

Girlfriend : ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧವು ಅವರ ವೈಯಕ್ತಿಕ ವಿಚಾರ ಎಂದು ಹೇಳಲಾಗುತ್ತದೆ. ಯಾವುದೇ ಪ್ರೇಮ ಸಂಬಂಧವು ಸಕಾರಾತ್ಮಕ ಕಣ್ಣುಗಳಿಂದ ಜಗತ್ತನ್ನು ನೋಡುವಂತೆ ವ್ಯಕ್ತಿಯನ್ನು ಪ್ರೇರೇಪಿಸುತ್ತದೆ. ಅಂದರೆ ಪಾಸಿಟಿವಿಟಿಯನ್ನು ತುಂಬುತ್ತದೆ. ಲವ್ವಲ್ಲಿ ಬಿದ್ದ ಸಮಯದಲ್ಲಿ ಸಂತೋಷ ಮತ್ತು ಉತ್ಸಾಹ ಸೇರಿದಂತೆ ಸಾಕಷ್ಟು ಭಾವನೆಗಳು ಮನಸ್ಸಿನಲ್ಲಿ ತುಂಬಿರುತ್ತವೆ. ಇದಕ್ಕೆ ವೈಜ್ಞಾನಿಕ ಕಾರಣವೆಂದರೆ ಈ ಸಮಯದಲ್ಲಿ ನಮ್ಮ ದೇಹದಲ್ಲಿ ಆಕ್ಸಿಟೋಸಿನ್, ಡೋಪಮೈನ್ ಮತ್ತು ಸಿರೊಟೋನಿನ್ನಂತಹ ಕೆಲವು ಹಾರ್ಮೋನುಗಳ ಮಟ್ಟಗಳು ಹೆಚ್ಚಾಗುತ್ತವೆ.
ಅಂದಹಾಗೆ ಈ ಆಧುನಿಕ ಜಗತ್ತಿನಲ್ಲಿ ಪ್ರೇಮ ಸಂಬಂಧಗಳಲ್ಲಿ ಹೊಸ ಹೊಸ ಟ್ರೆಂಡ್ಗಳು ಬರುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೊಂದು ಟ್ರೆಂಡ್ಗಳನ್ನು ನಾವೀಗ ತಿಳಿದುಕೊಳ್ಳೋಣ. ಮೊಬೈಲ್ ಫೋನ್ ಮತ್ತು ಅಪ್ಲಿಕೇಶನ್ ಎಲ್ಲವೂ ಲಭ್ಯವಿರುವ ಈ ದಿನಗಳಲ್ಲಿ, ಡೇಟಿಂಗ್ ಆರಂಭಿಸುವುದು ಮತ್ತು ಅದನ್ನು ಕೊನೆಗೊಳಿಸುವುದು ತುಂಬಾ ಸುಲಭ. ಈ ವಿಚಾರದಲ್ಲಿ ಈ ಕೆಲವು ಅಚ್ಚರಿಯ ಟ್ರೆಂಡ್ಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾನೇ ಮುಖ್ಯ.
ಪ್ರೀತಿಯಲ್ಲಿ ಬೀಳಲು ಪ್ರತಿಯೊಬ್ಬರಿಗೂ ಅವರದ್ದೇ ಆದ ಕಾರಣಗಳಿರುತ್ತವೆ. ಫ್ರೀಕ್ ಮ್ಯಾಚಿಂಗ್ ಎಂದರೆ ನಿಮ್ಮ ಅಭಿರುಚಿ ಮತ್ತು ವೈಬ್ ಆಧಾರದ ಮೇಲೆ ನೀವು ಭೇಟಿಯಾಗುವ ಪುರುಷ ಅಥವಾ ಮಹಿಳಾ ಸ್ನೇಹಿತನೊಂದಿಗೆ ಡೇಟಿಂಗ್ ಮಾಡುವುದು. ಇದೊಂದು ಜೆನ್ ಸಿ ಟ್ರೆಂಡ್ ಆಗಿದೆ. ಇದರಲ್ಲಿ ಯಾರೊಬ್ಬರ ಆಸಕ್ತಿಗಳು ಮತ್ತು ಹವ್ಯಾಸಗಳನ್ನು ತಿಳಿದುಕೊಳ್ಳುವುದು ಮತ್ತು ಅವುಗಳ ಆಧಾರದ ಮೇಲೆ ಸಂಬಂಧಗಳನ್ನು ಬೆಳೆಸುವುದಾಗಿದೆ. ಫ್ರೀಕ್ ಮ್ಯಾಚಿಂಗ್ ಎಂದರೆ ಪ್ರಯಾಣ ಹಾಗೂ ಈಜು ಸೇರಿದಂತೆ ಎಲ್ಲ ಆಸಕ್ತಿಗಳನ್ನು ಸಮಾನವಾಗಿ ಹಂಚಿಕೊಳ್ಳುವ ಸಂಗಾತಿಯನ್ನು ಹುಡುಕುವುದಾಗಿದೆ.
