ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ದುನಿಯಾ ವಿಜಯ್​; ಈ ದಿನದಂದು ರಿಲೀಸ್​ ಆಗಲಿದೆ ಭೀಮ

2 Min Read
Duniya Vijay

ಬೆಂಗಳೂರು: 2021ರಲ್ಲಿ ಬಿಡುಗಡೆಯಾದ ಸಲಗ ಚಿತ್ರವನ್ನು ನಟಿಸಿ, ನಿರ್ದೇಶಿಸುವ ಮೂಲಕ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿದ್ದ ನಟ ದುನಿಯಾ ವಿಜಯ್​ ಆ ಬಳಿಕ ಭೀಮ ಚಿತ್ರ ಮಾಡುತ್ತಿರುವುದಾಗಿ ಘೋಷಿಸಿದ್ದರು. ಚಿತ್ರ ಶುರುವಾದ ಮೊದಲ ದಿನದಿಂದಲೂ ತಾರಬಳಗ ಆಯ್ಕೆ ಸೇರಿದಂತೆ ಹಲವು ವಿಚಾರಗಳಿಗೆ ಸಿನಿರಸಿಕರ ಗಮನ ಸೆಳೆದಿದ್ದು, ಬಿಡುಗಡೆಗೂ ಮುನ್ನ ಸಾಕಷ್ಟು ಹೈಪ್​ ಕ್ರಿಯೇಟ್​ ಮಾಡಿದೆ. ಇತ್ತ ಭೀಮ ಸಿನಿಮಾಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್​ ಒಂದು ಹೊರಬಿದ್ದಿದ್ದು, ಚಿತ್ರ ಬಿಡುಗಡೆಯನ್ನು ಕಾತುರದಿಂದ ಕಾಯುತ್ತಿದ್ದಾರೆ.

ದುನಿಯಾ ವಿಜಯ್​ ನಟಿಸಿ, ನಿರ್ದೇಶಿಸಿರುವ ಭೀಮ ಚಿತ್ರವು ಆಗಸ್ಟ್​ 09ರಂದು ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ದುನಿಯಾ ವಿಜಯ್​ ಖಚಿತಪಡಿಸಿದ್ದು, ಕನ್ನಡದ ಸ್ಟಾರ್ ಹೀರೋ ಸಿನಿಮಾ ಜೊತೆ ಕ್ಲ್ಯಾಶ್ ಆಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ವಿಜಯ್ ಅವರು ಸಲಗ ಸಿನಿಮಾ ನಿರ್ದೇಶನ ಮಾಡಿ ನಟಿಸಿದ್ದರು. ಇದು ಅವರ ನಿರ್ದೇಶನದ ಮೊದಲ ಸಿನಿಮಾ. ಮೊದಲ ಚಿತ್ರದಲ್ಲೇ ಅವರಿಗೆ ಗೆಲುವಿನ ರುಚಿ ಸಿಕ್ಕಿತು. ಈ ಚಿತ್ರ ರೌಡಿಸಂ ಕಥೆಯನ್ನು ಹೊಂದಿತ್ತು. ಈಗ ಅದೇ ರೀತಿಯ ಥೀಮ್ ಇಟ್ಟುಕೊಂಡು ಭೀಮ ಸಿನಿಮಾ ನಿರ್ದೇಶನ ಮಾಡಿದ್ದಾರೆ ವಿಜಯ್. ಈ ಚಿತ್ರವನ್ನು ಆಗಸ್ಟ್ 9ರಂದು ರಿಲೀಸ್ ಮಾಡೋ ಘೋಷಣೆ ಮಾಡಿದ್ದಾರೆ.

ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ದುನಿಯಾ ವಿಜಯ್​; ಈ ದಿನದಂದು ರಿಲೀಸ್​ ಆಗಲಿದೆ ಭೀಮ

ಇದನ್ನೂ ಓದಿ: ನೀನು ಹೆಚ್ಚು ಸ್ವೀಪ್​ ಶಾಟ್​ಗಳನ್ನು ಹೊಡೆಯಬೇಡ; ಟೀಮ್​ ಇಂಡಿಯಾ ಆಟಗಾರನಿಗೆ ಅಫ್ಘನ್​ ಕ್ಯಾಪ್ಟನ್​ ಅವಾಜ್​

ಈ ಮೊದಲು ಸಲಗ ಹಾಗೂ ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರ ರಿಲೀಸ್ ಆಗಿತ್ತು. ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಸುದೀಪ್ ಅವರು, ಮ್ಯಾಕ್ಸ್ ಚಿತ್ರ ಆಗಸ್ಟ್​ನಲ್ಲಿ ರಿಲೀಸ್ ಆಗಲಿದೆ ಎಂದಿದ್ದರು. ಹೀಗಾಗಿ, ಮತ್ತೊಮ್ಮೆ ದುನಿಯಾ ವಿಜಯ್ ಹಾಗೂ ಸುದೀಪ್ ಸಿನಿಮಾ ಮುಖಾಮುಖಿ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

See also  ಪಾನಿಪುರಿ ಬಳಿಕ ರಾಜ್ಯದಲ್ಲಿ ಶವರ್ಮಾ ಬ್ಯಾನ್​! ಸರ್ಕಾರದ ನಿಲುವೇನು ಗೊತ್ತಾ?

ಭೀಮ ಸಿನಿಮಾದಲ್ಲಿ ಅಶ್ವಿನಿ ಅಂಬರೀಷ್, ಕಾಕ್ರೋಚ್ ಸುಧಿ, ರಂಗಾಯಣ ರಘು, ಅಚ್ಯುತ್ ಕುಮಾರ್ ಮೊದಲಾದವರು ನಟಿಸಿದ್ದಾರೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ, ಶಿವಕುಮಾರ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ಬರೆದಿದ್ದು, ದೀಪು ಕುಮಾರ್ ಸಂಕಲನ ಚಿತ್ರಕ್ಕೆ ಇದೆ.

Share This Article