ಮುಂಬೈ: ನಟಿ ಕಮ್ ರಾಜಕಾರಣಿ ಕಂಗನಾ ರಣಾವತ್, ಸಿನಿಮಾ ವಿಚಾರಗಳಿಗೆ ಅಥವಾ ರಾಜಕೀಯ ಹೇಳಿಕೆಗಳ ಮೂಲಕ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಇದೀಗ ಅಂತದ್ದೆ ವಿಚಾರದಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಹೌದು, ಇದೀಗ ಬಾಲಿವುಡ್ ನಿರ್ಮಾಪಕ ಕಮ್ ನಿರೂಪಕ ಕರಣ್ ಜೋಹರ್ ಅವರ ಕಾಲೆಳೆಯುವ ಮೂಲಕ ಬಿ-ಟೌನ್ನಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಇತ್ತೀಚಿಗೆ ನಡೆಸಿದ ಮೂಸಿಕಲ್ ರಿಯಾಲಿಟಿ ಶೋನ ಇಂಡಿಯನ್ ಐಡಲ್ 15ರ ಕಾರ್ಯಕ್ರಮದಲ್ಲಿ ಕಂಗನಾ ಭಾಗವಹಿಸಿದ್ದರು.
ಇದನ್ನೂ ಓದಿ: ಉಜಿರೆ ಫ್ರೆಂಡ್ಸ್, ಎಸ್‌ಡಿಎಂ ತಂಡ ಪ್ರಥಮ : ವಿದ್ವತ್ ಟ್ರೋಫಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ
ಈ ಕಾರ್ಯಕ್ರಮದ ಬಳಿಕ ಸಂದರ್ಶನದಲ್ಲಿ ಧರ್ಮ ಪ್ರೋಡಕ್ಷನ್ಲ್ಲಿ ಕೆಲಸ ಮಾಡಲು ಇಷ್ಟ ಇದೆಯೇ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ ರಣಾವತ್, ‘’ ನಾನು ಈ ರೀತಿ ಹೇಳುತ್ತಿದ್ದೇನೆಂದು ಕ್ಷಮಿಸಿ. ಕರಣ್ ಜೋಹರ್ ಬೇಕಾದರೆ ನನ್ನ ಚಿತ್ರದಲ್ಲಿ ನಟಿಸಲಿ, ಅವರಿಗೆ ಒಳ್ಳೆಯ ಪಾತ್ರ ನೀಡುವೆ. ಅದು ತುಂಬಾ ಒಳ್ಳೆಯ ಚಲನಚಿತ್ರವಾಗಿಲಿದೆ’’ ಎಂದು ನಿರ್ಮಾಪಕ ಕರಣ್ ಜೋಹರ್ ಕಾಲೆಳೆದ್ದಾರೆ.
ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, ಕೆಲ ವೈಯಕ್ತಿಕ ಕಾರಣಗಳಿಂದ ನಟಿ ಕಂಗನಾ ಮತ್ತು ಕರಣ್ ಜೋಹರ್ಗೆ ಹೊಂದಣಿಕೆ ಇಲ್ಲ.ಈ ಹಿಂದೆ ಕೆಲ ವಿಚಾರಗಳಿಗೆ ಇಬ್ಬರೂ ಒಬ್ಬರ ಮೇಲೆ ಮತ್ತೊಬ್ಬರು ಟೀಕೆ ಮಾಡುತ್ತಲೇ ಬಂದಿದ್ದಾರೆ. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿನ ಕೆಲ ವಿಷಯಗಳನ್ನಿಟ್ಟುಕೊಂಡು ಕರಣ್ನನ್ನು ಕಂಗನಾ, ‘’ಸ್ವಜನಪಕ್ಷಪಾತಿ’’ ಎಂದು ಕುಟಿಕಿದ್ದರು.
ಇದನ್ನೂ ಓದಿ: ರಶ್ಮಿಕಾರಿಂದ ‘ಸಿಕಂದರ್’ ಚಿತ್ರೀಕರಣ ನಿಲ್ಲಿಸಿದ ಚಿತ್ರತಂಡ; ಕಾರಣ ಹೀಗಿದೆ.. | Rashmika Mandanna
ಕಂಗನಾ ತನ್ನ ಮುಂಬರುವ ಚಲನಚಿತ್ರ ಎಮರ್ಜೆನ್ಸಿ (Emergency) ಸಿನಿಮಾ ಪ್ರಚಾರಕ್ಕಾಗಿ ಇಂಡಿಯನ್ ಐಡಲ್‌ನಲ್ಲಿದ್ದರು, ಚಿತ್ರದಲ್ಲಿ ಅವರು ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ 17ರಂದು ಚಿತ್ರ ಬಿಡುಗಡೆಗೊಳ್ಳಲಿದೆ. (ಏಜೆನ್ಸೀಸ್)
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಜಗತ್ತಿನ ಅತಿ ದೊಡ್ಡ ವಿಮಾನ ನಿಲ್ದಾಣ: ವರದಿ | Airport