ಇದಕ್ಕೆ ಉತ್ತರ ಹುಡುಕಿದ್ರೆ ನೀವೇ ಬುದ್ಧಿಶಾಲಿಗಳು! ಕೊಟ್ಟು ನೋಡಿ ನಿಮ್ಮ ಮಿದುಳಿಗೆ ಕೆಲಸ | Brain Teaser

ವಿಜಯವಾಣಿ (36)
Published on

Brain Teaser: ಬಹುತೇಕರು ಶಾಲೆಯಲ್ಲಿ ಯಾವ ವಿಷಯಕ್ಕೆ ಬೇಕಾದರೂ ಉತ್ತರಿಸಲು ಪ್ರಯತ್ನಿಸುತ್ತಿದ್ದರು. ಆದ್ರೆ, ಗಣಿತ ವಿಷಯದಲ್ಲಿ ಮಾತ್ರ ಉತ್ತರವಿರಲಿ, ಪ್ರಯತ್ನಕ್ಕೂ ಮುಂದಾಗುತ್ತಿರಲಿಲ್ಲ. ಕೂಡುವುದು, ಕಳಿಯುವುದು, ಗುಣಕಾರ, ಭಾಗಕಾರ, ಮಗ್ಗಿ ಸೇರಿದಂತೆ ಇನ್ನಿತರ ಲೆಕ್ಕಾಚಾರದ ವಿಚಾರಗಳಿಂದ ಬಹಳ ದೂರ ಸರಿಯುತ್ತಿದ್ದರು. ಕೆಲವರು ಶಾಲೆಯಲ್ಲಿ ಗಣಿತಕ್ಕೆ ತಲೆಬಾಗಿದರೆ, ಇನ್ನೂ ಕೆಲವರು ಕಾಲೇಜು ಮೆಟ್ಟಿಲೇರಿದ ನಂತರ ಸೋತು ಸುಣ್ಣವಾಗಿದ್ದಾರೆ.

ಮಿದುಳಿಗೆ ಕೈಹಾಕಿ

ಕೆಲವರು ಕೇವಲ ಕೂಡುವುದಕ್ಕೆಯೇ ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಅಂತಹದ್ದರಲ್ಲಿ ಕೂಡಿ, ಕಳೆದು, ಗುಣಕಾರ, ಭಾಗಕಾರ ಮಾಡಿ ಉತ್ತರಿಸುವುದು ಅಷ್ಟು ಸುಲಭವೇ? ಖಂಡಿತ ಸುಲಭದ ಮಾತಲ್ಲ. ಆದರೆ, ಇಂದು ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ಮಿದುಳಿಗೆ ಕೆಲಸ ಕೊಡುವ ಗಣಿತ ಲೆಕ್ಕಾಚಾರಗಳು ಆಗಾಗ್ಗೆ ಹರಿದಾಡುತ್ತಿರುತ್ತವೆ. ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ನೆಟ್ಟಿಗರು, ಇಂತಹ ಬುದ್ಧಿವಂತಿಕೆ ಪರೀಕ್ಷಿಸುವ ಗಣಿತದ ಸವಾಲುಗಳನ್ನು ಸ್ವೀಕರಿಸಲು ಉತ್ಸಾಹ ತೋರುತ್ತಾರೆ. ಅಂತೆಯೇ ಮತ್ತೊಂದು ಬ್ರೇನ್​ ಟೀಸರ್​ ಪ್ರಶ್ನೆ ನಿಮ್ಮ ಮುಂದಿದೆ. ಇದಕ್ಕೆ ಉತ್ತರಿಸಲು ಬಹುತೇಕರು ವಿಫಲವಾಗಿರುವುದು ಇಲ್ಲಿ ಗಮನಿಸಬೇಕಾದ ವಿಷಯ.

ಹೀಗಿದೆ ಗಣಿತದ ಒಗಟು

ಬುದ್ಧಿವಂತರಿಗೆ ಮಾತ್ರ: 3x3=12, 4x4=20, 5x5=30, 8x8=?

ಈ ಪ್ರಶ್ನೆಗೆ ನೆಟ್ಟಿಗರ ಪ್ರತಿಕ್ರಿಯೆಗಳು ಹೀಗಿವೆ. 'ಇದೊಂದು ರೀತಿ ಕಷ್ಟಕರ ಎನಿಸುತ್ತಿದೆ ಅಲ್ವಾ?' ಒಬ್ಬರು ಹೇಳಿದರೆ, ಮತ್ತೊಬ್ಬರು, 'ಇದು ಗಣಿತವೇ ಎಂದು ನನಗೆ ಅನುಮಾನ ಕಾಡುತ್ತಿದೆ' ಎಂದಿದ್ದಾರೆ. ಇನ್ನೂ ಒಬ್ಬರು, '10 ನಿಮಿಷದಿಂದ ಇದನ್ನೇ ನೋಡಿದ ಮೇಲೆ ನನಗನಿಸಿದ್ದು, ನಾನು ಉತ್ತರಿಸಲು ಸೋತೆ ಅಂತ' ಎಂದು ಬರೆದಿದ್ದಾರೆ.

ಇದೇ ಉತ್ತರ ನಿಮಗೂ ಸಿಕ್ಕಿತೇ?

3X3=12, 3X3=9+3 = 12

4x4=20, 4x4=16+4 = 20

5x5=30, 5x5=25+5 = 30

8x8=72, 8x8=64+8 = 72

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net