ನನ್ನ ಪತಿಯೊಂದಿಗೆ ಕುಂಭಮೇಳಕ್ಕೆ ಹೋಗಬೇಕು: SBI ಠೇವಣಿ ಸ್ಲಿಪ್​ನಲ್ಲಿ ಮಹಿಳೆ ಬರಹ ವೈರಲ್​..

dk (6) (1)
Published on

ಬ್ಯಾಂಕ್​ಗಳಲ್ಲಿ ಹಣವನ್ನು ಖಾತೆಗೆ ಜಮಾ ಮಾಡಲು ಮತ್ತು ಹಿಂಪಡೆಯವ ಮುನ್ನ ಠೇವಣಿ ಚೀಟಿಯಲ್ಲಿ ನಗದು ದಾಖಲಿಸುಲು ಹಲವರು ಪರದಾಡುತ್ತಿರುವುದನ್ನು ನಾವು ಕಂಡಿದ್ದೇವೆ. ಸಾಮಾನ್ಯರು ಅಲ್ಪಸಲ್ಪ ಅರ್ಥವಾದಷ್ಟು ಬರೆದುಕೊಂಡು ಬ್ಯಾಂಕ್​​ಗೆ ನೀಡುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆ ಠೇವಣಿ ರಸೀದಿಯಲ್ಲಿ ಅಸಂಬದ್ಧ ಪದಗಳನ್ನು ತುಂಬಿದ ಹಿನ್ನೆಲೆ ಸೋಷಿಯಲ್​​ ಮೀಡಿಯಾದಲ್ಲಿ ಭಾರಿ ವೈರಲ್​ ಆಗಿದೆ.

ಈ ವೈರಲ್​ ಆಗಿರುವ ಠೇವಣಿ ರಸೀದಿ SBI ಬ್ಯಾಂಕ್​ಗೆ ಸಂಬಂಧಪಟ್ಟಿದೆ. ರಸೀದಿಯಲ್ಲಿ ಸಾಮಾನ್ಯವಾಗಿ ದಿನಾಂಕ, ಖಾತೆ ಸಂಖ್ಯೆ, ಖಾತೆದಾರರ ಹೆಸರು ಮತ್ತು ಮೊತ್ತವನ್ನು ಹೆಸರಿಸುವಂತೆ ತಿಳಿಸಲಾಗಿರುತ್ತದೆ. ಆದರೆ ಈ ಮಹಿಳೆ ಅಸಂಬದ್ಧ ಪದಗಳನ್ನು ತುಂಬಿದ ಹಿನ್ನೆಲೆ ನೆಟ್ಟಿಜನ್ಸ್​(ಸಾಮಾಜಿಕ ಜಾಲತಾಣ ಬಳಕೆದಾರರು) ತರೆಹವಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ.

ವೈರಲ್​ ಆಗಿರುವ ರಸೀದಿಯಲ್ಲಿ ಏನಿದೆ..?

ರಸೀದಿಯೂ ಎಸ್​ಬಿಐ ಬ್ಯಾಂಕ್​ಗೆ ಸಂಬಂಧಸಿದೆ ಎನ್ನಲಾಗಿದ್ದು, ದಿನಾಂಕ ಸ್ಥಳದಲ್ಲಿ 29.01.2025 ಎಂದು ನಮೂದಿಸಲಾಗಿದೆ. ಮೇಲ್ನೋಟಕ್ಕೆ ನೋಡುವುದಾರೆ 29 ದಿನಾಂಕ ಇನ್ನು ಬಂದಿಲ್ಲ. ಆದರೆ, ರಸೀದಿಯಲ್ಲಿ ದಾಖಲಿಸಲಾಗಿದೆ. ಆದ್ದರಿಂದ ಈ ರಸೀದಿ ನಕಲಿ ಎಂದು ಹೇಳಲಾಗುತ್ತಿದೆ.

ಮುಂದುವರೆದು, ರಸೀದಿಯಲ್ಲಿ ಹೆಸರು ರಾಧಿಕ ಶರ್ಮಾ ಮತ್ತು ಖಾತೆ ಸಂಖ್ಯೆ ಬರೆಯಲಾಗಿದೆ. ಆದರೆ, ಮೊತ್ತ ಸ್ಥಳದಲ್ಲಿ ''ನಾನು ಪತಿಯೊಂದಿಗೆ ಕುಂಭಮೇಳಕ್ಕೆ ಹೋಗಬೇಕು'' ಎಂದು ಬರೆದಿದ್ದಾರೆ.

@SmartPhone19 ಎಂಬ ಇನ್ಟಾಗ್ರಾಮ್​ ಖಾತೆಯಲ್ಲಿ ಈ ರಸೀದಿಯ ಪೋಸ್ಟ್​ ಅನ್ನು ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್​ ಬಾರಿ ವೈರಲ್​ ಆಗಿದ್ದು, 1.5 ಮೀಲಿಯನ್​​ ವೀಕ್ಷಣೆಗಳನ್ನು ಪಡೆದುಕೊಂಡಿದೆ. ತರೇಹವಾರಿ ಕಾಮೆಂಟ್​ಗಳನ್ನು ಬಳಕೆದಾರು ಮಾಡಿದ್ದಾರೆ. ಇದನ್ನು ಓದಿದ ಬ್ಯಾಂಕ್​ ಮ್ಯಾನೇಜರ್​ ಕೋಮದಲ್ಲಿರುತ್ತಾರೆ ಎಂದು ನೆಟ್ಟಿಗರು ಗೇಲಿ ಮಾಡಿದ್ದಾರೆ.(ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net