ನವದೆಹಲಿ: ಯುಎಸ್ಎ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದು, ಸೂಪರ್ 08 ಹಂತ ಬಮದು ತಲುಪಿದೆ. ಹಾಲಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದ್ದು, ಆಡಿರುವ ಅಷ್ಟು ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಪ್ರಶಸ್ತಿ ಗೆಲ್ಲುವ ತಂಡಗಳ ಪೈಕಿ ಒಂದಾಗಿದೆ.
ಇನ್ನೂ ಜೂನ್ 20ರಂದು ಅಫ್ಘಾನಿಸ್ತಾನ ವಿರುದ್ಧ ನಡೆದ ಸೂಪರ್ 08 ಹಂತದ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದ್ದು, ತಂಡದ ಉತ್ತಮ ಪ್ರದರ್ಶನದ ಹೊರತ್ತಾಗಿಯೂ ಮಾಜಿ ಆಟಗಾರನ ಕೆಂಗಣ್ಣಿಗೆ ಗುರಿಯಾಗಿರುವ ನಾಯಕ ರೋಹಿತ್ ಶರ್ಮಾ ತಮ್ಮ ವೈಫಲ್ಯದ ಕುರಿತಾದಂತೆ ಟೀಕೆಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆಗೆ ಡಿಕೆಶಿ ಕ್ಯಾಂಡಿಡೇಟ್?; ಒಂದೂವರೆ ವರ್ಷದಿಂದ ಇಲ್ಲದ ಮಮತೆ ಈಗ ಬಂದಿದೆ ಎಂದು ಟೀಕಿಸಿದ ಎಚ್ಡಿಕೆ
ರೋಹಿತ್ ಪ್ರದರ್ಶನದ ಕುರಿತಾಗಿ ಮಾತನಾಡಿರುವ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, ರೋಹಿತ್ ಅನುಭವಿ ಬ್ಯಾಟರ್ ಆಗಿದ್ದು, ಯಾವ ಸಮಯದಲ್ಲಿ ಏನು ಮಾಡಬೇಕೆಂಬುದು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಬೌಲರ್ಸ್ ದೃಷ್ಠಿಕೋನದಿಂದ ರೋಹಿತ್ ಶರ್ಮಾಗೆ ಆಟವನ್ನು ಬದಲಾಯಿಸು ಎಂದು ಹೇಳಲು ಸಾಧ್ಯವಿಲ್ಲ. ಅವರು ಏನ ಮಾಡಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ನಾವು ಹೊಸದಾಗಿ ಏನು ಹೇಳುವ ಅವಶ್ಯಕತೆಯಿಲ್ಲ.
ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಟನ್ಗಳಷ್ಟು ಅನುಭವ ಹೊಂದಿರುವ ವ್ಯಕ್ತಿಗೆ ನಾವು ಹೊಸದಾಗಿ ಸಲಹೆ ನೀಡುವ ಅವಶ್ಯಕತೆಯಿಲ್ಲ. ನೀವು 10-15 ಸಾವಿರ ಗಳಿಸಿದರು ಏನು ಪ್ರಯೋಜನವಾಗುವುದಿಲ್ಲ. ನೀವು ಆಫ್ ಸ್ಟಂಪ್ನ ಹೊರಗೆ 40ಕ್ಕೂ ಹೆಚ್ಚು ಬಾರಿ ಔಟಾಗಿದ್ದರೆ ಅದು ನಿಮ್ಮ ದೌರ್ಬಲ್ಯ ಎಂದು ಹೇಳಲು ಸಾಧ್ಯವಿಲ್ಲ ಮೊದಲು ಅದರ ಬಗ್ಗೆ ಚಿಂತಿಸಿ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಸಲಹೆ ನೀಡಿದ್ದಾರೆ.