ಜೀವನದಲ್ಲಿ ತುಂಬಾ ಸಂತೋಷವಾಗಿರಬೇಕಾ? ಮೊದಲು ಈ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ…Happy

Happy

Happy : ಜೀವನದಲ್ಲಿ ತುಂಬಾ ಮುಖ್ಯವಾದದ್ದು ಹಣವಲ್ಲ, ನೆಮ್ಮದಿ. ನೀವು ಎಷ್ಟೇ ಕಷ್ಟಪಟ್ಟು ಹಣ ಸಂಪಾದಿಸಿದ್ದರೂ ನೆಮ್ಮದಿ ಇರದಿದ್ದರೆ ಅದು ವೇಸ್ಟ್​. ನೆಮ್ಮದಿಯೆಂದರೆ, ಜೀವನದಲ್ಲಿ ಸಂತೋಷವಾಗಿ ಬದುಕುವುದು ಎಂದರ್ಥ. ಆದರೆ, ಈ ಆಧುನಿಕ ಜಗತ್ತಿನಲ್ಲಿ ಹಣದ ಹಿಂದೆ ಬಿದ್ದಿರುವ ಮನುಷ್ಯ ತನ್ನನ್ನು ತಾನೇ ಮರೆತು, ಖಿನ್ನತೆ, ಒತ್ತಡ ಮತ್ತು ಅನಾರೋಗ್ಯದಂತಹ ಜಟಿಲ ಸಮಸ್ಯೆಗಳಲ್ಲಿ ಸಿಲುಕಿ ನರಳುತ್ತಿದ್ದು, ನೆಮ್ಮದಿಗಾಗಿ ಹುಡುಕಾಡುತ್ತಿದ್ದಾರೆ.

ಬಾಲ್ಯದಲ್ಲಿದ್ದ ನೆಮ್ಮದಿ ಮತ್ತು ಸಂತೋಷ ವಯಸ್ಸಾಗುತ್ತಾ ಕಡಿಮೆಯಾಗುತ್ತಾ ಬರುತ್ತದೆ. ಏಕೆಂದರೆ, ಜವಾಬ್ದಾರಿ ಎಂಬ ಭಾರ ನೆಮ್ಮದಿಯನ್ನೇ ಮರೆಸಿಬಿಡುತ್ತದೆ. ಜೀವನದ ಕೊನೆಯಂತದಲ್ಲಾದರೂ ಅನೇಕರು ನೆಮ್ಮದಿಯಿಂದ ಇರಲು ಬಯಸುತ್ತಾರೆ. ಇದು ಸಾಧ್ಯವಾಗಬೇಕೆಂದರೆ, ಖಂಡಿತವಾಗಿಯೂ ಕೆಲವು ಅಭ್ಯಾಸಗಳನ್ನು ನೀವು ಅಳವಡಿಸಿಕೊಳ್ಳಬೇಕು. ಆ ಅಭ್ಯಾಸಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.

ಜೀವನದಲ್ಲಿ ಎಲ್ಲವೂ ನಾವು ಅಂದುಕೊಂಡಂತೆ ನಡೆಯುವುದಿಲ್ಲ. ಹಾಗೇ ಎಲ್ಲವು ಒಳ್ಳೆಯದೇ ಆಗುವುದಿಲ್ಲ. ಆದ್ದರಿಂದ ನೀವು ಯಾವುದೇ ಘಟನೆಯಿಂದ ನಿರಾಶೆಗೊಳ್ಳಬಾರದು. ಏನೇ ನಡೆದರೂ ಅದರ ಬಗ್ಗೆ ಹೆಚ್ಚು ಚಿಂತಿಸದೇ ಅಲ್ಲಿಯೇ ಬಿಟ್ಟು ಬಿಡಬೇಕು. ಅದರ ಬಗ್ಗೆ ಯೋಚಿಸಿ ಸಮಯ ವ್ಯರ್ಥ ಮಾಡಬಾರದು.

ನೀವು ನಿಮ್ಮ ಕೆಲಸದಲ್ಲಿ ತುಂಬಾ ಕಾರ್ಯನಿರತರಾಗಿದ್ದರೆ ಮತ್ತು ಒತ್ತಡದಲ್ಲಿದ್ದರೆ, ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಇದಲ್ಲದೆ, ನಿದ್ರಾಹೀನತೆ, ಆಯಾಸ ಮತ್ತು ಒತ್ತಡದಂತಹ ಸಮಸ್ಯೆಗಳು ನಿಮ್ಮ ಬಳಿ ಸುಳಿಯುವುದಿಲ್ಲ. ಆದ್ದರಿಂದ ನೀವು ಇಷ್ಟಪಡುವಷ್ಟು ಸಮಯ ಕಳೆಯಿರಿ.

ಸಮಯ ಕಳೆದರೆ ಸಾಲದು ಸಂತೋಷಕರ ಜೀವನಕ್ಕಾಗಿ ಆರೋಗ್ಯಕರ ಆಹಾರವನ್ನು ಸೇವಿಸುವುದು, ವ್ಯಾಯಾಮ ಮಾಡುವುದು ಮತ್ತು ಧ್ಯಾನ ಮಾಡುವುದು ಉತ್ತಮ. ಇದಕ್ಕಾಗಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ. ಜೀವನದಲ್ಲಿ ಸಂತೋಷವಾಗಿರಲು, ನೀವು ಪ್ರತಿ ನಿಮಿಷವನ್ನು ತುಂಬಾ ಉತ್ಸಾಹದಿಂದ ಕಳೆಯಬೇಕು ಮತ್ತು ನಿಮ್ಮ ದೈನಂದಿನ ದಿನಚರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ಅಲ್ಲದೆ, ಪ್ರತಿಯೊಂದು ಕೆಲಸವೂ ಪರಿಪೂರ್ಣವಾಗುವುದಿಲ್ಲ ಎಂಬುದನ್ನು ನೆನಪಿಡಿ. ಹೀಗಾಗಿ ಮಾಡಿದ್ದೆಲ್ಲವೂ ಪರಿಪೂರ್ಣವಾಗಿರಬೇಕು ಎಂದು ಭಾವಿಸಬೇಡಿ.

ಇದನ್ನೂ ಓದಿ: ಅಯ್ಯೋ ದುರ್ವಿಧಿಯೇ… ಪಿಸ್ತಾ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ದುರಂತ ಸಾವು! Pistachio shell

ಜೀವನದಲ್ಲಿ ಯಾವುದೇ ಸಮಯದಲ್ಲಿ ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಬೇಡಿ. ಈ ರೀತಿ ಮಾಡಿದರೆ ನೀವು ಸಂತೋಷವಾಗಿರುವುದಿಲ್ಲ. ಎಲ್ಲರಿಗೂ ಪರಿಸ್ಥಿತಿ ಒಂದೇ ರೀತಿ ಇರುವುದಿಲ್ಲ. ಹೀಗಾಗಿ ಇನ್ನೊಬ್ಬರ ಜತೆ ಹೋಲಿಕೆ ಮಾಡಿಕೊಳ್ಳಬಾರದು. ಕೆಲವರಿಗೆ ಜೀವನ ಒಂದು ಹುಡುಗಾಟವಾದರೆ, ಇನ್ನು ಕೆಲವರಿಗೆ ಜೀವನ ಒಂದು ಹೋರಾಟವಾಗಿರುತ್ತದೆ. ಪರಸ್ಪರ ಹೋಲಿಕೆ ಮಾಡಿಕೊಂಡಾಗ ಇಲ್ಲಸಲ್ಲದ ದುಃಖಗಳು ಆವರಿಸಿಕೊಳ್ಳುತ್ತದೆ. ಅದರಲ್ಲೂ ಇಂದಿನ ಸಾಮಾಜಿಕ ಜಾಲತಾಣ ಯುಗದಲ್ಲಿ ಅನೇಕ ಜನರನ್ನು ನೋಡಿ ನಾವು ಈ ರೀತಿ ಇಲ್ಲವಲ್ಲ ಎಂದು ಕೊರಗುವುದು ಸಾಮಾನ್ಯ. ಮೊದಲು ಅದನ್ನು ಬಿಡಬೇಕು ಮತ್ತು ನಮ್ಮ ಗುರಿಯೆಡೆಗೆ ಸಾಗಬೇಕು.

