

ಕೊಳ್ಳೇಗಾಲ: ಮಲೆ ಮಹದೇಶ್ವರ ವನ್ಯಜೀವಿ ಧಾಮ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ತಾಲೂಕಿನ ಜಾಗೇರಿ ಗ್ರಾಮದಲ್ಲಿ ನಾಡಬಂದೂಕು ಹೊಂದಿದ್ದ ಮೂವರನ್ನು ಗ್ರಾಮಾಂತರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಜಾಗೇರಿಯ ಗೋವಿಂದರಾಜು (42), ಜಪಮಾಲೆ (48), ಸೇತುರಾಜ್ (42) ಬಂಧಿತ ಆರೋಪಿಗಳು. ಇವರಿಂದ 3 ನಾಡಬಂದೂಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಮೂವರು ಆರೋಪಿಗಳು ಜಮೀನಿನಲ್ಲಿ ನಾಡಬಂದೂಕು ಅಡಗಿಸಿಟ್ಟು ರಾತ್ರಿ ವೇಳೆ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಗ್ರಾಮಕ್ಕೆ ತೆರಳಿದ ಪೊಲೀಸರು ಆರೋಪಿಗಳ ಬಳಿ ನಾಡಬಂದೂಕು ಇರುವುದನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.