ ಮಣೂರು, ಹಿರಿಯ ರೈತ

    ರೈತಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಗಳನ್ನು ರೈತರು ಖರೀದಿಸುತ್ತಿದ್ದಾರೆ. ಬಿತ್ತನೆ ಕಾರ್ಯವೂ ಬಿರುಸುಗೊಂಡಿದೆ. ಕೃಷಿ ಇಲಾಖೆಯಿಂದ ರೈತಸಮುದಾಯಕ್ಕೆ ಅಗತ್ಯ ನೆರವು ನೀಡಲಿದೆ.
    -ಸುಪ್ರಭಾ ಕೋಟ, ರೈತಸಂಪರ್ಕ ಕೇಂದ್ರದ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts