

ದೆಹಲಿ: ಮಾಜಿ ಪ್ರಧಾನಿ(Ex-PM) ದಿವಂಗತ ಡಾ.ಮನಮೋಹನ್ ಸಿಂಗ್ ಅವರು ಗುರುವಾರ ನಿಧನರಾಗಿದ್ದು, ವಿಶ್ವದಾದ್ಯಂತ ಹಲವು ನಾಯಕರು ಮನಮೋಹನ್ ಅವರಿಗೆ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.
ಇದರ ನಡುವೆ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಸಿಂಗ್ ಅವರ ಜತೆಗಿನ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಈ ಘಟನೆಯು ಮನಮೋಹನ್ ಸಿಂಗ್ ಅವರ ವೈಯಕ್ತಿಕ ಮತ್ತು ಅವರ ಮಾನವೀಯ ಭಾಗವನ್ನು ತೋರಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.
ರಾಜಕೀಯ ಷಡ್ಯಂತ್ರದಿಂದ ನಾನು ಜೈಲಿನಲ್ಲಿದ್ದಾಗ, ನನ್ನ ಮಕ್ಕಳ ಓದಿಗಾಗಿ ಬೋಧನ ಶುಲ್ಕ ಪಾವತಿಸಲು ಮುಂದಾಗಿದ್ದರು'' ಎಂದು ಮನಮೋಹನ್ ಸಿಂಗ್ ಅವರ ಬಗ್ಗೆ ಪಿಎಂ ಅನ್ವರ್ ಕೊಂಡಡಿದ್ದಾರೆ.
ಈ ಕುರಿತು ತಮ್ಮ ಎಕ್ಸ್ನಲ್ಲಿ ಬರೆದುಕೊಂಡಿರುವ ಪಿಎಂ ಅನ್ವರ್, ನಾವಿಬ್ಬರೂ 1990 ರ ದಶಕದಲ್ಲಿ ಹಣಕಾಸು ಮಂತ್ರಿಗಳಾಗಿ ಸೇವೆ ಸಲ್ಲಿಸಿದಾಗ ಈ ಪರಿವರ್ತನಾ ನೀತಿಗಳ ಆರಂಭಿಕ ವರ್ಷಗಳನ್ನು ನೇರವಾಗಿ ವೀಕ್ಷಿಸುವ ಅಪರೂಪದ ಸವಲತ್ತು ಹೊಂದಿದ್ದೇವು. ಭ್ರಷ್ಟಾಚಾರದ ವಿರುದ್ಧದ ಸಮರಕ್ಕೆ ನಾವು ಉತ್ಕಟ ಬದ್ಧತೆಯನ್ನು ಹಂಚಿಕೊಂಡಿದ್ದೇವೆ ಎಂದಿದ್ದಾರೆ.
ಡಾ. ಮನಮೋಹನ್ ಸಿಂಗ್, ರಾಜಕಾರಣಿಯಾಗಿ ಸ್ವಲ್ಪ ವಿಚಿತ್ರವಾದರೂ, ನಿರ್ವಿವಾದವಾಗಿ ನೇರ, ದೃಢ ಮತ್ತು ರಾಜನೀತಿಜ್ಞರಾಗಿ ದೃಢನಿಶ್ಚಯವುಳ್ಳವರು, ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವ ಪರಂಪರೆಯನ್ನು ಅವರು ಬಿಟ್ಟು ಹೋಗಿದ್ದಾರೆ ಎಂದು ಹೇಳಿದ್ದಾರೆ.
ಅನೇಕ ಜನರಿಗೆ ಇದು ತಿಳಿದಿಲ್ಲ, ಮತ್ತು ನಾನು ಇದನ್ನು ಮಲೇಷಿಯನ್ನರೊಂದಿಗೆ ಹಂಚಿಕೊಳ್ಳುವ ಸಮಯ ಬಂದಿದೆ. ನನ್ನ ಸೆರೆವಾಸದ ವರ್ಷಗಳಲ್ಲಿ, ಅವರು ಮಾಡಬೇಕಿಲ್ಲದ ದಯೆಯನ್ನು ಮಾಡಲು ಮುಂದಾಗಿದ್ದರು. ಹೌದು, ನನ್ನ ಮಕ್ಕಳ ಶಾಲೆಯ ಬೋಧನ ಶುಲ್ಕ ಭರಸಲು ಮುಂದಾಗಿದ್ದರು. ಆದರೆ, ಆ ಸಮಯ ಅಂದಿನ ಸರ್ಕಾರಿಂದ ಅಪಾಯದಲ್ಲಿತ್ತು. ಇಂತಹ ಸಂದರ್ಭದಲ್ಲಿ ಅವರು ಸಹಾಯ ಮಾಡಲು ಮುಂದಾಗಿದ್ದರು. ಆದರೆ, ಅವತ್ತಿನ ಪರಿಸ್ಥಿತಿಯಲ್ಲಿ ನಾನು ಅವರ ಸಹಾಯವನ್ನು ತಿರಸ್ಕರಿಸಿದೆ ಎಂದು ಬರೆದುಕೊಂಡಿದ್ದಾರೆ,(ಏಜೆನ್ಸೀಸ್).