

ಲಾಸ್ ಏಂಜಲೀಸ್: ಕೆನಡಾದ ಪ್ರಸಿದ್ದ ಚಲನಚಿತ್ರ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಇತ್ತೀಚನ ದಿನಗಳಲ್ಲಿ ಸಂಚಲನವನ್ನುಂಟು ಮಾಡಿರುವ ಕೃತಕ ಬುದ್ದಿಮತ್ತೆಯ ಅಪಾಯಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಜೇಮ್ಸ್ 1984ರಲ್ಲಿ ಅವರ ನಿರ್ದೇಶನದ ಬ್ಲಾಕ್ಬಸ್ಟರ್ ಚಿತ್ರ ದಿ ಟರ್ಮಿನೇಟರ್ ಒಂದು ಎಚ್ಚರಿಕೆಯಾಗಿ ಕಾರ್ಯನಿರ್ವಹಿಸಬೇಕಿತ್ತು. ಮುಂದಿನ ದಿನಗಳಲ್ಲಿ AI ದುರಂತಕ್ಕೆ ಕಾರಣವಾಗಬಹುದು ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ನಾನು 1984ರಲ್ಲಿ ಬಿಡುಗಡೆಯಾದ ನನ್ನ ನಿರ್ದೇಶನದ ದಿ ಟರ್ಮಿನೇಟರ್ ಚಿತ್ರದಲ್ಲಿ ಕೃತಕ ಬುದ್ದಿಮತ್ತೆ(AI) ಸಂಭಾವ್ಯ ಅಪಾಯಗಳ ಬಗ್ಗೆ ಎಚ್ಚರಿಸಿದ್ದೆ. ಆಗ ಯಾರು ನನ್ನ ಮಾತನ್ನು ಕೇಳಲಿಲ್ಲ. ಈಗ ಅದು ಬಂದು ನಮ್ಮ ಮುಂದೆ ನಿಂತಿದೆ.
ನನ್ನ ಪ್ರಕಾರ AIಗೆ ಆಯುಧಗಳನ್ನು ಒಳಪಡಿಸುವುದು ಹೆಚ್ಚು ಅಪಾಯಕಾರಿ. ಅದು ಪರಮಾಣುಗಿಂತ ಹೆಚ್ಚು ಪರಿಣಾಮಕಾರಿಯಾಗಿದ್ದು, ಶಸ್ತ್ರಾಸ್ತ್ರಾಗಳಿಗೆ ಪ್ರಬಲ ಪೈಪೋಟಿ ಒಡ್ಡುತ್ತದೆ. ಈ ತಹರದ ವಿಚಾರಗಳ ಬಗ್ಗೆ ನಾವು ಖಂಡಿತವಾಗಿಯೂ ಯೋಚಿಸಬೇಕು ಎಂದಿದ್ದಾರೆ.
ಒಂದು ವೇಳೆ ಯುದ್ದಭೂಮಿಯಲ್ಲಿ ಕೃತಕ ಬುದ್ದಿಮತ್ತೆಯನ್ನು ತಂದರೆ ಮನುಷ್ಯರು ಕಂಪ್ಯೂಟರ್ ವೇಗದಲ್ಲಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಜೇಮ್ಸ್ ಕ್ಯಾಮರೂನ್ ಎಚ್ಚರಿಸಿದ್ದಾರೆ.