ನಾನು ಮತ್ತೆ ಎಂದಿಗೂ ಏರ್ ಇಂಡಿಯಾದಲ್ಲಿ ಪ್ರಯಾಣಿಸುವುದಿಲ್ಲ: ವಿಮಾನ ದುರಂತ ನಂತರ ನಿರ್ಧಾರ ತೆಗೆದುಕೊಂಡ ಡೇವಿಡ್ ವಾರ್ನರ್ david warner

David Warner
Published on

david warner:  ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಅಪಘಾತಕ್ಕೀಡಾಗಿದ್ದು, 12 ಸಿಬ್ಬಂದಿ ಸೇರಿದಂತೆ 242 ಜನರು ವಿಮಾನದಲ್ಲಿದ್ದರು. ದುರಂತದಲ್ಲಿ 242 ಜನರಲ್ಲಿ 241 ಜನರು ಸಾವನ್ನಪ್ಪಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ ಈ ವಿಮಾನ ದುರಂತದಿಂದ ಆಘಾತಗೊಂಡ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಸ್ಟೋರಿಯನ್ನು ಶೇರ್‌ ಮಾಡಿದ್ದಾರೆ.

ಭವಿಷ್ಯದಲ್ಲಿ ಏರ್ ಇಂಡಿಯಾದಲ್ಲಿ ಪ್ರಯಾಣಿಸದಿರಲು ನಿರ್ಧರಿಸಿದ್ದಾರೆ. ಏರ್ ಇಂಡಿಯಾದ ಹಳೆಯ ವಿಮಾನಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ನಿರ್ಧಾರವನ್ನು ಘೋಷಿಸಿದ್ದಾರೆ.

ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಹೃದಯವಿದ್ರಾವಕ ಘಟನೆಯ ನಂತರ ಡೇವಿಡ್ ವಾರ್ನರ್ ಸ್ವತಃ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ,  ಮೊದಲನೆಯದಾಗಿ ಈ ಇಡೀ ಘಟನೆಯನ್ನು ದುಃಖಕರವಾಗಿದೆ.  ನಾನು ನನ್ನ ಇಡೀ ಕುಟುಂಬದೊಂದಿಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸಲು ಉದ್ದೇಶಿಸಿದ್ದೆ, ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ. ನಾನು ಮತ್ತೆ ಎಂದಿಗೂ ಏರ್ ಇಂಡಿಯಾದಲ್ಲಿ ಪ್ರಯಾಣಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಡೇವಿಡ್ ವಾರ್ನರ್ ಅವರ ಈ ಹೇಳಿಕೆಗೆ ಕಾರಣ ಏರ್ ಇಂಡಿಯಾದ ಮಾಜಿ ಸಿಬ್ಬಂದಿಯೊಬ್ಬರು ದೋಷಪೂರಿತ ವಿಮಾನಗಳ ನಿರಂತರ ಬಳಕೆಯ ಬಗ್ಗೆ ಮಾಡಿದ ಆರೋಪ. ವಾರ್ನರ್ ಮತ್ತೊಂದು ಬೋಯಿಂಗ್ ವಿಮಾನ ಅಪಘಾತಕ್ಕೀಡಾಗಿದೆ ಎಂದು ತಿಳಿಸಿದ ಮತ್ತೊಂದು ಸುದ್ದಿಯನ್ನು ಪೋಸ್ಟ್ ಮಾಡಿದ್ದಾರೆ. ಈ ರೀತಿ ಮುಗ್ಧ ಜನರ ಜೀವದ ಜೊತೆ ಆಟವಾಡುವ ಮೂಲಕ ಲಾಭ ಗಳಿಸುವುದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ವಾರ್ನರ್ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net