

ಭಾರತ: ಆ್ಯಪಲ್ ದೈತ ಕಂಪನಿಯ ಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್ ಅವರು 1974ರಲ್ಲಿ ಭಾರತ ಕುಂಭಮೇಳ ಪ್ರವಾಸದ ಬಗ್ಗೆ ಬರೆದ ಪತ್ರ ಇದೀಗ 4.32 ಕೋಟಿ ರೂ.ಗೆ ಹರಾಜಾಗಿದೆ.
ಅಲ್ಲದೆ, ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ 2025ರ ಕುಂಭಮೇಳದಲ್ಲಿ ಸ್ಟೀವ್ಸ್ ಜಾಬ್ಸ್ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಭಾಗಿಯಾಗಿದ್ದಾರೆ. ಸದ್ಯಕ್ಕೆ ಪ್ರಯಾಗ್ ರಾಜ್ನಲ್ಲಿ ಕುಂಭಮೇಳವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇದೀಗ ಇದರ ನಡುವೇ 1974ರಲ್ಲಿ ಸ್ಟೀವ್ ಜಾಬ್ಸ್ ಅವರು ಬರೆದ ಪತ್ರ ವೈರಲ್ ಆಗುತ್ತಿದೆ. ಅಲ್ಲದೆ, ಈ ಪತ್ರ 4.32 ಕೋಟಿ ರೂ.ಗೆ ಹರಾಜಾಗಿದೆ. ಈ ಪತ್ರವನ್ನು ಬೋನ್ಸ್ ಹ್ಯಾಮ್ ಎಂಬುವವರು ಖರೀದಿಸಿದ್ದಾರೆ.
ಸ್ಟೀವ್ ಜಾಬ್ಸ್ ಮಾಜಿ ಪ್ರೇಯಸಿ ಟಿಮ್ ಬ್ರೌನ್ಸ್ಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಭಾರತ ಪ್ರವಾಸದ ಜತೆ ಅಧ್ಯಾತ್ಮಿಕದ ಬಗ್ಗೆ ಆಳವಾಗಿ ಒತ್ತಿ ಹೇಳಿದ್ದಾರೆ.
"ಟಿಮ್,
ನಾನು ನಿಮ್ಮ ಪತ್ರವನ್ನು ಹಲವು ಬಾರಿ ಓದಿದ್ದೇನೆ. ಏನು ಹೇಳಬೇಕೋ ತಿಳಿಯುತ್ತಿಲ್ಲ. ಅನೇಕ ಮುಂಜಾನೆಗಳು ಬಂದು ಹೋಗಿವೆ, ಜನರು ಬಂದು ಹೋಗಿದ್ದಾರೆ. ನಾನು ಪ್ರೀತಿಸಿದೆ ಮತ್ತು ನಾನು ಅನೇಕ ಬಾರಿ ಅಳುತ್ತಿದ್ದೆ. ಹೇಗಾದರೂ, ಅದರ ಕೆಳಗೆ ಅದು ಬದಲಾಗುವುದಿಲ್ಲ - ನಿಮಗೆ ಅರ್ಥವಾಗಿದೆಯೇ?
ನಾನು ಈಗ ಲಾಸ್ ಗ್ಯಾಟೋಸ್ ಮತ್ತು ಸಾಂಟಾ ಕ್ರೂಜ್ ನಡುವಿನ ಪರ್ವತಗಳ ಜಮೀನಿನಲ್ಲಿ ವಾಸಿಸುತ್ತಿದ್ದೇನೆ. ಏಪ್ರಿಲ್‌ನಲ್ಲಿ ಪ್ರಾರಂಭವಾಗುವ ಕುಂಭ ಮೇಳಕ್ಕೆ ನಾನು ಭಾರತಕ್ಕೆ ಹೋಗಲು ಬಯಸುತ್ತೇನೆ. ನಾನು ಮಾರ್ಚ್‌ನಲ್ಲಿ ಹೊರಡುತ್ತೇನೆ, ಇನ್ನೂ ಖಚಿತವಾಗಿಲ್ಲ. ನೀವು ಬಯಸಿದರೆ ಇಲ್ಲಿ ಪರ್ವತಗಳಲ್ಲಿ ಒಟ್ಟಿಗೆ ಬರಬಹುದು.
ನಿಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ನೀವು ನನಗೆ ಹೇಳಬಹುದು, ಅದು ನಿಮ್ಮ ಪತ್ರದಿಂದ ನನಗೆ ಸಂಪೂರ್ಣವಾಗಿ ಅರ್ಥವಾಗಲಿಲ್ಲ. ಇನ್ನೊಂದು ಕೋಣೆಯಲ್ಲಿ ಬೆಂಕಿ ಇದೆ ಮತ್ತು ನಾನು ಇಲ್ಲಿ ತಣ್ಣಗಾಗುತ್ತಿದ್ದೇನೆ. ಎಲ್ಲಿಂದ ಪ್ರಾರಂಭಿಸಬೇಕು ಎಂದು ನನಗೆ ತಿಳಿದಿಲ್ಲ ಎಂದು ಹೇಳುವ ಮೂಲಕ ನಾನು ಕೊನೆಗೊಳಿಸುತ್ತೇನೆ'' ಎಂದು ಸ್ಟೀವ್ಸ್ ಬರೆದಿದ್ದಾರೆ.
ಸ್ಟೀವ್ಸ್ ಜಾಬ್ಸ್ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಕುಂಭಮೇಳದಲ್ಲಿ ಭಾಗಿಯಾಗಿದ ಸಂದರ್ಭದಲ್ಲಿಯೇ ಪತ್ರ ಇದೀಗ ಭಾರೀ ಸದ್ದು ಮಾಡುತ್ತಿದೆ.(ಏಜೆನ್ಸೀಸ್)