ನವಮಂಗಳೂರು ಬಂದರಿಗೆ ಆಗಮಿಸಿದ ಸೆವೆನ್ ಸೀಸ್ ವಾಯೇಜರ್ ಹೆಸರಿನ  ಐಷಾರಾಮಿ ನೌಕೆ

mng--27 Dec NMPA CRUSE
Published on

ಮಂಗಳೂರು: ನವಮಂಗಳೂರು ಬಂದರಿಗೆ ಸೆವೆನ್ ಸೀಸ್ ವಾಯೇಜರ್ ಹೆಸರಿನ ಎರಡನೇ ಐಷಾರಾಮಿ ನೌಕೆ ಶುಕ್ರವಾರ ಆಗಮಿಸಿದೆ.

ಬಹಮೇನ್‌ನ ಈ ಐಷಾರಾಮಿ ನೌಕೆಯನ್ನು ನವಮಂಗಳೂರು ಬಂದರು ಪ್ರಾಧಿಕಾರದ ಅಧಿಕಾರಿಗಳು ಬರಮಾಡಿಕೊಂಡರು. ಹೆಸರಾಂತ ನೇರ್ವೇಜಿನ್ ಕ್ರೂಸ್‌ಲೈನ್‌ನ ಭಾಗವಾಗಿರುವ ಈ ನೌಕೆ ಬೆಳಗ್ಗೆ ಆಗಮಿಸಿ ಸಂಜೆ ನಿರ್ಗಮಿಸಿದೆ.

ಸುಮಾರು 650 ಮಂದಿ ಪ್ರಯಾಣಿಕರು ಮತ್ತು 450 ಮಂದಿ ಸಿಬ್ಬಂದಿಗಳೊಂದಿಗೆ ಈ ನೌಕೆ ಫುಜೈರಾದಿಂದ ಕೊಲಂಬೋ, ಮುಂಬೈ, ಗೋವಾ, ಮಂಗಳೂರು ಆಗಿ ಕೊಚ್ಚಿನ್ ಮೂಲಕ ಪ್ರಯಾಣ ಮುಂದುವರಿಸಿದೆ. ನೌಕೆಯಲ್ಲಿನ ಪ್ರವಾಸಿಗರು ಕಾರ್ಕಳ ಗೊಮ್ಮಟೇಶ್ವರ, ಸಾವಿರ ಕಂಬದ ಬಸದಿ, ಸೋನ್ಸ್ ಫಾರ್ಮ್, ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸ್ಥಳೀಯ ಮಾರ್ಕೆಟ್‌ಗೆ ಭೇಟಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net