ವಿಯೆಟ್ನಾಂನ ಹೊಸ ಪೀಳಿಗೆಯ ಜನರು ಮದುವೆ ಆಗುವಂತೆ ತಮ್ಮ ಪಾಲಕರು ಒತ್ತಾಯಿಸುವುದರಿಂದ ತಪ್ಪಿಸಿಕೊಳ್ಳಲು ಬಾಯ್ಫ್ರೆಂಡ್ ಅನ್ನು ಬಾಡಿಗೆಗೆ ಪಡೆಯುವುದು ಒಂದು ಮಾರ್ಗವಾಗಿದೆ. ಇದು ತಮ್ಮ ಹೆತ್ತವರಿಗೆ ತಾವು ಸಂಬಂಧದಲ್ಲಿದ್ದೇವೆ ಎಂದು ತೋರಿಸಲು ಗೆಳೆಯನನ್ನು ಏರ್ಪಡಿಸುವುದಾಗಿದೆ. ಇದು ಯುವತಿಯರು ಒಂಟಿಯಾಗಿರುವ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆಯಂತೆ.
ಗೆಳೆಯನನ್ನು ಬಾಡಿಗೆಗೆ ಪಡೆಯುವಂತೆಯೇ, ನೀವು ಈ ಹೊಸ ಯುಗದಲ್ಲಿ ಗೆಳತಿಯನ್ನು ಸಹ ಬಾಡಿಗೆಗೆ ಪಡೆಯಬಹುದು. ಇದು ಜಪಾನ್ನಲ್ಲಿ ಕಾನೂನುಬದ್ಧ ಟ್ರೆಂಡ್ ಆಗಿದೆ. ಆದರೆ, ಪ್ರತಿ ಗಂಟೆಗೆ 6000 ಯೆನ್ ಅಥವಾ ಭಾರತೀಯ ಕರೆನ್ಸಿಯಲ್ಲಿ 3500 ರೂಪಾಯಿ ನೀಡಬೇಕು. ಈ ರೀತಿ ಬಾಡಿಗೆಗೆ ಪಡೆದ ಗೆಳತಿಗೆ ಎರಡು ಗಂಟೆಗಳ ಶುಲ್ಕ ಕಡ್ಡಾಯವಾಗಿದೆ. ಮೊದಲ ಬಾರಿ ಬಾಡಿಗೆಗೆ ಪಡೆಯುವವರಿಗೂ ಕೆಲ ಆಫರ್ಗಳು ಲಭ್ಯವಿದೆ.
ಹೌದು, ಇತ್ತೀಚಿನ ದಿನಗಳಲ್ಲಿ ಮದುವೆಗಳನ್ನು ಮುರಿದುಕೊಳ್ಳಲು ಸಹ ಜನರು ಸಿದ್ಧರಾಗಿದ್ದಾರೆ. ಈ ಟ್ರೆಂಡ್ ಅನ್ನು ಅರ್ನೆಸ್ಟೊ ಎಂಬ ಸ್ಪೇನ್ ದೇಶದವರು ಪ್ರಾರಂಭಿಸಿದರು. ವಿಶೇಷವೆಂದರೆ ನೀವು ಹಣ ಕೊಟ್ಟರೆ ಮದುವೆಯನ್ನು ಮುರಿಯಬಹುದಾಗಿದೆ. ಈ ವಿಧಾನವು ಈಗ ಪ್ರಪಂಚದಾದ್ಯಂತ ಬಹಳ ಟ್ರೆಂಡಿಂಗ್ ಆಗಿದೆ. (ಏಜೆನ್ಸೀಸ್)