More

    ಹಿಂದೆ ಮಹಿಳೆ ಕೂತಿದ್ದಾಗಲೇ ಹಸ್ತ ಮೈಥುನ ಮಾಡಿಕೊಂಡ ರ್‍ಯಾಪಿಡೋ ಬೈಕ್​ ಚಾಲಕ! ಮುಂದೇನಾಯ್ತು?

    ಬೆಂಗಳೂರು: ರ್‍ಯಾಪಿಡೋ ಬೈಕ್​ ಚಾಲಕನೋರ್ವ ಮಹಿಳಾ ಪ್ರಯಾಣಿಕರ ಎದುರಲ್ಲೇ ಅಸಭ್ಯವಾಗಿ ವರ್ತಿಸಿ ಬಳಿಕ ಅವರ ವಾಟ್ಸ್​ಅಪ್​ಗೆ ಮೆಸ್ಸೇಜ್​ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಪ್ರಕರಣ ಸಂಬಂಧ ಎಸ್​ಜೆ ಪಾರ್ಕ್​ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಆರೋಪಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಸಂತ್ರಸ್ತ ಮಹಿಳೆ ಜುಲೈ 21ರಂದು ಗಲಭೆ ಪೀಡಿತ ಮಣಿಪುರದಲ್ಲಿ ಬುಡಕಟ್ಟು ಸಮುದಾಯದ ಹೆಣ್ಣುಮಕ್ಕಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಟೌನ್​ಹಾಲ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ಬಳಿಕ ಮಹಿಳೆ ಎಲೆಕ್ಟ್ರಾನಿಕ್ ಸಿಟಿಗೆ ಆಟೋ ಬುಕ್​ ಮಾಡಿದ್ದು ಅವರು ಆರ್ಡರ್​ ಕ್ಯಾನ್ಸಲ್​ ಮಾಡಿದ್ದಾರೆ.

    ಬಳಿಕ ರ್‍ಯಾಪಿಡೋನಲ್ಲಿ ಬೈಕ್​ ಟ್ಯಾಕ್ಸಿ ಬುಕ್​ ಮಾಡಿದ್ದು, ಆರೋಪಿಯೂ ಮಹಿಳಾ ಪ್ರಯಾಣಿಕರನ್ನು ಮಾರ್ಗಮಧ್ಯೆ ನಿರ್ಜನ ಪ್ರದೇಶದಕ್ಕೆ ಕರೆದೊಯ್ದು ಅವರ ಮುಂಭಾಗ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಇದನ್ನು ಗಮನಿಸಿದ ಮಹಿಳೆ ತಮ್ಮ ಮನೆ 200 ಮೀಟರ್​ ದೂರ ಇರಬೇಕಾದರೆ ಗಾಡಿಯನ್ನು ನಿಲ್ಲಿಸುವಂತೆ ಸೂಚಿಸಿದ್ದರು ಸಹ ಆತ ಅವರ ಮಾತನ್ನು ಕೇಳದೆ ಅವರ ನಿವಾಸದ ಮುಂಭಾಗ ತೆರಳಿದ್ದಾನೆ.

    ಇದನ್ನೂ ಓದಿ: VIDEO| ಹೆಣ್ಣಿಗೆ ಹೆಣ್ಣೇ ಶತ್ರು; ಮಹಿಳೆಯರ ಬೆತ್ತಲೆ ಮೆರವಣಿಗೆ

    ಬಳಿಕ ಆರೋಪಿಯೂ ಅವರ ವೈಯಕ್ತಿಕ ದೂರವಾಣಿ ನಂಬರ್​ಗೆ ಕರೆ ಮಾಡಲು ಶುರು ಮಾಡಿದ್ದು, ವಾಟ್ಸ್​ಅಪ್​ನಲ್ಲಿ ಮೆಸ್ಸೇಜ್​ ಮಾಡಿದ್ದಾನೆ. ಈ ಸಂಬಂಧ ಮಹಿಳೆ ಎಚ್ಚರಿಕೆ ನೀಡಿದ್ದರು ಸಹ ಆತ ಮೆಸ್ಸೇಜ್​ ಮತ್ತು ಕರೆ ಮಾಡುವುದನ್ನು ನಿಲ್ಲಿಸದೆ ಇರುವುದನ್ನು ನೋಡಿ ಬ್ಲಾಕ್​ ಮಾಡಿದ್ದಾರೆ.

    ಈ ಸಂಬಂಧ ಮಹಿಳೆ ಟ್ವೀಟ್​ ಮಾಡಿ ರ್‍ಯಾಪಿಡೋ ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ್ದು, ಪ್ರಕರಣ ಸಂಬಂಧ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯಿಸಿದ್ದು ಎಸ್​ಜೆಪಾರ್ಕ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts