ಡಿವೋರ್ಸ್​ ಬಗ್ಗೆ ಮೌನ ಮುರಿದ ಅಭಿಷೇಕ್! ಅಸಲಿ ವಿಚಾರ ತಿಳಿದು ಅಭಿಮಾನಿಗಳ ಆಸೆ ನುಚ್ಚುನೂರು

Abhishek Bachchan

ಮುಂಬೈ: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಾಲಿವುಡ್​​ನ ನೆಚ್ಚಿನ ತಾರಾ ಜೋಡಿ. ಆದರೆ, ಇತ್ತೀಚೆಗಷ್ಟೇ ಇವರಿಬ್ಬರ ವಿಚ್ಛೇದನ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಇದು ಕೇವಲ ವದಂತಿ ಎನಿಸಿದರೂ ಅನಂತ್ ಅಂಬಾನಿ ಮದುವೆಯಲ್ಲಿ ಐಶ್ವರ್ಯಾ ಮತ್ತು ಬಚ್ಚನ್​ ಕುಟುಂಬ ಬೇರೆ ಬೇರೆಯಾಗಿ ಕಾಣಿಸಿಕೊಂಡಿತು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್​ ಆಗಿ, ಡಿವೋರ್ಸ್​ ವದಂತಿಗಳಿಗೆ ಬಲ ನೀಡಿದವು.

ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಬೇರೆಯಾಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿರುವಾಗಲೇ ವಿಚ್ಛೇದನದ ಪೋಸ್ಟ್ ಒಂದನ್ನು ಲೈಕ್​ ಮಾಡುವ ಮೂಲಕ ಅಭಿಷೇಕ್​, ಚರ್ಚೆಗೆ ತುಪ್ಪ ಸುರಿದಿದ್ದರು. ಇಬ್ಬರು ಒಟ್ಟಿಗೆ ಕಾಣಿಸಿಕೊಂಡು ತುಂಬಾ ದಿನಗಳು ಕಳೆದಿದ್ದು, ಇಬ್ಬರ ನಡುವೆ ಏನೋ ಸರಿಯಿಲ್ಲ ಎಂಬುದು ಅಭಿಮಾನಿಗಳಿಗೆ ಖಚಿತವಾಗಿದೆ. ಈ ಎಲ್ಲ ಚರ್ಚೆಗಳ ನಡುವೆ ಇದೀಗ ವಿಚ್ಛೇದನದ ಬಗ್ಗೆ ಅಭಿಷೇಕ್ ಬಚ್ಚನ್ ಪ್ರತಿಕ್ರಿಯಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸದ್ಯ ಅಭಿಷೇಕ್​ ಬಚ್ಚನ್ ಅವರು ಡಿವೋರ್ಸ್​ ಬಗ್ಗೆ​ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾದ ವಿಡಿಯೋ ಇತ್ತೀಚಿನದ್ದು ಎಂದು ಭಾವಿಸಿ, ಅಭಿಮಾನಿಗಳು ತುಂಬಾ ಖುಷಿಯಾಗಿದ್ದರು. ಆದರೆ, ಇದು ಎಂಟು ವರ್ಷಗಳ ಹಿಂದಿನ ವಿಡಿಯೋ ಎಂದು ತಿಳಿದು ಅಭಿಮಾನಿಗಳು ಭ್ರಮನಿರಸನಗೊಂಡಿದ್ದಾರೆ. ಆಗ ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ತೊಡಿಸಿದ ಮದುವೆಯ ಉಂಗುರವನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸುವ ಮೂಲಕ ನಾನು ಇನ್ನೂ ಮದುವೆಯಾಗಿದ್ದೇನೆ ಎಂದು ಪ್ರತಿಕ್ರಿಯಿಸಿದರು. ಸದ್ಯ ಈ ವಿಡಿಯೋ ಈಗ ವೈರಲ್​ ಆಗುತ್ತಿದೆ.

ವಿಚ್ಛೇದನದ ವದಂತಿಗಳ ಬಗ್ಗೆ ನಾನೇನೂ ಹೇಳುವುದಿಲ್ಲ. ನೀವು ಎಲ್ಲವನ್ನೂ ಉತ್ಪ್ರೇಕ್ಷೆ ಮಾಡುತ್ತಿದ್ದೀರಿ. ನಿಮಗೆ ಒಂದು ಕತೆ ಬೇಕು. ಅದಕ್ಕಾಗಿಯೇ ನೀವು ಈ ಚರ್ಚೆ ನಡೆಸುತ್ತಿದ್ದೀರಿ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೂ ಪರವಾಗಿಲ್ಲ ನಾವು ಸೆಲೆಬ್ರಿಟಿಗಳು. ಇದನ್ನು ಎದುರಿಸಲೇಬೇಕು. ನಾನು ಇನ್ನೂ ಮದುವೆಯಾಗಿದ್ದೇನೆ ಎಂದು ಐಶ್ವರ್ಯಾ ತೊಡಿಸಿದ ರಿಂಗ್​ ಪ್ರದರ್ಶಿಸಿ ಈ ಹಿಂದೆ ಅಭಿಷೇಕ್ ಬಚ್ಚನ್ ಪ್ರತಿಕ್ರಿಯೆ ನೀಡಿದ್ದರು. (ಏಜೆನ್ಸೀಸ್​)

ಮನು ಭಾಕರ್-ನೀರಜ್​ ಮದ್ವೆ ಫಿಕ್ಸ್​ ಆಯ್ತಾ? ತಲೆ ಮೇಲೆ ಕೈಯಿಟ್ಟು ಆಣೆ ಮಾಡಿಸಿದ ತಾಯಿ, ನಾಚಿದ ಮನು!

ಪಾಕ್​ ಸರ್ಕಾರದ ಬಳಿ ಚಿನ್ನದ ಹುಡುಗ ನದೀಮ್ ಇಟ್ಟ ಬೇಡಿಕೆ ಕೇಳಿ ಬಹುಪರಾಕ್​ ಎಂದ ನೆಟ್ಟಿಗರು!​

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…