More

    VIDEO| ಗೋಮೂತ್ರ ರಾಜ್ಯಗಳು ಹೇಳಿಕೆ; ವಿವಾದದ ಬಳಿಕ ಕ್ಷಮೆಯಾಚಿಸಿದ ಡಿಎಂಕೆ ಸಂಸದ

    ನವದೆಹಲಿ: ಉತ್ತರ ಭಾರತದ ಕೆಲವು ರಾಜ್ಯಗಳನ್ನು ಗೋಮೂತ್ರ ಎಂದು ಕರೆದು ವಿವಾದ ಹುಟ್ಟುಹಾಕಿದ್ದ ಡಿಎಂಕೆ ಸಂಸದ ಸೆಂಥಿಲ್​ ಕುಮಾರ್​ ಹೇಳಿಕೆ ಭಾರೀ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದು, ದುರಾದೃಷ್ಟವಶಾತ್​ ಎಂದಿದ್ದಾರೆ.

    ಈ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಸಂಸದ ಸೆಂಥಿಲ್ ಕುಮಾರ್​  ಅದನ್ನು ಯಾವುದೋ ಉದ್ದೇಶದಿಂದ ಬಳಸಿದ್ದಲ್ಲ. ಎಲ್ಲಾ ಕಡೆ ತಪ್ಪು ಅರ್ಥ ರವಾನಿಸಿದ್ದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.

    ಇದನ್ನೂ ಓದಿ: ಚುನಾವಣೆಯಲ್ಲಿ ಸೋಲು; ಬಿಜೆಪಿ EVM ಹ್ಯಾಕ್​ ಮಾಡಿ ಗೆದ್ದಿದೆ ಎಂದ ಹಿರಿಯ ಕಾಂಗ್ರೆಸ್​ ನಾಯಕ

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು, ಇತ್ತೀಚಿನ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡುವಾಗ, ನಾನು ಅನುಚಿತ ರೀತಿಯಲ್ಲಿ ಪದವೊಂದನ್ನು ಬಳಸಿದ್ದೆ. ಅದನ್ನು ಯಾವುದೋ ಉದ್ದೇಶದಿಂದ ಬಳಸಿದ್ದಲ್ಲ. ಎಲ್ಲಾ ಕಡೆ ತಪ್ಪು ಅರ್ಥ ರವಾನಿಸಿದ್ದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ.

    ಚುನಾವಣೆಗಳಲ್ಲಿ ಗೆಲ್ಲುವ ಬಿಜೆಪಿ ಶಕ್ತಿಯು ಮುಖ್ಯವಾಗಿ ಹಿಂದಿ ಹೃದಯಭಾಗದ ರಾಜ್ಯಗಳಲ್ಲಿ ಮಾತ್ರ ಉಳಿದಿದೆ. ನೀವು ದಕ್ಷಿಣ ಭಾರತಕ್ಕೆ ಬರುವುದು ಸಾಧ್ಯವಿಲ್ಲ ಎಂದು ಹೇಳುವಾಗ ಅವರು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳನ್ನು ‘ಗೋಮೂತ್ರ ರಾಜ್ಯಗಳು’ ಎಂದು ಅವಹೇಳನಾಕಾರಿಯಾಗಿ ಹೇಳಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಡಿಎಂಕೆ ಸಂಸದರ ಮನವಿಯಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಈ ಹೇಳಿಕೆಯನ್ನು ಸಂಸತ್‌ನ ಕಡತದಿಂದ ತೆಗೆದುಹಾಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts