More

    ಅಕ್ರಮ ಗಣಿಗಾರಿಕೆ ಅವ್ಯಾಹತ

    -ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಮೂರು ತಿಂಗಳ ಹಿಂದೆ ಕಂದಾಯ ಇಲಾಖೆ ಹಾಗೂ ಗಣಿ ಇಲಾಖೆಯವರು ಅಕ್ರಮವಾಗಿ ನಡೆಯುತ್ತಿದ್ದ ಕೆಂಪುಕಲ್ಲು ಗಣಿ ಮೇಲೆ ದಾಳಿ ನಡೆಸಿದ್ದರು. ಕೆಲವು ಕಡೆ ಗಣಿ ನಡೆಯುತ್ತಿರುವ ಜಾಗ ಕಂದಾಯ ಇಲಾಖೆಗೆ ಸೇರಿದರೆ, ಮತ್ತೆ ಕೆಲ ಪ್ರದೇಶ ಅರಣ್ಯ ಭೂಮಿ, ಡೀಮ್ಡ್ ಫಾರೆಸ್ಟ್ ಜಾಗದಲ್ಲಿ ಬರುತ್ತಿದೆ. ಅಕ್ರಮ ಗಣಿಗಾರಿಕೆ ನಡೆಸುವ 32 ಮಂದಿ ವಿರುದ್ಧ ಗಣಿ ಇಲಾಖೆ ಅಧಿಕಾರಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದೇವೆ ಎನ್ನುತ್ತಿದ್ದಾರೆ. ಆದರೆ ಅಕ್ರಮ ಗಣಿ ನಡೆಸಿದವರ ಪಟ್ಟಿ ಕೊಡಿ ಅಂದ್ರೆ ಮೀನಾಮೇಷ ಎಣಿಸುತ್ತಿದ್ದಾರೆ.

    ಅಕ್ರಮ ಗಣಿ ಬಿಟ್ಟು ಬೇರೆ ಇಲಾಖೆಯಲ್ಲಾದರೂ ಜನರ ಕೆಲಸ ಆಗುತ್ತದಾ ಎಂದರೆ ಜಿಲ್ಲಾಡಳಿತ ಚುನಾವಣೆಯಲ್ಲಿ ಬ್ಯುಸಿ. ಹಳ್ಳಿ ಮೂಲೆಯಿಂದ ಬಂದ ಜನರನ್ನು ಚುನಾವಣೆ ಇರುವುದರಿಂದ ಕೆಲಸ ಈಗಾಗೋಲ್ಲ ನಾಳೆ ಬನ್ನಿ ಎಂದು ಸಾಗಹಾಕುತ್ತಾರೆ. ಕಚೇರಿ ಸಿಬ್ಬಂದಿ ಚುನಾವಣೆಗೆ ನಿಯಕ್ತರಾಗಿ ಕಚೇರಿ ಖಾಲಿ. ಯಾವಾಗ ಎಷ್ಟು ಹೊತ್ತಿಗೆ ಬರುತ್ತಾರೋ ಗೊತ್ತಿಲ್ಲ ಎನ್ನುವ ರೆಡಿಮೇಡ್ ಉತ್ತರ ಸಿಗುತ್ತದೆ. ಪೊಲೀಸ್ ಇಲಾಖೆ ರೋಡ್ ಶೋ, ಸಭೆಗಳಿಗೆ ಭದ್ರತೆ ಒದಗಿಸುವುದರಲ್ಲಿ ಹೈರಾಣಾದರೆ, ಜನಸಾಮಾನ್ಯರು ಕಚೇರಿ ಮನೆ ಅಂತ ತಿರುಗುತ್ತಾ ಹಿಡಿಶಾಪ ಹಾಕುತ್ತಿದ್ದಾರೆ. ಚುನಾವಣೆಯಿಂದ ಆಡಳಿತ ವ್ಯವಸ್ಥೆ ಹಳಿ ತಪ್ಪಿದೆ. ಅಕ್ರಮ ಚಟುವಟಿಕೆಗಳಿಗೆ ವರವಾಗಿ ಪರಿಣಮಿಸಿದ್ದು, ಅಕ್ರಮ ಗಣಿಗಂತೂ ಕಡಿವಾಣವೇ ಇಲ್ಲ.

    ಅಲೂರು ಅಕ್ರಮ ಗಣಿ ದೌರ್ಜನ್ಯದ ವಿರುದ್ಧ ಖುದ್ದು ಸಂತ್ರಸ್ತ ಕುಂದಾಪುರ ಎಸಿ, ಹಾಗೂ ತಹಸೀಲ್ದಾರ್‌ಗೆ ದೂರು ಕೊಟ್ಟಿದ್ದರೂ ಅಕ್ರಮ ನಿಲ್ಲಲಿಲ್ಲ ಎಂದರೆ ಕಾನೂನು ಪಾಲಕರು ಯಾವ ಮಟ್ಟಿಗೆ ಪಕ್ಷಪಾತಿಗಳಾಗಿದ್ದಾರೆ ಎನ್ನೋದಕ್ಕೆ ಮತ್ತೆ ಬೇರೆ ಸಾಕ್ಷಿ ಬೇಕಾ?

    ಎತ್ತಂಗಡಿಯಾದರೂ ಇಲ್ಲೇ ಇದ್ದಾರೆ

    ಉಡುಪಿ ಜಿಲ್ಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿಗೆ ಎರಡು ಬಾರಿ ಉಡುಪಿಯಿಂದ ಎತ್ತಂಗಡಿ ಆಗಿದ್ದರೂ ಅವರು ಉಡುಪಿಯಲ್ಲಿ ಮತ್ತೆ ಪ್ರತಿಷ್ಠಾಪಿತರು. ಜಿಲ್ಲೆಯಲ್ಲಿ ಮರಳು, ಶಿಲೆಕಲ್ಲು, ಕೆಂಪುಕಲ್ಲು ಗಣಿ ಅವ್ಯಾಹತವಾಗಿ ನಡೆಯುತ್ತಿದ್ದರೂ ಇಲಾಖೆಗೆ ಸಂಬಂಧವೇ ಇಲ್ಲದಂಥ ನಿರ್ಲಿಪ್ತತೆ. ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇರುವುದು ಏಕೆ? ಗಣಿ ನಡೆಸಬೇಕಿದ್ದರೆ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪರವಾನಿಗೆ ಕೊಡಬೇಕು. ಹಿರಿಯ ಭೂ ವಿಜ್ಞಾನಿ ನಮಗೆ ಸಂಬಂಧವೇ ಎಲ್ಲ ಎನ್ನುವುದಾದರೆ, ಸರ್ಕಾರ ಗಣಿ ಇಲಾಖೆ ಪರವಾನಿಗೆ ಪಡೆಯುವುದನ್ನು ರದ್ದು ಮಾಡಲಿ. ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿರುದ್ಧ ಸಾಕಷ್ಟು ದೂರುಗಳು ಸರ್ಕಾರ ಹಾಗೂ ಲೋಕಾಯುಕ್ತಕ್ಕೆ ಸಲ್ಲಿಕೆ ಆಗಿದೆ ಎನ್ನೋದು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿಶೇಷ.

    ಪ್ರಮುಖ ಅಂಶ

    ವೈಲ್ಡ್ ಲೈಪ್, ರಕ್ಷಿತಾರಣ್ಯ, ಡೀಮ್ಡ್ ಫಾರೆಸ್ಟ್ ಮುಂದಿಟ್ಟುಕೊಂಡು ಬಡವರು ಅರಣ್ಯ ಭೂಮಿಯಲ್ಲಿ ಕೇವಲ ಮನೆ ಕಟ್ಟಿದರೆ ಅವರಿಗೆ ಹಕ್ಕುಪತ್ರ ಕೊಡುವುದಕ್ಕೆ ಇಲಾಖೆ ಅಡ್ಡಗಾಲಿಕ್ಕುತ್ತಿದೆ. ಸಾಕಷ್ಟು ಜಮೀನು ಮನೆ ಇದ್ದವರು, ಜಾಗದಲ್ಲಿ ಕೃಷಿ ಮಾಡದೆ ಇದ್ದರೂ ಅಕ್ರಮ ಸಕ್ರಮದಲ್ಲಿ ಮಂಜೂರು ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಜಾಗ ಮಂಜೂರು ಮಾಡಿಕೊಂಡು ಅತಿಕ್ರಮ ಕೆಂಪುಕಲ್ಲು ತೆಗೆಯುವುದಲ್ಲದೆ, ಮಣ್ಣನ್ನೂ ಬಿಡದೆ ಮಾರಿ ಜೇಬು ಭರ್ತಿ ಮಾಡಿಕೊಳ್ಳುತ್ತಿದ್ದಾರೆ.

    ತಾಲೂಕು ಶಕ್ತಿ ಕೇಂದ್ರವೇ ಸ್ತಬ್ದವಾಗಿದೆ. ಅರ್ಜಿ ವಿಲೇವಾರಿ ಆಗದೆ, ಕಚೇರಿ ಮನೆ ಅಲೆಯುವಂತೆ ಆಗಿದೆ. ತಾಲೂಕು ಕಚೇರಿ ಮಾತ್ರವಲ್ಲ ಗ್ರಾಪಂ ಕಚೇರಿಯಲ್ಲೂ ಇದೇ ಪರೀಸ್ಥಿತಿ ಇದೆ. ಹಿಂದೆ ಹಗಲು ಮಾತ್ರ ನಡೆಯುತ್ತಿದ್ದ ಕಲ್ಲು ಗಣಿ ಆಹೋರಾತ್ರಿ ನಡೆಯುತ್ತಿದೆ. ದೂರು ನೀಡಿದರೂ ಅಧಿಕಾರಿಗಳು ಕ್ರಮ ತಗೆದುಕೊಳ್ಳುವುದಿಲ್ಲ.

    ಚುನಾವಣೆ ಹಿನ್ನೆಲೆಯಲ್ಲಿ ಸ್ವಲ್ಪ ಮಟ್ಟಿಗಿನ ಸಮಸ್ಯೆ ಆಗಿದ್ದು ಹೌದು. ಇನ್ನು ಒಂದು ವಾರ ಎಲ್ಲರೂ ಫೀಲ್ಡಿಗೆ ಇಳಿತಾರೆ, ಅಕ್ರಮ ಗಣಿ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ವಿಎ ಕಳುಹಿಸಿ ಏನಾಗಿದೆ ಎಂದು ಪರಿಶೀಲಿಸುವಂತೆ ಸೂಚಿಸಿದ್ದೇನೆ. ಚುನಾವಣೆ ವರ್ಕ್‌ಲೋಡ್ ಹೆಚ್ಚಿರುವುದರಿಂದ ಸರಿರಾತ್ರಿ ತನಕ ಕೆಲಸ ನಡೆಯುತ್ತಿದ್ದು, ಅದರೂ ಕೆಲಸ ಮಾಡಿಕೊಡುವ ಪ್ರಯತ್ನ ತಾಲೂಕು ಆಡಳಿತ ಮಾಡುತ್ತಿದೆ. ಜನರು ಸಹಕಾರ ನೀಡಬೇಕು.
    -ಶೋಭಾಲಕ್ಷ್ಮೀ ಎಚ್.ಎಸ್, ಕುಂದಾಪುರ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts