More

    ಹೌದು ಆಗ ಆ ರೀತಿ ಹೇಳಿದ್ದೆ ಈಗ ಈ ರೀತಿ ಮಾಡೋದ್ರರಲ್ಲಿ ತಪ್ಪೇನಿದೆ? ಅನುಪಮಾ ಶಾಕಿಂಗ್​ ಹೇಳಿಕೆ

    ಹೈದರಾಬಾದ್​​: ಅಶ್ಲೀಲತೆಗೆ ಅವಕಾಶ ನೀಡದೆ ಇದುವರೆಗೂ ಸಾಂಪ್ರದಾಯಿಕ ಪಾತ್ರಗಳಲ್ಲಿ ನಟಿಸುತ್ತಾ ಎಲ್ಲರ ಮನ ಗೆದ್ದಿದ್ದ ನಟಿ ಅನುಪಮಾ ಪರಮೇಶ್ವರನ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಭಾರಿ ಸದ್ದು ಮಾಡಿದ ಟಿಲ್ಲು ಸ್ಕ್ವೇರ್​ ಸಿನಿಮಾದಲ್ಲಿ ಬೋಲ್ಡ್​ ಅವತಾರ ತಾಳಿದ್ದಾರೆ. ಅಲ್ಲದೆ, ಸೆಕ್ಸ್​ ಡೈಲಾಗ್​, ಲಿಪ್​ಲಾಕ್​ ದೃಶ್ಯಗಳಲ್ಲಿಯೂ ನಟಿಸಿದ್ದಾರೆ. ಅನುಪಮಾರನ್ನು ಆರಾಧಿಸುತ್ತಿದ್ದ ಅಭಿಮಾನಿಗಳು ಆಕೆಯ ಅರೆಬರೆ ಅವತಾರ ಕಂಡು ಅಸಮಾಧಾನಗೊಂಡಿದ್ದಾರೆ. ಇದರ ನಡುವೆ ಅನುಪಮಾ ನೀಡಿರುವ ಹೇಳಿಕೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ.

    ಆಲ್ಫೋನ್ಸ್​ ಪುತ್ರೆನ್​ ನಿರ್ದೇಶನದ ಪ್ರೇಮಂ ಸಿನಿಮಾದಲ್ಲಿ ಅನುಪಮಾ ಹೆಸರು ಮೊದಲು ಕೇಳಿಬಂದಿತು. ಮೊದಲ ಚಿತ್ರವೇ ಬ್ಲಾಕ್​ಬಸ್ಟರ್​ ಹಿಟ್​ ಆದರೂ ಕೂಡ ಅವರ ಸಿನಿ ಜರ್ನಿಯಲ್ಲಿ ಅಷ್ಟೊಂದು ಯಶಸ್ಸು ಸಿಗಲಿಲ್ಲ. ಸಾಕಷ್ಟು ಸಿನಿಮಾಗಳು ಫ್ಲಾಪ್​ ಆದವು. ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಮಿಂಚಿರುವ ಅನುಪಮಾ, ಪುನೀತ್​ ರಾಜ್​ಕುಮಾರ್​ ಅಭಿನಯದ ನಟಸಾರ್ವಭೌಮ ಸಿನಿಮಾದಲ್ಲೂ ನಟಿಸುವ ಮೂಲಕ ಅನುಪಮಾ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ತಮ್ಮ ಸಹಜ ಸೌಂದರ್ಯದಿಂದಲೇ ಅನುಪಮಾ ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಇದುವರೆಗೂ ಹೆಚ್ಚೇನು ಬೋಲ್ಡ್​ ಪಾತ್ರಗಳಲ್ಲಿ ನಟಿಸದ ಅನುಪಮಾ ಇದೇ ಮೊದಲ ಬಾರಿಗೆ ತುಂಬಾ ಬೋಲ್ಡ್​ ಆಗಿ ನಟಿಸುವ ಮೂಲಕ ಹೊಸ ಅವತಾರದೊಂದಿಗೆ ರೀಎಂಟ್ರಿ ಕೊಟ್ಟಿದ್ದಾರೆ. ದೀರ್ಘ ಕಾಲದ ಲಿಪ್​ಲಾಕ್ ದೃಶ್ಯ​, ತುಂಡುಡುಗೆ ಹಾಗೂ ಸೆಕ್ಸ್ ಡೈಲಾಗ್​ ಸೇರಿದಂತೆ ಹೊಸ ಪ್ರಯತ್ನಕ್ಕೆ ಅನುಪಮಾ ಕೈಹಾಕಿದ್ದಾರೆ. ಈ ಕಾರಣಕ್ಕಾಗಿ ಅನುಪಮಾ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಅನುಪಮಾ ಇಷ್ಟೊಂದು ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದು ಮತ್ತು ಲಿಪ್​ಲಾಕ್​ ದೃಶ್ಯದಲ್ಲಿ ನಟಿಸಿದ್ದು ದೊಡ್ಡ ತಪ್ಪು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಈ ಹಿಂದೆ ಅನುಪಮಾ ನೀಡಿದ್ದ ಹೇಳಿಕೆಯನ್ನು ಮತ್ತೆ ನೆನಪು ಮಾಡುತ್ತಿದ್ದಾರೆ. ಅಷ್ಟಕ್ಕೂ ಅನುಪಮಾ ಏನು ಹೇಳಿದ್ದರು? ನಾನು ಗ್ಲಾಮರಸ್​ ಪಾತ್ರಗಳಲ್ಲಿ ನಟನೆ ಮಾಡುವುದಿಲ್ಲ ಎಂದು 18ನೇ ವಯಸ್ಸಿನಲ್ಲಿ ಅನುಪಮಾ ಹೇಳಿದ್ದರು. ಆದರೆ, ಈಗ ತಮ್ಮ ಮಾತನ್ನು ತಪ್ಪಿದ್ದಾರೆ. ಆದರೂ ತನ್ನ ಈಗಿನ ನಡೆಯನ್ನು ಅನುಪಮಾ ಸಮರ್ಥಿಸಿಕೊಂಡಿದ್ದಾರೆ.

    ಹೌದು ನಾನು ನನ್ನ 18ನೇ ವಯಸ್ಸಿನಲ್ಲಿ ಗ್ಲಾಮರಸ್​ ಪಾತ್ರಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೆ. ಆದರೆ, ಆಗ ತುಂಬಾ ಪ್ರಬುದ್ಧಳಾಗಿರಲಿಲ್ಲ ಮತ್ತು ಸ್ವಂತ ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂಜರಿಯುತ್ತಿದೆ. ಆದರೆ, ವೃತ್ತಿ ಜೀವನದ ಅನುಭವದಿಂದ ಪ್ರಬುದ್ಧತೆಯನ್ನು ಗಳಿಸಿದ್ದೇನೆ. ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿದೆ. ಓರ್ವ ಕಲಾವಿದೆಯಾಗಿ ಕತೆಗೆ ಅವಶ್ಯಕತೆ ಇದ್ದಾಗ ಲಿಪ್​ಲಾಕ್​ ದೃಶ್ಯಗಳಲ್ಲಿ ನಟಿಸುವುದರಲ್ಲಿ ತಪ್ಪಿಲ್ಲ. ನಾನು ಅಂತಹ ದೃಶ್ಯಗಳಲ್ಲಿ ನಟಿಸುತ್ತೇನೆ ಎಂದು ಅನುಪಮಾ ಬೋಲ್ಡ್​ ಆಗಿಯೇ ಹೇಳಿದ್ದಾರೆ.

    ಇದು ಬಿಟ್ಟರೆ, ಒಂದೇ ರೀತಿಯ ಪಾತ್ರಗಳಲ್ಲಿ ನಟಿಸಿ ಬೋರ್ ಆಗುತ್ತಿದೆ ಎಂದು ಅನುಪಮಾ ಈ ಹಿಂದೆಯೂ ಹೇಳಿದ್ದಾರೆ. ಟಿಲ್ಲು ಸ್ಕ್ವೇರ್​ ಸಿನಿಮಾ ಮಾತ್ರವಲ್ಲದೆ, ಅನುಪಮಾ ಅವರು ಜಯಂ ರವಿ ನಟನೆಯ ಸೈರೆನ್​ ಸಿನಿಮಾದಲ್ಲಿಯೂ ನಟಿಸಿದ್ದು, ಈ ಚಿತ್ರವು ಸಹ ಇತ್ತೀಚೆಗಷ್ಟೆ ಬಿಡುಗಡೆಯಾಯಿತು. (ಏಜೆನ್ಸೀಸ್​)​

    ಪೋರ್ನ್​ ವೆಬ್​ಸೈಟ್​ನಲ್ಲಿ ತನ್ನದೇ ವಿಡಿಯೋ ನೋಡಿ ಯುವತಿ ಶಾಕ್! ಆರೋಪಿ ಬೇರೆ ಯಾರೂ ಅಲ್ಲ… ಎಐ ದುರ್ಬಳಕೆ

    ಬಳ್ಳಾರಿ: 5 ಕೋಟಿ ನಗದು, 3 ಕೆಜಿ ಚಿನ್ನ, 68 ಕೆಜಿ ಗಟ್ಟಿ ಬೆಳ್ಳಿ, 103 ಕೆಜಿ ಆಭರಣ ವಶಕ್ಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts