

ಬೆಂಗಳೂರು: ಅಡುಗೆ ಮನೆ ಶುಚಿಯಾಗಿದ್ದರೆ ಮನೆಯ ಸದಸ್ಯರೆಲ್ಲರೂ ಆರೋಗ್ಯವಾಗಿರುತ್ತಾರೆ. ರಾತ್ರಿಯಲ್ಲಿ ಪಾತ್ರೆಗಳನ್ನು ಸಿಂಕ್ನಲ್ಲಿ ಇಡುವುದರಿಂದ ಬ್ಯಾಕ್ಟೀರಿಯಾ, ಸೂಕ್ಷ್ಮಜೀವಿಗಳು, ನೊಣಗಳು, ಸೊಳ್ಳೆಗಳು ಮತ್ತು ಜಿರಳೆಗಳನ್ನು ಆಶ್ರಯಿಸಬಹುದು. ಸೂಕ್ಷ್ಮಜೀವಿಗಳು ಸಿಂಕ್ನಲ್ಲಿಟ್ಟ ಪಾತ್ರೆ ಜತೆ ಇತರ ಆಹಾರ ಪದಾರ್ಥಗಳಿಗೆ ಸೇರಿ ಅನಾರೋಗ್ಯವನ್ನುಂಟು ಮಾಡುತ್ತವೆ.
ದೀರ್ಘಕಾಲದವರೆಗೆ ಶುಚಿಗೊಳಿಸದೆ ಉಳಿದಿರುವ ಪಾತ್ರೆಯಲ್ಲಿರುವ ಬ್ಯಾಕ್ಟೀರಿಯಾಗಳು ಬೇಗನೆ ಮಾಯವಾಗುವುದಿಲ್ಲ. ನೀವು ಈ ಸಲಹೆಗಳನ್ನು ಅನುಸರಿಸಿದರೆ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
1) ಊಟದ ನಂತರ ತಟ್ಟೆಯನ್ನು ಸಾಮಾನ್ಯ ನೀರಿನ ಬದಲು ಬಿಸಿ ನೀರಿನಿಂದ ಸ್ವಚ್ಛಗೊಳಿಸುವುದರಿಂದ ರೋಗಾಣುಗಳು ನಾಶವಾಗುತ್ತವೆ.
2) ಸ್ವಚ್ಛಗೊಳಿಸಿದ ಪಾತ್ರೆಗಳನ್ನು ಬಿಸಿಲಿನಲ್ಲಿ ಇರಿಸಿ. ಇಲ್ಲದಿದ್ದರೆ, ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಸಮಯ ಇರಿಸಿ ಮತ್ತು ಅದನ್ನು ತೆಗೆದುಹಾಕಿ. ಹೀಗೆ ಮಾಡುವುದರಿಂದ ಬಟ್ಟಲುಗಳು ಸ್ವಚ್ಛವಾಗುತ್ತವೆ.
ಇದನ್ನೂ ಓದಿ: ಮೇಕೆ ಹಾಲು ಕುಡಿದರೆ ರೋಗಗಳಿಂದ ದೂರವಿರಬಹುದು….
3) ಪಾತ್ರೆಗಳನ್ನು ಸ್ವಚ್ಛಗೊಳಿಸುವಾಗ ಅನೇಕ ಜನರು ಸ್ಕ್ರಬ್ಬರ್ಗಳನ್ನು ಬಳಸುತ್ತಾರೆ. ಆದರೆ ಮೀನು, ಮಾಂಸ, ಹಾಲು ಮತ್ತು ಮೊಟ್ಟೆಯಂತಹ ವಸ್ತುಗಳನ್ನು ಸ್ವಚ್ಛಗೊಳಿಸಲು ಪ್ರತ್ಯೇಕ ಸ್ಕ್ರಬ್ಬರ್ ಅನ್ನು ಬಳಸಬೇಕು. ಈ ರೀತಿ ಮಾಡುವುದರಿಂದ ಇತರ ಪಾತ್ರೆಗಳು ಕೆಟ್ಟ ವಾಸನೆಯನ್ನು ಪಡೆಯುವುದನ್ನು ತಡೆಯುತ್ತದೆ. ಅದೇ ರೀತಿ ಪಾತ್ರೆಗಳನ್ನು ಸ್ವಚ್ಛಗೊಳಿಸಿದ ನಂತರ ಸ್ಕ್ರಬ್ಬರ್ಗಳನ್ನು ಸ್ವಚ್ಛಗೊಳಿಸಬೇಕು. ಹೀಗೆ ಮಾಡುವುದರಿಂದ ಬ್ಯಾಕ್ಟೀರಿಯಾಗಳು ಒಳಬರುವುದನ್ನು ತಡೆಯುತ್ತದೆ.
4) ಪಾತ್ರೆಯನ್ನು ತೊಳೆದ ನಂತರ ನೀರಿನ ಜತೆ ಹಾಗೆ ಇಡದೆ ಶುದ್ಧವಾದ ಬಟ್ಟೆಯನ್ನು ತೆಗೆದುಕೊಂಡು ಚೆನ್ನಾಗಿ ಒರೆಸಿ ಇಡಬೇಕು.
5 ) ಪಾತ್ರೆ ಸ್ವಚ್ಛಗೊಳಿಸಿದ ನಂತರ ನೀವು ಪಾತ್ರೆ ವಾಶ್ ಮಾಡಲು ಬಳಸುವ ಲಿಕ್ವಿಡ್, ಸೋಪನ್ನು ಸರಿಯಾಗಿ ತೆಗೆದಿಡಿ. ಇಲ್ಲವಾದಲ್ಲಿ ಜಿರಳೆ, ನೊಣ, ಸೊಳ್ಳೆ ಈ ಸೋಪ್ ಮೇಲೆ ಕುಳಿತು ಕೊಳ್ಳಬಹುದು. ಈ ಮೂಲಕವಾಗಿ ಸೂಕ್ಷ್ಮಾಣುಗಳು ಪಾತ್ರೆಗೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ.
6) ಪಾತ್ರೆಗಳನ್ನು ವಾಶ್ ಮಾಡಿ ನೇರವಾಗಿ ಪಾತ್ರೆ ಇಡುವ ಸೆಲ್ಫ್ಗೆ ಜೋಡಿಸಬೇಡಿ. ಇದರಿಂದ ನೀರು ಶೇಖರಣೆಗೊಂಡು ಸೊಳ್ಳೆಗಳು ಬರುತ್ತವೆ ಹಾಗೂ ಸೂಕ್ಷ್ಮಾಣುಗಳು ಬೆಳೆಯುವ ಸಾಧ್ಯತೆ ಇರುತ್ತದೆ.