More

    ಚುನಾವಣೆಯಲ್ಲಿ ಸೋಲು; ಬಿಜೆಪಿ EVM ಹ್ಯಾಕ್​ ಮಾಡಿ ಗೆದ್ದಿದೆ ಎಂದ ಹಿರಿಯ ಕಾಂಗ್ರೆಸ್​ ನಾಯಕ

    ಭೋಪಾಲ್: ಇತ್ತೀಚಿಗೆ ಮುಕ್ತಾಯಗೊಂಡ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್​ಗಢದಲ್ಲಿ ಪ್ರಚಂಡ ದಿಗಿ್ವಜಿಯ ಸಾಧಿಸಿದ್ದು, ಮುಂದಬರುವ ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ದತೆ ಆರಂಭಿಸಿದೆ. ಆದರೆ, ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್​ ಬಿಜೆಪಿ ಮತಯಂತ್ರಗಳನ್ನು ಹ್ಯಾಕ್​ ಮಾಡಿ ಗೆದ್ದಿದೆ ಎಂದು ಆರೋಪ ಮಾಡಿದೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಹಿರಿಯ ಕಾಂಗ್ರೆಸ್​ ನಾಯಕ, ರಾಜ್ಯಸಭಾ ಸದಸ್ಯ ದಿಗ್ವಿಜಯ್​ ಸಿಂಗ್​ ಚಿಪ್ ಹೊಂದಿರುವ ಯಾವುದೇ ಯಂತ್ರವನ್ನು ಹ್ಯಾಕ್ ಮಾಡಬಹುದು. ನಾನು 2003 ರಿಂದ EVM ಮೂಲಕ ಮತದಾನ ಮಾಡುವುದನ್ನು ವಿರೋಧಿಸಿದ್ದೇನೆ. ಇದಲ್ಲದೆ ಫಲಿತಾಂಶ ಪ್ರಕಟವಾಗುವ ಎರಡು ದಿನಕ್ಕೂ ಮುನ್ನ ಬಿಜೆಪಿ ನಾಯಕರೊಬ್ಬರು ನಿಕಟವಾಗಿ ಇಷ್ಟು ಸ್ಥಾನಗಳಲ್ಲಿ ಜಯ ಗಳಿಸುತ್ತೇವೆಂದು ಹೇಳಿದ್ದರು.

    Digvijay Tweet

    ಇದನ್ನೂ ಓದಿ: ಸಕಲ ಸರ್ಕಾರಿ ಗೌರವಗಳೊಂದಿಗೆ ಕ್ಯಾಪ್ಟನ್ ಅರ್ಜುನನ ಅಂತ್ಯಕ್ರಿಯೆ; ಪ್ರೀತಿಯ ಆನೆಗೆ ಮಾವುತರಿಂದ ಭಾವುಕ ವಿದಾಯ

    ನಮ್ಮ ಭಾರತೀಯ ಪ್ರಜಾಪ್ರಭುತ್ವವನ್ನು ವೃತ್ತಿಪರ ಹ್ಯಾಕರ್‌ಗಳಿಂದ ನಿಯಂತ್ರಿಸಲು ನಾವು ಅನುಮತಿಸಬಹುದೇ. ಇದು ಎಲ್ಲಾ ರಾಜಕೀಯ ಪಕ್ಷಗಳು ಪರಿಹರಿಸಬೇಕಾದ ಮೂಲಭೂತ ಪ್ರಶ್ನೆಯಾಗಿದೆ. ಗೌರವಾನ್ವಿತ ಇಸಿಐ ಮತ್ತು ಸರ್ವೋಚ್ಚ ನ್ಯಾಯಾಲಯಕ್ಕೆ ದಯವಿಟ್ಟು ನಮ್ಮ ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸುವಿರಾ ಎಂದು ಪ್ರಶ್ನಿಸಿದ್ದಾರೆ.

    ಇತ್ತ ಕಾಂಗ್ರೆಸ್​ ನಾಯಕನ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು ಪ್ರತಿಬಾರಿ ನೀವು ಚುನಾವಣೆಯಲ್ಲಿ ಸೋತಾಗಲೂ ಈ ರೀತಿಯ ಆರೋಪಗಳನ್ನು ಮಾಡುವುದು ಸರಿಯಲ್ಲ. ಗೆದ್ದಾಗ ಜನಾದೇಶ ಎನ್ನುವ ನೀವು ಸೋತಾಗ EVMಅನ್ನು ಯಾಕೆ ದೂಷಿಸುತ್ತೀರಾ. ತಮ್ಮ ಕಡೆಯಿಂದ ಆದ ತಪ್ಪುಗಳನ್ನು ಮರೆಮಾಚಲು ಕಾಂಗ್ರೆಸ್​ನವರು ಈ ರೀತಿಯ ಆರೋಪಗಳನ್ನು ಮಾಡುತ್ತಾರೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ತಿರುಗೇಟು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts