More

    ಮೊಬೈಲ್​ ನೋಡುವುದರಿಂದ ಕಣ್ಣಿನ ನೋವು ಹೆಚ್ಚಾಗಿಯೇ? ಇಲ್ಲಿದೆ ನೋಡಿ ಉಪಯುಕ್ತವಾದ ಸಲಹೆ

    ಆಧುನಿಕ ಜೀವನಶೈಲಿಯಿಂದಾಗಿ ಅನೇಕ ಜನರು ತಮ್ಮ ದೇಹದ ಬಗ್ಗೆ ವಿಶೇಷ ಗಮನ ನೀಡುವುದಿಲ್ಲ. ಇದರಿಂದಾಗಿ ಅನೇಕರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಲ್ಲದೇ ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದ ದೃಷ್ಟಿ ಸಮಸ್ಯೆಯೂ ಬರುತ್ತಿದೆ. ಆದರೆ, ಕಣ್ಣಿನ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವ ಬಹುತೇಕರಿಗೆ ಕಂಪ್ಯೂಟರ್, ಲ್ಯಾಪ್​ಟಾಪ್, ಮೊಬೈಲ್​​ಗಳನ್ನು ನೋಡುವುದರಿಂದ ನೋವು ಹೆಚ್ಚಾಗಿದ್ದು, ಕೆಲವರಿಗೆ ತಲೆನೋವು ಕೂಡ ಬರುತ್ತಿದೆ. ಇದರೊಂದಿಗೆ ದೃಷ್ಟಿ ಸಮಸ್ಯೆಯೂ ಉಲ್ಬಣಗೊಳ್ಳುತ್ತಿದೆ.

    ಹೀಗಾಗಿ ದೃಷ್ಟಿ ಸುಧಾರಿಸುವ ಆಹಾರಗಳ ಬಗ್ಗೆ ವಿಶೇಷ ಗಮನ ನೀಡಬೇಕು. ಲುಟೀನ್ ಮತ್ತು ಜಿಯಾಕ್ಸಾಂಥಿನ್ ಅಂಶಗಳು ಹೆಚ್ಚು ಇರುವ ಆಹಾರಗಳನ್ನು ಪ್ರತಿದಿನ ಸೇವಿಸಬೇಕು.

    ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಹಸಿರು ತರಕಾರಿಗಳನ್ನು ಸೇವಿಸುವುದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದ ವಿಟಮಿನ್ ಎ ಮತ್ತು ವಿಟಮಿನ್ ಸಿ ದೊರೆಯುತ್ತದೆ. ಆದ್ದರಿಂದ ಪ್ರತಿ ದಿನ ಈ ಕೆಳಗಿನ ಆಹಾರಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರ ಪಡೆಯಬಹುದು.

    ಇದನ್ನೂ ಓದಿ: ಮತ್ತೆ ಶಾಲೆಯತ್ತ ಸಿಂಧು ; ಟುರೆಟ್ ಸಿಂಡ್ರೋಮ್‌ನಿಂದ ಬಳಲುತ್ತಿರುವ ಹುಡುಗಿಯ ಪಾತ್ರದಲ್ಲಿ ನಟನೆ

    ಪಾಲಕ್​: ಕಣ್ಣಿನ ಸಮಸ್ಯೆಗಳಿಗೆ ಪಾಲಕ್ ಸೊಪ್ಪು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರಲ್ಲಿರುವ ಲುಟೀನ್ ಮತ್ತು ಜಿಯಾಕ್ಸಾಂಥಿನ್‌ನಂತಹ ಆ್ಯಂಟಿ ಆ್ಯಕ್ಸಿಡೆಂಟ್‌ಗಳು ದೃಷ್ಟಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದು ದೇಹಕ್ಕೆ ವಿಟಮಿನ್ ಎ ಅನ್ನು ಸಹ ನೀಡುತ್ತದೆ. ಆದ್ದರಿಂದ ತೀವ್ರ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಪಾಲಕ್ ಸಲಾಡ್ ಸೇವಿಸಬೇಕು.

    ಕೋಸುಗಡ್ಡೆ: ಹಸಿರು ಎಲೆಗಳ ತರಕಾರಿಗಳು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಕೋಸುಗಡ್ಡೆಯಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಅಂಶ ಸಮೃದ್ಧವಾಗಿವೆ. ಈ ಅಂಶಗಳು ಕಣ್ಣಿನ ರೆಟಿನಾದ ಆ್ಯಕ್ಸಿಡೇಷನ್​ಗೆ ಸಂಬಂಧಿಸಿದ ಎಲ್ಲ ರೀತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಅದರಲ್ಲೂ ಲ್ಯಾಪ್ ಟಾಪ್, ಮೊಬೈಲ್ ಬಳಸುವವರು ಕೋಸುಗಡ್ಡೆ ಸೇವಿಸಿದರೆ ಕಣ್ಣಿನ ಸಮಸ್ಯೆ ಬರುವುದಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. (ಏಜೆನ್ಸೀಸ್​)

    ಲವ್​ ಬ್ರೇಕಪ್​ಗೆ ಒಪ್ಪದ ಪ್ರಿಯಕರನನ್ನು ಕೊಲೆ ಮಾಡಿದ್ದ ಆರೋಪಿ ಜೈಲಿನಿಂದ ಬಿಡುಗಡೆ! ಮಾಧ್ಯಮಗಳಿಗೆ ಆಕೆ ಹೇಳಿದ್ದೇನು?

    ಭೂರಮೆಯ ಸೊಬಗಿನ ತಾಣಗಳು: ವಿಶ್ವ ಪ್ರವಾಸೋದ್ಯಮ ದಿನ ಇಂದು

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts