More

    ಐಸಿಸಿ ರ‍್ಯಾಂಕಿಂಗ್​ ಪಟ್ಟಿ ಪ್ರಕಟ; ಅಗ್ರಸ್ಥಾನ ಅಲಂಕರಿಸಿದ ಐವರು ಭಾರತೀಯರು

    ನವದೆಹಲಿ: ಇತ್ತೀಚಿಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್​ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್​ ಸಮಿತಿ (ICC) ನೂತನ ರ‍್ಯಾಂಕಿಂಗ್​ ಪಟ್ಟಿಯನ್ನು ಪ್ರಕಟಿಸಿದ್ದು, ಹೊಸ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾದ ಐವರು ಆಟಗಾರರು ಅಗ್ರಸ್ಥಾನ ಅಲಂಕರಿಸಿರುವುದು ಮತ್ತಷ್ಟು ವಿಶೇಷವೆನಿಸಿದೆ.

    ಏಕದಿನ ಬ್ಯಾಟ್ಸ್​ಮನ್​ ಪಟ್ಟಿಯಲ್ಲಿ ಶುಭಮನ್​ ಗಿಲ್​, ಟಿ-20 ಬ್ಯಾಟ್ಸ್​ಮನ್​ಗಳ ಪೈಕಿ ಸೂರ್ಯಕುಮಾರ್​ ಯಾದವ್​, ಆಲ್ರೌಂಡರ್​ಗಳ ಪೈಕಿ ರವೀಂದ್ರ ಜಡೇಜಾ, ಟೆಸ್ಟ್ ಬೌಲರ್​ಗಳ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್, ಟಿ20 ಬೌಲರ್​ಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ರವಿ ಬಿಷ್ಣೋಯ್ ಮೊದಲ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಇದಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 223 ರನ್​ಗಳನ್ನು ಬಾರಿಸಿ ಅಬ್ಬರಿಸಿದ್ದ ರುತುರಾಜ್ ಗಾಯಕ್ವಾಡ್ ಟಿ20 ಕ್ರಿಕೆಟ್​ ರ‍್ಯಾಂಕಿಂಗ್​ನಲ್ಲಿ 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಟಿ20 ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಮೂರನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಯುವ ಸ್ಪಿನ್ನರ್ ಇದೀಗ ಅಫ್ಘಾನಿಸ್ತಾನದ ರಶೀದ್ ಖಾನ್​ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ.ಇದಲ್ಲದೆ ಭಾರತದ ರುತುರಾಜ್​ ಗಾಯಕ್ವಾಡ್​, ರೋಹಿತ್​ ಶರ್ಮಾ, ಅಕ್ಷರ್​ ಪಟೇಲ್​ ಟಾಪ್​ 10ನಲ್ಲಿ ಸ್ಥಾನ ಪಡೆದಿರುವ ಇತರೆ ಆಟಗಾರರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts