Plane Crash: ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಅಪಘಾತಕ್ಕೀಡಾಗಿದ್ದು, 12 ಸಿಬ್ಬಂದಿ ಸೇರಿದಂತೆ 242 ಜನರು ವಿಮಾನದಲ್ಲಿದ್ದರು.
ದುರಂತದಲ್ಲಿ ಹ 242 ಜನರಲ್ಲಿ 241 ಜನರು ಸಾವನ್ನಪ್ಪಿದ್ದಾರೆ. ಬದುಕುಳಿದ ಏಕೈಕ ವ್ಯಕ್ತಿ ವಿಶ್ವಶ್ ಕುಮಾರ್ ರಮೇಶ್ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೂರತ್‌ನಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು ಲಂಡನ್‌ಗೆ ಹೊರಟಿದ್ದ ಜೋಡಿಯೊಂದು ಸಾವನ್ನಪ್ಪಿದ್ದಾರೆ.
ವಿಭೂತಿ ಲಂಡನ್‌ನಲ್ಲಿ ಫಿಸಿಯೋಥೆರಪಿ ಮಾಸ್ಟರ್ಸ್ ಮಾಡುತ್ತಿದ್ದರು. ಹಾರ್ದಿಕ್ ಲಂಡನ್‌ನಲ್ಲಿ ಅಮೆಜಾನ್ ಉದ್ಯೋಗಿಯಾಗಿದ್ದರು. ಅಲ್ಲಿಯೇ ಭೇಟಿಯಾಗಿ, ಇಬ್ಬರ ನಡುವೆ ಲವ್ ಶುರುವಾಗಿತ್ತು. 10 ದಿನ ರಜೆ ಹಾಕಿ ಎಂಗೇಜ್‌ಮೆಂಟ್ ಮಾಡಿಕೊಳ್ಳಲು ಊರಿಗೆ ಬಂದಿದ್ದರು.
ಎಂಗೇಜ್‌ಮೆಂಟ್ ಮುಗಿಸಿ ಮದುವೆಯ ಕನಸು ಕಂಡಿದ್ದ ಜೋಡಿ ಲಂಡನ್‌ಗೆ ವಾಪಸ್ ಆಗುವಾಗ ವಿಮಾನ ದುರಂತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.
‘ನೀನು ಸುಂದರಿಯಲ್ಲ’: ಕೋಪದಲ್ಲಿ ಗಂಡನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತ್ನಿ..wife