ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಾಮೀನು ದೊರೆತು ಜೈಲಿನಿಂದ ಬಿಡುಗಡೆಯಾದ ಒಂದು ದಿನದ ನಂತರ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ದೇಶದಲ್ಲಿ ಸರ್ವಾಧಿಕಾರದ ವಿರುದ್ಧ ಹೋರಾಡಲು ಜನರಿಗೆ ಕರೆ ನೀಡಿದರು.
ಇದನ್ನು ಓದಿ: ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಾಜೀನಾಮೆಗೆ ಪಟ್ಟು; ಬಾಂಗ್ಲಾದಲ್ಲಿ ಮತ್ತಷ್ಟು ಭುಗಿಲೆದ್ದ ಹಿಂಸಾಚಾರ
ಬಿಜೆಪಿಯನ್ನು ಗುರಿಯಾಗಿಸಿಕೊಂಡು ಮನೀಶ್ ಸಿಸೋಡಿಯಾ ಅವರು ಈ ಜನರು ಸಂವಿಧಾನಕ್ಕಿಂತ ಹೆಚ್ಚು ಶಕ್ತಿಶಾಲಿಗಳಲ್ಲ. ನಾಯಕರನ್ನು ಜೈಲಿಗೆ ಹಾಕುವುದು ಮಾತ್ರವಲ್ಲದೆ ನಾಗರಿಕರಿಗೆ ಕಿರುಕುಳ ನೀಡುತ್ತಿರುವ ಈ ಸರ್ವಾಧಿಕಾರದ ವಿರುದ್ಧ ಪ್ರತಿಯೊಬ್ಬ ವ್ಯಕ್ತಿಯೂ ಹೋರಾಡಬೇಕಾಗಿದೆ ಎಂದು ಹೇಳಿದರು.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಕೆಲಸವನ್ನು ದೂಷಿಸಲು ಷಡ್ಯಂತ್ರ ರೂಪಿಸಲಾಗುತ್ತಿದೆ. ಸರ್ವಾಧಿಕಾರದ ವಿರುದ್ಧ ವಿರೋಧ ಪಕ್ಷದ ನಾಯಕರು ಒಂದಾದರೆ 24 ಗಂಟೆಗಳಲ್ಲಿ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಹೊರಬರುತ್ತಾರೆ. ನಾವು ಕೇವಲ ರಥದ ಕುದುರೆಗಳು ಆದರೆ ನಮ್ಮ ನಿಜವಾದ ಸಾರಥಿ ಜೈಲಿನಲ್ಲಿದ್ದಾರೆ. ಅವರು ಶೀಘ್ರದಲ್ಲೇ ಹೊರಬರುತ್ತಾರೆ ಎಂದು ಎಎಪಿ ಕಾರ್ಯಕರ್ತರಿಗೆ ಹೇಳಿದರು.
ಕೇಜ್ರಿವಾಲ್ ಅವರ ಹೆಸರು ಇಡೀ ದೇಶದಲ್ಲಿ ಪ್ರಾಮಾಣಿಕತೆಯ ಸಂಕೇತವಾಗಿರುವುದರಿಂದ ಇಡಿ ಮತ್ತು ಸಿಬಿಐನ ಈ ಜಾಲವನ್ನು ರಚಿಸಲಾಗಿಲ್ಲ. ವಿಶ್ವದ ಅತಿ ದೊಡ್ಡ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿಗೆ ತಮ್ಮ ಒಂದೇ ಒಂದು ರಾಜ್ಯದಲ್ಲೂ ಪ್ರಾಮಾಣಿಕ ಕೆಲಸ ನಡೆಯುತ್ತಿದೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಆದ್ದರಿಂದ ಈ ಜಾಲ ರಚಿಸಲಾಗಿದೆ ಎಂದು ಆರೋಪಿಸಿದ್ದಾರೆ.
ತಮ್ಮ ಜಾಮೀನು ತೀರ್ಪಿನ ವಿಚಾರವಾಗಿ ಮಾತನಾಡಿದ ಸಿಸೋಡಿಯಾ ಅವರು, ಸರ್ವಾಧಿಕಾರವನ್ನು ತುಳಿಯಲು ಸಂವಿಧಾನದ ಅಧಿಕಾರವನ್ನು ಸುಪ್ರೀಂಕೋರ್ಟ್ ಬಳಸಿದೆ. ಏಳರಿಂದ ಎಂಟು ತಿಂಗಳಲ್ಲಿ ನ್ಯಾಯ ಸಿಗುವ ಭರವಸೆ ಇತ್ತು ಆದರೆ ಅದಕ್ಕೆ 17 ತಿಂಗಳು ಬೇಕಾಯಿತು. ಆದರೆ ಕೊನೆಯಲ್ಲಿ ಸತ್ಯಕ್ಕೆ ಜಯ ಸಿಕ್ಕಿತು ಎಂದು ಸಿಸೋಡಿಯಾ ಹೇಳಿದರು.(ಏಜೆನ್ಸೀಸ್)
ನಾಗಚೈತನ್ಯ ಖಿನ್ನತೆಗೊಳಗಾಗಿದ್ದ.. ಈಗ ಅವನಲ್ಲಿ ಸಂತೋಷ ಕಾಣುತ್ತಿದೆ: ನಾಗಾರ್ಜುನ