ಬಿಕಿನಿ ಧರಿಸಿ ಬೀಚ್​ನಲ್ಲಿ ಅಡ್ಡಾಡುವಾಗ ಭಾರತೀಯ ವಿದ್ಯಾರ್ಥಿನಿ ನಾಪತ್ತೆ! ಏನಾಯ್ತು ಆ ಬೀಚ್​ನಲ್ಲಿ? Indian origin Sudiksha

Indian origin Sudiksha
Published on

Indian origin Sudiksha : ಅಮೆರಿಕದಲ್ಲಿ ಓದುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿನಿ ಸುದೀಕ್ಷಾ ಕೊನಂಕಿ (20) ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಭಾರಿ ಸಂಚಲನ ಮೂಡಿಸುತ್ತಿದೆ.

ಕೆರಿಬಿಯನ್ ದೇಶಕ್ಕೆ ರಜೆಯ ಮೇಲೆ ಹೋಗಿದ್ದ ಸುದೀಕ್ಷಾ ಬೀಚ್‌ನಲ್ಲಿ ಅಡ್ಡಾಡುವಾಗ ದಿಢೀರನೇ ನಾಪತ್ತೆಯಾಗಿದ್ದಾಳೆ. ಆಕೆಗಾಗಿ ಭಾರಿ ಹುಡುಕಾಟ ನಡೆಸಲಾಗುತ್ತಿದೆ. ಈ ವಿಚಾರ ಗೊತ್ತಾದ ಕೂಡಲೇ ಆಕೆಯ ಪಾಲಕರು ಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತೀಯ ಮೂಲದ ವಿದ್ಯಾರ್ಥಿನಿ ಸುದೀಕ್ಷಾ, ಅಮೆರಿಕದ ವರ್ಜೀನಿಯಾದಲ್ಲಿ ನೆಲೆಸಿದ್ದಾರೆ. ಅಲ್ಲಿನ ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಳೆ. ಕಳೆದ ವಾರ, ತಮ್ಮ ಸ್ನೇಹಿತರೊಂದಿಗೆ ಕೆರಿಬಿಯನ್ ದೇಶಕ್ಕೆ ರಜೆಯ ಮೇಲೆ ಹೋಗಿದ್ದರು. ಐದು ಯುವತಿಯರೊಂದಿಗೆ ಡೊಮಿನಿಕನ್ ಗಣರಾಜ್ಯದ ಜನಪ್ರಿಯ ಪ್ರವಾಸಿ ಪಟ್ಟಣವಾದ ಪಂಟಾ ಕಾನಾಕ್ಕೆ ಭೇಟಿ ನೀಡಿದರು.

ಆಕೆ ಮಾರ್ಚ್ 6 ರಂದು, ರಿಯು ರಿಪಬ್ಲಿಕಾ ರೆಸಾರ್ಟ್‌ನಲ್ಲಿ ಕಡಲತೀರದ ಉದ್ದಕ್ಕೂ ಬಿಕಿನಿ ಧರಿಸಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇದಾದ ನಂತರ, ಆಕೆ ಇದ್ದಕ್ಕಿಂದ್ದಂತೆ ನಾಪತ್ತೆಯಾಗಿದ್ದಾಳೆ. ಈ ವಿಚಾರ ಗೊತ್ತಾಗ ಬಳಿಕ ಆಕೆಯ ಸ್ನೇಹಿತರು ಬಹಳ ಚಿಂತಿತರಾಗಿ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ, ದೂರು ದಾಖಲಿಸಿದ್ದಾರೆ. ಕಳೆದ ಗುರುವಾರ ಬೆಳಗಿನ ಜಾವ 4.50ರ ಸುಮಾರಿಗೆ ರಿಯು ರಿಪಬ್ಲಿಕಾ ರೆಸಾರ್ಟ್ ಬೀಚ್‌ನಲ್ಲಿ ಆಕೆ ಕೊನೆಯ ಬಾರಿಗೆ ಕಾಣಿಸಿಕೊಂಡಳು.

Indian origin Sudiksha 1

ದೂರು ಸ್ವೀಕರಿಸಿ ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸರು ಆಕೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಡ್ರೋನ್‌ಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಿ ಬೀಚ್ ಮತ್ತು ಸಮುದ್ರದಲ್ಲಿ ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ಕುರುಹು ಪತ್ತೆಯಾಗಿಲ್ಲ. ಮತ್ತೊಂದೆಡೆ, ಸುದೀಕ್ಷಾ ಎಲ್ಲಿದ್ದಾಳೆಂದು ತಿಳಿದಿಲ್ಲದ ಕಾರಣ ಆಕೆಯ ಪೋಷಕರು ಚಿಂತಿತರಾಗಿದ್ದಾರೆ.

ಈ ಸಂದರ್ಭದಲ್ಲಿ, ಆಕೆಯ ತಂದೆ ಕೆನ್ನೆಲಿಕ್ ಸುಬ್ಬರಾಯುಡು ಮಾತನಾಡಿ, ಕಾಣೆಯಾದ ಸುದೀಕ್ಷಾಳನ್ನು ಪೊಲೀಸರು ಹುಡುಕುತ್ತಿದ್ದಾರೆ. ಅವರು ರೆಸಾರ್ಟ್ ಪ್ರದೇಶ ಮತ್ತು ಸಮುದ್ರದಲ್ಲಿ ಶೋಧ ನಡೆಸಿದ್ದಾರೆ. ಅಪಹರಣ ಮತ್ತು ಮಾನವ ಕಳ್ಳಸಾಗಣೆಯಂತಹ ಸಾಧ್ಯತೆಗಳನ್ನು ಪರಿಶೀಲಿಸುವಂತೆ ನಾವು ಪೊಲೀಸರನ್ನು ಕೇಳಿಕೊಂಡಿದ್ದೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net