More

    ಮೇ 26ರಂದು ಕುಂದಾಪುರದಲ್ಲಿ ಕೃಷಿಕರ ಸಭೆ

    ಗಂಗೊಳ್ಳಿ: ಉಡುಪಿ ಜಿಲ್ಲಾ ಕೃಷಿಕ ಸಂಘ ಕುಂದಾಪುರ ತಾಲೂಕು ಸಮಿತಿ ಆಶ್ರಯದಲ್ಲಿ ಕೃಷಿಕರ ಸಭೆ ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಮೇ 26ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ.

    ಪ್ರಗತಿಪರ ಕೃಷಿಕ ಕಂದಾವರ ಸತೀಶ್ ಶೇರಿಗಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಕೃಷಿಕ ಸಂಘ ಕುಂದಾಪುರ ತಾಲೂಕು ಸಮಿತಿ ಅಧ್ಯಕ್ಷ ರೋನಾಲ್ಡ್ ಡಿಸೋಜ ಆನಗಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ವಾರ ರೆಬೆಲ್ಲೊ ಮರವಂತೆ, ಬಾಲಕೃಷ್ಣ ಶೆಟ್ಟಿ ಯಡಾಡಿ-ಮತ್ಯಾಡಿ, ರಾಮಚಂದ್ರ ಗಾಣಿಗ ಬಳ್ಕೂರು ಮೊದಲಾದವರು ಭಾಗವಹಿಸುವರು. ಮಾಹಿತಿದಾರರಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ್ ಭಟ್, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪಾಲ್ಗೊಳ್ಳಲಿದ್ದಾರೆ.

    ಕೃಷಿಯಲ್ಲಿ ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆ, ಅವುಗಳನ್ನು ಎದುರಿಸುವ, ಪರಿಹರಿಸುವ ಮಾರ್ಗೋಪಾಯ, ವೈಜ್ಞಾನಿಕ ಹಾಗೂ ಕಡಿಮೆ ಖರ್ಚಿನಲ್ಲಿ ಲಾಭದಾಯಕವಾಗಿ ವಿವಿಧ ಕೃಷಿ ಮಾಡುವ ಕ್ರಮ, ಅವುಗಳ ನಾಟಿ, ಆರೈಕೆ, ಕೀಟ-ರೋಗ ಬಾಧೆಗಳ ನಿರ್ವಹಣೆ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts