More

    ವಿರಾಟ್​ ಕೊಹ್ಲಿಯನ್ನು ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿದ್ದು ನಾನಲ್ಲ; ಕೊನೆಗೂ ಮೌನ ಮುರಿದ ಸೌರವ್ ಗಂಗೂಲಿ

    ನವದೆಹಲಿ: ಭಾರತ ಕ್ರಿಕೆಟ್​ ತಂಡ ಶ್ರೇಷ್ಠ ನಾಯಕರಲ್ಲಿ ವಿರಾಟ್​ ಕೊಹ್ಲಿ ಕೂಡ ಒಬ್ಬರು. ಅವರ ನಾಯಕತ್ವದಲ್ಲಿ ತಂಡವು ದೇಶ ಹಾಗೂ ವಿದೇಶಗಳಲ್ಲಿ ಅನೇಕ ಸರಣಿಗಳನ್ನು ಗೆದ್ದು ಐಸಿಸಿ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶವನ್ನು ನೀಡಿತ್ತು. 2021ರಲ್ಲಿ ನಡೆದ ಟಿ-20 ವಿಶ್ವಕಪ್​ ಬಳಿಕ ಅವರು ನಾಯಕತ್ವವನ್ನು ತೊರೆದರು. ಇದಾದ ಬಳಿಕ ಅವರನ್ನು ಏಕದಿನ ಹಾಗೂ ಟೆಸ್ಟ್ ನಾಯಕತ್ವದಿಂದ ವಜಾ ಮಾಡಿ ರೋಹಿತ್​ ಶರ್ಮಾಗೆ ಕ್ಯಾಪ್ಟನ್ಸಿ ನೀಡಲಾಯಿತು.

    ಇದಾದ ಬಳಿಕ ಹಲವು ರೀತಿಯ ಅನುಮಾನಗಳು ಹುಟ್ಟಿಕೊಂಡಿದ್ದವು ಇದಕ್ಕೆ ಮುಖ್ಯ ಕಾರಣ ಅಂದು ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್​ ಗಂಗೂಲಿ ಎಂದು ಹಲವರು ದೂಷಿಸಿದ್ದರು. ಆದರೆ, ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸೌರವ್​ ಗಂಗೂಲಿ ವಿರಾಟ್​ ಕೊಹ್ಲಿಯನ್ನು ನಾಯಕತ್ವ ಸ್ಥಾನದಿಂದ ಕಳಗಿಳಿಸಲಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ಸ್ಪಷ್ಟನೆ ಕೊಡಲು ಮುಂದಾಗಿದ್ದಾರೆ.

    ಆ ಸಮಯದಲ್ಲಿ, ಕೊಹ್ಲಿ ನಾಯಕತ್ವದಿಂದ ನಿರ್ಗಮಿಸಲು ಗಂಗೂಲಿ ಪಾತ್ರವಿದೆ ಎಂದು ಹಲವರು ನಂಬಿದ್ದಾರೆ. ಆದರೆ ನನ್ನ ಪಾತ್ರ ಯಾವುದೂ ಇಲ್ಲ ಎಂದು ಹೇಳುವ ಮೂಲಕ ಮತ್ತೊಮ್ಮೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಕೊಹ್ಲಿ ಕೆಳಗಿಳಿದಿದ್ದೇಗೆ ಮತ್ತು ಅವರ ನಿರ್ಧಾರದ ಹಿಂದಿರುವ ಕಾರಣ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ.

    Virat Kohli

    ಇದನ್ನೂ ಓದಿ: ಬಾಲಿವುಡ್​ ನಟರೊಂದಿಗೆ ದೀದಿ ಮಸ್ತ್​ ಡ್ಯಾನ್ಸ್​; ವಿಡಿಯೋ ವೈರಲ್

    ನಾನು ವಿರಾಟ್​ ಅವರನ್ನು ನಾಯಕತ್ವದಿಂದ ತೆಗೆದುಹಾಕಲಿಲ್ಲ. ಇದನ್ನು ನಾನು ಸಾಕಷ್ಟು ಬಾರಿ ಸ್ಪಷ್ಟಪಡಿಸಿದ್ದೇನೆ. ಟಿ20 ಕ್ರಿಕೆಟ್​ನಲ್ಲಿ ನಾಯಕತ್ವ ವಹಿಸಲು ಕೊಹ್ಲಿಗೆ ಆಸಕ್ತಿ ಇರಲಿಲ್ಲ. ಆದ್ದರಿಂದ, ವಿರಾಟ್ ಟಿ20 ತ್ಯಜಿಸುವ ನಿರ್ಧಾರ ತೆಗೆದುಕೊಂಡರು. ನಿಮಗೆ ಟಿ20ಗೆ ಕ್ಯಾಪ್ಟನ್ ಆಗುವ ಆಸಕ್ತಿ ಇಲ್ಲದಿದ್ದರೆ, ನೀವು ಸಂಪೂರ್ಣ ವೈಟ್-ಬಾಲ್ ನಾಯಕತ್ವದಿಂದ ಹಿಂದೆ ಸರಿಯುವುದು ಉತ್ತಮ. ಟೆಸ್ಟ್​ನಲ್ಲಿ ನೀವೇ ನಾಯಕನಾಗಿರಿ ಎಂದು ಹೇಳಿದ್ದೆ. ಆದರೆ ಅವರು ಟೆಸ್ಟ್​ನಿಂದಲೂ ಕ್ಯಾಪ್ಟನ್ಸಿ ತೊರೆದರು ಎಂದು ಗಂಗೂಲಿ ಹೇಳಿದ್ದಾರೆ.

    ಕೊಹ್ಲಿ ನಾಯಕತ್ವದಲ್ಲಿ ಭಾರತ 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಫೈನಲ್ ಸೋಲನುಭವಿಸಿತು. ಅವರ ನಾಯಕತ್ವದಲ್ಲೇ 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿತ್ತು. ಏಕದಿನ ನಾಯಕತ್ವದಿಂದ ತೆಗೆದುಹಾಕಲ್ಪಟ್ಟ ನಂತರ ಕೊಹ್ಲಿ 2022ರ ಜನವರಿಯಲ್ಲಿ ಟೆಸ್ಟ್ ನಾಯಕತ್ವ ತ್ಯಜಿಸಿ ಆಶ್ಚರ್ಯಗೊಳಿಸಿದ್ದರು. ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ. ಅವರ ಸಾರಥ್ಯದಲ್ಲಿ ಟೀಮ್ ಇಂಡಿಯಾ 48 ಟೆಸ್ಟ್ ಪಂದ್ಯಗಳಲ್ಲಿ 40 ಪಂದ್ಯಗಳನ್ನು ಗೆದ್ದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts