ಬ್ರೆಜಿಲಿಯನ್ ಸ್ಪೋರ್ಟ್ಸ್ ಕಾರ್ ಪರಿಣಿತ ರಿಕಾರ್ಡೊ ಗೊಡೊಯ್ ಟ್ಯಾಟೋ ಹಾಕಿಸುವಾಗಲೇ ಹೃದಯ ಸ್ತಂಭನಕ್ಕೆ ಬಲಿ! ವೈದ್ಯರು ಹೇಳಿದ ಅಸಲಿ ಕಾರಣ ಇಲ್ಲಿದೆ.. | Ricardo Godoi

dk (5) (1)
Published on

ಬ್ರೆಜಿಲಿಯನ್ ಸ್ಪೋರ್ಟ್ಸ್ ಕಾರ್ ಪ್ರಭಾವಿ ರಿಕಾರ್ಡೊ ಗೊಡೊಯ್(Ricardo Godoi) ಎಂಬ 45 ವರ್ಷದ ವ್ಯಕ್ತಿ ಬೆನ್ನಿನ ಮೇಲೆ ಹಚ್ಚೆ(ಟ್ಯಾಟೋ) ಹಾಕಿಸಿಕೊಳ್ಳುತ್ತಿರುವಾಗ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಬ್ರೆಜಿಲ್‌ನ ರಿವಿಟಲೈಟ್ ಡೇ ಆಸ್ಪತ್ರೆಯಲ್ಲಿ ತಮ್ಮ ಬೆನ್ನಿನ ಮೇಲೆ ಹಚ್ಚೆ ಹಾಕಿಸಿಕೊಳ್ಳಲು ತಯಾರಿ ನಡೆಸುತ್ತಿದ್ದರು, ಅಲ್ಲಿ ಅವರಿಗೆ ಸಾಮಾನ್ಯ ಅರಿವಳಿಕೆ ನೀಡಲಾಯಿತು. ಕೆಲವು ಕ್ಷಣಗಳ ಬಳಿಕ ಅವರಿಗೆ ಹೃದಯಘಾತವಾಗಿದೆ. ವೈದ್ಯರು ಅವರನ್ನು ಬದುಕುಳಿಸುವ ಎಲ್ಲ ಪ್ರಯತ್ನಗಳು ನಡೆಸಿದರೂ ಕೊನೆಗೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಸಲಾಯಿತು ಎಂದು ಮೂಲಗಳ ತಿಳಿಸಿವೆ.

ಸ್ಟೀರಾಯ್ಡ್‌ಗಳ ಬಳಕೆಯಿಂದ ಹೃದಯ ಸ್ತಂಭನ ಉಂಟಾಗಿದೆ ಎಂದು ಆಸ್ಪತ್ರೆಯ ಮರಣ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಗೊಡೊಯ್ ಅವರ ಕುಟುಂಬವು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಕಳೆದ ಐದು ತಿಂಗಳುಗಳಲ್ಲಿ ಯಾವುದೇ ರೀತಿಯ ವಸ್ತುವನ್ನು ಬಳಸಿಲ್ಲ ಮತ್ತು ಅವರು ಶಸ್ತ್ರಚಿಕಿತ್ಸೆಗೆ ಮುನ್ನ ಆರೋಗ್ಯ ಪರೀಕ್ಷೆಗಳಲ್ಲಿ ಉತ್ತವಾಗಿದ್ದಾರೆ ಎಂದು ವೈದ್ಯರ ವರದಿಗಳು ಹೇಳಿವೆ. ಗೊಡೊಯ್ ಇನ್ನೂ ಶಸ್ತ್ರಚಿಕಿತ್ಸಾ ಮೇಜಿನ ಮೇಲೆ ಹೃದಯಾಘಾತದಿಂದ ಬಳಲುತ್ತಿದ್ದರು ಎಂದು ಕುಟಂಬಸ್ಥರು ಹೇಳಿದ್ದಾರೆ.

ರಿಕಾರ್ಡೊ ಗೊಡೊಯ್ ಮೃತ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಬ್ರೇಜಿಲ್​ನಲ್ಲಿ ವಿವಾದ ಸೃಷ್ಠಿಯಾಗಿದ್ದು, ಸಂಪೂರ್ಣ ತನಿಖೆ ಬಳಿಕ ಸತ್ಯಾಂಶ ಹೊರ ಬರಲಿದೆ ಎಂದು ಅಲ್ಲಿನ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net