ನಾಗರಹಾವು ಕಚ್ಚಿದ್ರೆ ತಕ್ಷಣ ಈ ರೀತಿ ಮಾಡಿ… ಇಲ್ಲವಾದಲ್ಲಿ ಮೂರೇ ನಿಮಿಷಕ್ಕೆ ಪ್ರಾಣ ಹೋಗುತ್ತೆ! Cobra Snake

Cobra Snake

Cobra Snake : ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ( Snakes ) ಒಂದು. ಈ ಜೀವಿ ಶತಮಾನಗಳಿಂದ ಜನರ ಜೀವಕ್ಕೆ ಬೆದರಿಕೆಯಾಗಿದ್ದು, ಪ್ರಾಚೀನ ಕಾಲದಿಂದಲೂ ಜಗತ್ತಿನಲ್ಲಿ ವಾಸಿಸುತ್ತಿರುವ ಜೀವಿಯಾಗಿದೆ. ಈ ಭೂಮಿಯ ಮೇಲೆ ಸುಮಾರು 3000 ಜಾತಿಯ ಹಾವುಗಳು ವಾಸಿಸುತ್ತಿವೆ. ಆದರೆ, ಎಲ್ಲ ಹಾವುಗಳು ವಿಷಕಾರಿಯಲ್ಲ. ಕೆಲವೊಂದು ಸೌಮ್ಯ ಸ್ವಭಾವಾದ ಹಾವುಗಳಿವೆ. ಕೆಲವು ಜೀವಕ್ಕೆ ಮಾರಕವಾಗುವ ವಿಷವನ್ನು ಹೊಂದಿರುತ್ತವೆ.

blank

ನಮ್ಮ ನಡುವೆ ಹೆಚ್ಚಾಗಿ ಕಾಣುವ ಹಾವುಗಳಲ್ಲಿ ನಾಗರಹಾವುಗಳು ಅಗ್ರ ಸ್ಥಾನ ಎನ್ನಬಹುದು. ನಾಗರಹಾವುಗಳು ಕೆಲವೊಮ್ಮೆ ಮನೆಯೊಳಗೂ ನುಸುಳಿಬಿಡುತ್ತದೆ. ಇದು ತುಂಬಾನೇ ಅಪಾಯಕಾರಿ ಹಾವು. ಕಚ್ಚಿದಾಗ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ ಸಾವು ಖಚಿತ. ಹೀಗಾಗಿ ನಾಗರಹಾವು ಕಚ್ಚಿದಂತಹ ಸಂದರ್ಭದಲ್ಲಿ ಮೊದಲು ಏನು ಮಾಡಬೇಕೆಂದು ನಾವೀಗ ತಿಳಿಯೋಣ.

ಸಾಮಾನ್ಯವಾಗಿ, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು ಹಾವು ಕಡಿತದಿಂದ ಹೆಚ್ಚಾಗಿ ಸಾಯುತ್ತಾರೆ. ಏಕೆಂದರೆ, ಹಾವುಗಳು ಹೆಚ್ಚಾಗಿ ಕಂಡುಬರುವುದು ಗ್ರಾಮೀಣ ಪ್ರದೇಶಗಳಲ್ಲೇ. ಹಾವು ಕಡಿತದ ಭಯದಿಂದ ಏನು ಮಾಡಬೇಕೆಂದು ತೋಚದೆ ಅನೇಕ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕೆಲವು ಮಂದಿ ಸಿದ್ಧ ಔಷಧ ಮತ್ತು ಜಾನಪದ ಪರಿಹಾರಗಳಂತಹ ಗಿಡಮೂಲಿಕೆಗಳ ಔಷಧಿಗಳಿಂದ ಬದುಕುಳಿಯುತ್ತಾರೆ. ಪ್ರತಿ ವರ್ಷ, ಭಾರತದಲ್ಲಿ ಸಾವಿರಾರು ಮಂದಿ ಹಾವು ಕಡಿತದಿಂದ ಸಾಯುತ್ತಿದ್ದಾರೆ. ಅದಕ್ಕೆ ಕಾರಣ ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಇರುವುದು. ಸೂಕ್ತ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು. ಹಾವು ನಮ್ಮನ್ನು ಕಚ್ಚಿದಾಗ, ಹಾವಿನ ಪ್ರಕಾರ ಮತ್ತು ಅದರ ವಿಷದ ಸ್ವರೂಪವನ್ನು ಅವಲಂಬಿಸಿ ಪರಿಣಾಮಗಳು ಗಮನಾರ್ಹವಾಗಿ ಬದಲಾಗುತ್ತವೆ.

ಹಾವು ಕಚ್ಚಿದರೆ ಏನಾಗುತ್ತದೆ?

ನಾಗರಹಾವು, ಮಂಡಲಹಾವು ಮುಂತಾದ ಹಾವುಗಳ ವಿಷವು ನರಮಂಡಲದ ಮೇಲೆ ಪರಿಣಾಮ ಬೀರಬಹುದು. ಇದು ಸ್ನಾಯು ದೌರ್ಬಲ್ಯದಿಂದ ಪ್ರಾರಂಭವಾಗಿ ನಂತರ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಈ ಹಾವುಗಳ ಕಡಿತದಿಂದ ಕೆಲವೊಮ್ಮೆ ಉಸಿರಾಟದ ತೊಂದರೆ, ಕೈಕಾಲುಗಳಲ್ಲಿ ದೌರ್ಬಲ್ಯ, ಮಸುಕಾದ ದೃಷ್ಟಿ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಅಲ್ಲದೆ, ವಿಷದ ಪ್ರಭಾವದಿಂದಾಗಿ ಕಣ್ಣುಗಳನ್ನು ತೆರೆದಿಡಲು ಸಹ ಸಾಧ್ಯವಾಗದಿರಬಹುದು. ಕೆಲವು ಸಂದರ್ಭಗಳಲ್ಲಿ, ಇದು ಮಾರಕ ರಕ್ತಸ್ರಾವ ಅಥವಾ ಬಹು ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ಒಂದು ನೈಟ್ ಪಾರ್ಟಿಗೆ 35 ಲಕ್ಷ ರೂಪಾಯಿ… ಡ್ರ್ಯಾಗನ್​ ನಟಿಯ ಶಾಕಿಂಗ್​ ಸಂಗತಿ ಬಹಿರಂಗ! Kayadu Lohar ​

ಏನು ಮಾಡಬೇಕು?

ಹಾವು ಕಚ್ಚಿದ ವ್ಯಕ್ತಿಯನ್ನು ಶಾಂತವಾಗಿ ಮತ್ತು ನಿಶ್ಚಲವಾಗಿ ಇಡಬೇಕು. ಏನಾದರೂ ಹಾವು ಕೈಗೆ ಕಚ್ಚಿದರೆ ಆ ಪ್ರದೇಶವನ್ನು ಜೋಲಿ ಅಥವಾ ಸ್ಪ್ಲಿಂಟ್ ಬಳಸಿ ನಿಶ್ಚಲಗೊಳಿಸಬೇಕು ಮತ್ತು ಹೃದಯದ ಮಟ್ಟಕ್ಕಿಂತ ಕೆಳಗೆ ಇಡಬೇಕು. ಕಚ್ಚಿದ ಸ್ಥಳದ ಬಳಿ ಇರುವ ಯಾವುದೇ ಬಿಗಿಯಾದ ಬಟ್ಟೆ ಅಥವಾ ಆಭರಣಗಳನ್ನು ತೆಗೆದುಹಾಕಬೇಕು. ಹಾವು ಕಚ್ಚಿದ ವ್ಯಕ್ತಿಯು ಎದ್ದು ನಡೆಯಬಾರದು. ಈ ಚಲನೆಯು ವಿಷದ ಹರಡುವಿಕೆಯನ್ನು ವೇಗಗೊಳಿಸುತ್ತದೆ.

ಏನು ಮಾಡಬಾರದು?

ಹಾವು ಕಚ್ಚಿದಾಗ ನೀವು ಎಂದಿಗೂ ಮಾಡಬಾರದ ಕೆಲವು ಕೆಲಸಗಳಿವೆ. ಅವುಗಳೆಂದರೆ, ಹಾವು ಕಚ್ಚಿದಾಗ ಉಂಟಾಗುವ ಗಾಯವನ್ನು ಕತ್ತರಿಸುವುದಾಗಲಿ ಅಥವಾ ಬಾಯಿಯಿಂದ ಹೀರುವುದಾಗಲಿ ಮಾಡಬಾರದು. ಐಸ್ ಅಥವಾ ಟೂರ್ನಿಕೆಟ್ ಹಚ್ಚಬಾರದು. ಆಲ್ಕೋಹಾಲ್ ಅಥವಾ ಕೆಫೀನ್ ನೀಡುವುದು ಮತ್ತು ಹಾವನ್ನು ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸುವುದು ಇವೆಲ್ಲವೂ ಮೂರ್ಖತನದ ಕೆಲಸಗಳಾಗಿವೆ. ನೀವು ಅಗತ್ಯ ಕ್ರಮಗಳನ್ನು ಪೂರ್ಣಗೊಳಿಸಿದ ನಂತರ, ನೀವು ತಕ್ಷಣ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು. ಈ ಹಂತಗಳನ್ನು ಅನುಸರಿಸಲು ವಿಫಲವಾದರೆ ಸಾವು ಸಂಭವಿಸುತ್ತದೆ.

ಹಾವಿನ ವಿಷದ ಪ್ರಮಾಣ, ಅದರ ಪರಿಣಾಮವು ಜಾತಿಯ ಮೇಲೆ ಮತ್ತು ಕಚ್ಚುವಿಕೆಯ ನಿರ್ದಿಷ್ಟ ಸಂದರ್ಭಗಳನ್ನು ಅವಲಂಬಿಸಿರುತ್ತದೆ. ಯಾವುದೇ ಹಾವು ಕಡಿತದ ಸಂದರ್ಭದಲ್ಲಿ, ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಮುಖ್ಯ. ಆಧುನಿಕ ಆಂಟಿವೆನಮ್ ಅಥವಾ ಪ್ರತಿವಿಷ ಚಿಕಿತ್ಸೆಯು ಸಾಮಾನ್ಯವಾಗಿ ಹೆಚ್ಚಿನ ಹಾವು ಕಡಿತದ ಪ್ರಕರಣಗಳಲ್ಲಿ ಪರಿಣಾಮಕಾರಿಯಾಗಿದೆ. ಆದಾಗ್ಯೂ, ಉತ್ತಮ ಫಲಿತಾಂಶಕ್ಕಾಗಿ ತಕ್ಷಣದ ಚಿಕಿತ್ಸೆಯ ಅಗತ್ಯವಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್​)

ಕಚ್ಚಿದಾಗ ಯಾವ ಹಾವು ಎಷ್ಟು ವಿಷ ಬಿಡುಗಡೆ ಮಾಡುತ್ತೆ? ಯಾವುದು ಡೇಂಜರಸ್​? ಇಲ್ಲಿದೆ ಅಚ್ಚರಿ ಮಾಹಿತಿ… Unknown Facts

Snakes: ವಿಷಕಾರಿ ಮತ್ತು ವಿಷರಹಿತ ಹಾವುಗಳನ್ನು ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ…

ಕಾಳಿಂಗ ಸರ್ಪಕ್ಕಿಂತಲೂ ಭಾರಿ ಡೇಂಜರ್​! ವಿಶ್ವದ ಐದು ವಿಷಕಾರಿ ಹಾವುಗಳಲ್ಲಿ ಇದು ಕೂಡ ಒಂದು… Unknown Facts

Share This Article
blank

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

ಆಹಾರ ಸೇವಿಸುವಾಗ ಪದೇಪದೆ ಕೂದಲು ಕಾಣಿಸುತ್ತಿದಿಯೇ?: ಹಾಗಾದ್ರೆ ಸ್ವಲ್ಪ ಜಾಗರೂಕರಾಗಿ.. ಜ್ಯೋತಿಷ್ಯದಲ್ಲಿ ಹೇಳೋದೇನು? | Eating

Eating: ನಿಮ್ಮ ಆಹಾರದಲ್ಲಿ ಕೂದಲು ಮತ್ತೆ ಮತ್ತೆ ಬರುವುದು. ನಿಮ್ಮ ಆಹಾರದಲ್ಲಿ ಕೂದಲು ಉದುರುವ ಘಟನೆ…

blank