ಒಂದಂತೆ ನೆನಪಿನಲ್ಲಿಟ್ಟುಕೊಳ್ಳಿ ನಮಗೆ ಇಷ್ಟವಾದಂತೆ ಸಂತೋಷದಿಂದ ಸಮಯ ಕಳೆಯುವುದು ಬಹಳ ಮುಖ್ಯ. ಹೀಗೆ ಮಾಡುವುದರಿಂದ, ನಮ್ಮ ಜೀವನವು ತುಂಬಾ ತೃಪ್ತಿ ಮತ್ತು ಸಂತೋಷವಾಗಿರುತ್ತದೆ. ಕ್ಷಣಿಕ ಜೀವನದಲ್ಲಿ ಇಲ್ಲಸಲ್ಲದ ಚಿಂತೆಗಳಿಗೆ ಗುಡ್​ ಬೈ ಹೇಳಿ ನೆಮ್ಮದಿಯಿಂದ ಜೀವನ ಸಾಗಿಸುವುದನ್ನು ಕಲಿತುಕೊಳ್ಳಿ. (ಏಜೆನ್ಸೀಸ್​)

ಅಯ್ಯೋ ದುರ್ವಿಧಿಯೇ… ಪಿಸ್ತಾ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ದುರಂತ ಸಾವು! Pistachio shell

ವಿರಾಟ್​ ಕೊಹ್ಲಿ ಕಂಡರೆ ಅಂಬಾಟಿ ರಾಯುಡುಗೇಕೆ ಕೋಪ? ಕೊನೆಗೂ ಸಿಕ್ತು ಅಚ್ಚರಿಯ ಉತ್ತರ! Virat Kohli

Share This Article

ಬಿದಿರಿನ ಉಪ್ಪಿನ ಬಗ್ಗೆ ನಿಮಗೆ ತಿಳಿದಿದೆಯೇ? ಇದರ ಬೆಲೆ ಮತ್ತು ಪ್ರಯೋಜನಗಳನ್ನು ಕೇಳಿದ್ರೆ ಅಚ್ಚರಿ ಖಚಿತ! Bamboo Salt

Bamboo Salt : ಆರು ಮಸಾಲೆಗಳಲ್ಲಿ ಉಪ್ಪು ಕೂಡ ಒಂದು. ಭಾರತೀಯ ಪಾಕಪದ್ಧತಿಯಲ್ಲಿ ಉಪ್ಪು ಬಹಳ…

ಬಿರು ಬೇಸಿಗೆಯಲ್ಲಿ ನೆಲ್ಲಿಕಾಯಿ ಸೇವಿಸಿ, ಈ ಅದ್ಭುತ ಪ್ರಯೋಜನ ಪಡೆಯಿರಿ; ಇಲ್ಲಿದೆ ಉಪಯುಕ್ತ ಮಾಹಿತಿ | Amla

Amla Benefits: ಸಾಮಾನ್ಯವಾಗಿ ಭಾರತೀಯ ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಆಮ್ಲಾ/ ಗೂಸ್​ಬೆರಿ ಎಂದು ಕರೆಯಲಾಗುತ್ತದೆ. ಇದು…

ಮನೆಯಲ್ಲಿ ಈ 4 ವಸ್ತುಗಳಿದ್ದರೆ ಲಕ್ಷ್ಮಿ ಒಲಿಯುವುದಿಲ್ಲ! ಇದನ್ನು ಗಮನಿಸದೆ ಹೋದ್ರೆ ಕೈಯಲ್ಲಿ 1 ಪೈಸೆಯೂ ಉಳಿಯಲ್ಲ | Vastu Tips

Vastu Tips: ಇಂದು ಯಾರಿಗೆ ತಾನೇ ಧನಲಕ್ಷ್ಮಿ ಬೇಡ? ವಿದ್ಯೆ ಇಲ್ಲದೇ ಹೋದ್ರೂ ಪರವಾಗಿಲ್ಲ ಹಣವೇ…