Immigration Bill : ಲೋಕಸಭೆಯಲ್ಲಿ ಗುರುವಾರ ವಲಸೆ ಮತ್ತು ವಿದೇಶಿಯರ ಮಸೂದೆ 2025 ಅನ್ನು ಅಂಗಿಕಾರ ಮಾಡಲಾಗಿತು.
ಮಸೂದೆ ಅಂಗಿಕಾರದ ಬಳಿಕ ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ, ” ಭಾರತಕ್ಕೆ ಪ್ರವಾಸಿಯಾಗಿ, ಶಿಕ್ಷಣ, ಆರೋಗ್ಯ ಮತ್ತು ವ್ಯಾಪರದ ದೃಷ್ಟಿಯಿಂದ ದೇಶಕ್ಕೆ ಬರುವವರನ್ನು ಸ್ವಾಗತಿಸಲು ಸರ್ಕಾರ ಸದಾ ಸಿದ್ಧವಿದೆ ಎಂದ ಅವರು, ದೇಶಕ್ಕೆ ಬೆದರಿಕೆ ಒಡ್ಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಇದನ್ನೂ ಓದಿ:ಸಫಾಯಿ ಕರ್ಮಚಾರಿಗಳ ದುರುಪಯೋಗ ಕಂಡು ಬಂದಲ್ಲಿ FIR ದಾಖಲಿಸಲು ಡಿಸಿ ಫೌಜಿಯಾ ತರನ್ನುಮ್ ಸೂಚನೆ
ಭಾರತಕ್ಕೆ ಭೇಟಿ ನೀಡುವ ದುರುದ್ದೇಶಪೂರಿತ ಉದ್ದೇಶಗಳನ್ನು ಹೊಂದಿರುವ ವ್ಯಕ್ತಿಗಳನ್ನು ಮಾತ್ರ ತಡೆಯುವುದು ಈ ಮಸೂದೆಯ ಉದ್ದೇವಾಗಿದೆ. ಅಲ್ಲದೆ, ಸರ್ಕಾರ ಕೂಡ ಇದನ್ನೇ ಮಾಡುತ್ತದೆ. ಇದು(ಭಾರತ) ಧರ್ಮಶಾಲೆಯಲ್ಲ ಎಂದು ಎಂದರು.
ಇದನ್ನೂ ಓದಿ:ಸಫಾಯಿ ಕರ್ಮಚಾರಿಗಳ ದುರುಪಯೋಗ ಕಂಡು ಬಂದಲ್ಲಿ FIR ದಾಖಲಿಸಲು ಡಿಸಿ ಫೌಜಿಯಾ ತರನ್ನುಮ್ ಸೂಚನೆ
ವಲಸೆ ಮತ್ತು ವಿದೇಶಿಯರ ಮಸೂದೆ ಶಾಸನವು ದೇಶದ ಭದ್ರತೆಯನ್ನು ಬಲಪಡಿಸುತ್ತದೆ. ಆರ್ಥಿಕತೆ ಮತ್ತು ವ್ಯವಹಾರವನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಉತ್ತೇಜಿಸುತ್ತದೆ. ವಲಸೆ ಮಸೂದೆಯು ಭಾರತಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ವಿದೇಶಿಯರ ಬಗ್ಗೆ ದೇಶವು ನವೀಕೃತ ಮಾಹಿತಿಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ ಎಂದು ಕೇಂದ್ರ ಗೃಹ ಸಚಿವರು ವಿವರವಾಗಿ ತಿಳಿಸಿದರು.(ಏಜೆನ್ಸೀಸ್)
ವಿದ್ಯುತ್ ದರ ಹೆಚ್ಚಳ ಮಾಡಿದ ಸರ್ಕಾರ : ಹಾಲಿನ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಕರೆಂಟ್ ಶಾಕ್! | Electricity
ಒಳಮೀಸಲಾತಿ ನೀಡಿ ಜನರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಬದ್ಧ; ಸಚಿವ ಎಚ್.ಕೆ.ಪಾಟೀಲ್ ಭರವಸೆ | Internal Reservation